India's 2nd unicorn: ಜೆಪ್ಟೋ ನಂತರ ಭಾರತದ 2ನೇ ಯುನಿಕಾರ್ನ್ ಪಟ್ಟಿಗೆ ಸೇರಲಿರುವ ಸಂಸ್ಥೆಯ ಸಿಇಒಯಿವರು!

ಭಾರತೀಯ ಫಿನ್‌ಟೆಕ್ ಸಂಸ್ಥೆ ಇನ್‌ಕ್ರೆಡ್ ಗ್ರೂಪ್‌ನ ಸಾಲ ನೀಡುವ ಅಂಗವಾದ ಇನ್‌ಕ್ರೆಡ್ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ (ಇನ್‌ಕ್ರೆಡ್ ಫೈನಾನ್ಸ್) ಯೂ, ಆನ್ ಲೈನ್ ಗ್ರೋಸರಿ ಡೆಲಿವರಿ ಸಂಸ್ಥೆ ಜೆಪ್ಟೋ ನಂತರ 2023 ರ ಯುನಿಕಾರ್ನ್ ಕ್ಲಬ್ ಸೇರಿದ ಭಾರತದ ಎರಡನೇ ಸ್ಟಾರ್ಟಪ್ ಆಗಿದೆ.

ಪ್ರಸ್ತುತ ಮ್ಯಾಕ್ರೋ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯ ನಡುವೆ ಬಂಡವಾಳವನ್ನು ಸಂಗ್ರಹಿಸಲು ಹೆಣಗಾಡುತ್ತಿರುವ ಹಲವಾರು ಕಂಪನಿಗಳಿಗೆ ಇದು ಭರವಸೆ ಹುಟ್ಟುಹಾಕಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ, ಕಂಪನಿಯ ಸಿಇಒ ಭೂಪಿಂದರ್ ಸಿಂಗ್ "ಮುಂದಿನ ವರ್ಷಗಳಲ್ಲಿ ಕಂಪನಿಯ ವಿಸ್ತರಣೆಗೆ ಈ ಬಂಡವಾಳದ ಹಣ ಸಹಾಯ ಮಾಡುತ್ತದೆ," ಎಂದು ಹೇಳಿದ್ದಾರೆ.

 2023ರ ಯುನಿಕಾರ್ನ್ ಕ್ಲಬ್‌ಗೆ ಸೇರಿದ ಸ್ಟಾರ್ಟ್‌ಅಪ್‌ನ ಸಿಇಒಯಿವರು!

"ಈ ನಿಧಿಯು ನಮ್ಮ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು ಇದು ನಮ್ಮನ್ನು ಯುನಿಕಾರ್ನ್‌ಗಳ ಶ್ರೇಣಿಗೆ ಕೊಂಡೊಯ್ಯುತ್ತದೆ. ನಮ್ಮ ಹೂಡಿಕೆದಾರರು ತೋರಿಸಿದ ಅಗಾಧ ಬೆಂಬಲಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ಈ ಇಕ್ವಿಟಿ ಬಂಡವಾಳವು ಅವಕಾಶಗಳ ಲಾಭವನ್ನು ಪಡೆಯಲು, ನಮ್ಮ ಬ್ಯಾಲೆನ್ಸ್ ಶೀಟ್ ಅನ್ನು ಬಲಪಡಿಸಲು ನಮಗೆ ಸಹಾಯ ಮಾಡುತ್ತದೆ. ಇದರೊಂದಿಗೆ ಮುಂದಿನ ಎರಡು ವರ್ಷಗಳಲ್ಲಿ ಕಂಪನಿಯ ವಿಸ್ತರಣೆಗೆ ನಮಗೆ ರನ್‌ವೇ ಒದಗಿಸಿದೆ," ಎಂದು ಹೇಳಿದ್ದಾರೆ.

ಹಣಕಾಸು ಸೇವೆಗಳ ಕಂಪನಿಯಾದ ಇನ್‌ಕ್ರೆಡ್ ಗ್ರೂಪ್‌ನ, ಸಾಲ ನೀಡುವ ಅಂಗ ಸಂಸ್ಥೆಯಾದ ಇನ್‌ಕ್ರೆಡ್ ಫೈನಾನ್ಸ್ ತನ್ನ ಸರಣಿ ಡಿ ಸುತ್ತಿನ ನಿಧಿಯಲ್ಲಿ 500 ಕೋಟಿ ರೂಪಾಯಿ ಸಂಗ್ರಹಿಸಿದೆ. ಹೀಗಾಗಿ ತ್ವರಿತಗತಿಯಲ್ಲಿ ಈ ವರ್ಷ'ಯುನಿಕಾರ್ನ್' ಕ್ಲಬ್‌ಗೆ ಪ್ರವೇಶಿಸಿದ ಎರಡನೇ ಸ್ಟಾರ್ಟ್‌ಅಪ್ ಆಗಿದೆ.

ಇನ್‌ಕ್ರೆಡ್ ಫೈನಾನ್ಶಿಯಲ್‌ನ ಇತ್ತೀಚಿನ ಮೌಲ್ಯಮಾಪನ(valuation)ದಂತೆ ಸರಿಸುಮಾರು 8,800 ಕೋಟಿ ರೂಪಾಯಿ ಅಥವಾ 1.05 ಬಿಲಿಯನ್ ಡಾಲರ್ ಆಗಿದೆ. ಕಂಪನಿಯೂ ತನ್ನ ಹೂಡಿಕೆದಾರರನ್ನು ಹೆಸರಿಸದಿದ್ದರೂ, ಜಾಗತಿಕವಾದ ಪ್ರೈವೇಟ್ ಈಕ್ವಿಟಿ (ಪಿಇ), ಕಾರ್ಪೊರೇಟ್ ಖಜಾನೆಗಳು, ಅಲ್ಟ್ರಾ-ಹೈ-ನೆಟ್-ವರ್ತ್‌ನ ವ್ಯಕ್ತಿಗಳನ್ನು ಒಳಗೊಂಡಿದೆ ಎಂದು ಹೇಳಿದೆ.

ಸರಣಿ ಡಿ ರೌಂಡ್ ಅನ್ನು ಎಂಇಎಂಜಿ ಸಂಸ್ಥೆಯ ರಂಜನ್ ಪೈ ಅವರು ಮುನ್ನಡೆಸಿದ್ದು, ಅವರು 9 ಮಿಲಿಯನ್ ಡಾಲರ್ ಹೂಡಿಕೆ ಮಾಡಿದರು. ನಂತರ ಆರ್‌ಪಿ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ ರವಿ ಪಿಳ್ಳೈ ಮತ್ತು ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ನ ಜಾಗತಿಕ ಸಹ-ಹೆಡ್ ಮತ್ತು ಡಾಯ್ಚ ಬ್ಯಾಂಕ್‌ನ ಬಿಸಿನೆಸ್ ಕಂಟ್ರೋಲ್ ಫಿಕ್ಸೆಡ್ ಇನ್ಕಮ್ ಅಂಡ್ ಕರೆನ್ಸಿಯ ಮುಖ್ಯಸ್ಥ ರಾಮ್ ನಾಯಕ್ ಅವರು ಕ್ರಮವಾಗಿ 5.4 ಮಿಲಿಯನ್ ಡಾಲರ್ ಮತ್ತು 1.2 ಮಿಲಿಯನ್ ಡಾಲರ್ ಹೂಡಿಕೆ ಮಾಡಿದರು. ಇದರೊಂದಿಗೆ ವಾರನಿಯಮ್ ಕ್ಯಾಪಿಟಲ್ ಅಡ್ವೈಸರ್ಸ್ ಮತ್ತು ಸತ್ವ ಗ್ರೂಪ್‌ನಂತಹ ಸಾಂಸ್ಥಿಕ ಹೂಡಿಕೆದಾರರು ಕೂಡಾ ನಿಧಿಸಂಗ್ರಹದ ಭಾಗವಾಗಿದ್ದಾರೆ ಎಂದು ಹೇಳಿದೆ.

500 ಕೋಟಿ ರೂಪಾಯಿಗಳ ಈಕ್ವಿಟಿ ಬಂಡವಾಳವನ್ನು ಇನ್‌ಕ್ರೆಡ್‌ಫೈನಾನ್ಸ್ ತನ್ನ ಪ್ರಮುಖ ವ್ಯವಹಾರ ಗ್ರಾಹಕ ಸಾಲಗಳು, ವಿದ್ಯಾರ್ಥಿ ಸಾಲಗಳು ಮತ್ತು ಎಂಎಸ್‌ಎಂಇ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಸಾಲಗಳಿಗೆ ಬಳಸಲು ಯೋಜಿಸಿದ್ದು, ಈ ಮೂರೂ ಬಲವಾದ ಬೆಳವಣಿಗೆಯನ್ನು ಕಂಡಿವೆ ಎಂದು ಸಂಸ್ಥೆ ಹೇಳಿದೆ.

ಭೂಪಿಂದರ್ ಸಿಂಗ್ ಬಗ್ಗೆ

ಭೂಪಿಂದರ್ ಇನ್‌ಕ್ರೆಡ್‌ನ ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಅವರು ಇದಕ್ಕೂ ಮೊದಲು, ಅವರು ಡಾಯ್ಚ ಬ್ಯಾಂಕ್‌ನ ಕಾರ್ಪೊರೇಟ್ ಹಣಕಾಸು ವಿಭಾಗದ ಮುಖ್ಯಸ್ಥರಾಗಿದ್ದರು ಜೊತೆಗೆ ಏಷ್ಯಾ ಪೆಸಿಫಿಕ್ ಪ್ರದೇಶಕ್ಕಾಗಿ ಸ್ಥಿರ ಆದಾಯ, ಇಕ್ವಿಟಿಗಳು ಮತ್ತು ಹೂಡಿಕೆ ಬ್ಯಾಂಕಿಂಗ್ ವಿಭಾಗಗಳ ಸಹ-ಮುಖ್ಯಸ್ಥರಾಗಿದ್ದರು. ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ, ಅವರು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+