ವಿನೂತನ ಕಲ್ಪನೆ ಮತ್ತು ನಮ್ಮ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಸಾಥ್ ನೀಡುವ ಜೊತೆಗಾರರಿದ್ದರೆ, ಇದು ಯಶಸ್ವಿ ವ್ಯವಹಾರದ ಮೂಲಾಧಾರವಾಗಿ ಕೆಲಸ ಮಾಡುತ್ತದೆ. ಇಂತಹ ಹಲವು ಉದ್ಯಮಗಳು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ರೂಪುಗೊಂಡ ಅನೇಕ ಉದಾಹರಣೆಗಳನ್ನು ನೀವು ಓದಿರುತ್ತೀರಿ.
ಇದೇ ರೀತಿ ರೋಹನ್ ಮತ್ತು ಸ್ವಾತಿ ಭಾರ್ಗವ ಎಂಬ ಇಬ್ಬರು ಸಮಾನ ಮನಸ್ಕ ಜೊತೆಗಾರರು ಸೃಜನಶೀಲ ಸ್ಟಾರ್ಟ್-ಅಪ್ ಕ್ಯಾಶ್ ಕರೋ ಅನ್ನು ಹುಟ್ಟುಹಾಕಿದರು. ರೋಹನ್ ಮತ್ತು ಸ್ವಾತಿ ಇಬ್ಬರೂ ಈಗ ಸಂಬಂಧದಲ್ಲಿ ಪತಿ - ಪತಿಯಾಗಿದ್ದಾರೆ. ಆದರೆ ಇಬ್ಬರಿಗೂ ಸ್ವಂತ ಉದ್ಯಮ ಆರಂಭಿಸುವ ಕನಸಿದ್ದ ಕಾರಣ ಉದ್ಯಮದಲ್ಲಿ ಹಾಗೂ ಜೀವನದ ಪಯಾಣದಲ್ಲೂ ಪಾಲುದಾರರಾದರು.

ಕ್ಯಾಶ್‌ಬ್ಯಾಕ್ ಮತ್ತು ಕೂಪನ್ ವೆಬ್‌ಸೈಟ್ ಆಗಿರುವ ಕ್ಯಾಶ್‌ಕರೋದ ಸೃಷ್ಟಿಕರ್ತರಾಗಿರುವ ಸ್ವಾತಿ ಮತ್ತು ರೋಹನ್ ಭಾರ್ಗವ ಇವರಿಬ್ಬರೂ ಆರಂಭದಲ್ಲಿ ಕೇವಲ ಸ್ನೇಹಿತರಾಗಿದ್ದು, ಮುಂದೆ ಉದ್ಯಮ ಪಾಲುದಾರರಾಗಿ ನಂತರ ಜೀವನದ ಪಾಲುದಾರರಾಗಿಯೂ ಹೆಜ್ಜೆ ಇಟ್ಟರು. ಪೌರಿಂಗ್ ಪೌಂಡ್ಸ್ ಎಂಬುದು ಕ್ಯಾಶ್‌ಬ್ಯಾಕ್ ವೆಬ್‌ಸೈಟ್ ಆಗಿದ್ದು, ಇದನ್ನು ಸ್ವಾತಿ ಮತ್ತು ರೋಹನ್ ಅವರು ಏಪ್ರಿಲ್ 2011 ರಲ್ಲಿ ಲಂಡನ್ ನಲ್ಲಿ ಪ್ರಾರಂಭಿಸಿದ್ದರು.
2013 ರಲ್ಲಿ, ಇವರಿಬ್ಬರು ಲಂಡನ್‌ನಿಂದ ಗುರ್ಗಾಂವ್‌ಗೆ ಸ್ಥಳಾಂತರಗೊಂಡು, ಇದೇ ವ್ಯವಹಾರ ಪರಿಕಲ್ಪನೆಯೊಂದಿಗೆ ಭಾರತದಲ್ಲಿಯೂ ಕ್ಯಾಶ್‌ಕಾರೊವನ್ನು ಆರಂಭಿಸಿದರು.
ಟಾಟಾ ಮತ್ತು ಕಲಾರಿ ಕ್ಯಾಪಿಟಲ್‌ನಂತಹ ಹೂಡಿಕೆದಾರರು ಕ್ಯಾಶ್‌ಕರೋಗೆ ಬೆಂಬಲ ನೀಡಿದ್ದಾರೆ.
ವಿವಿಧ ವರ್ಗಗಳ 1500 ಕ್ಕೂ ಹೆಚ್ಚು ಸೈಟ್‌ಗಳಲ್ಲಿ, ಕ್ಯಾಶ್‌ಕಾರೊ ರಿಯಾಯಿತಿಗಳ ಜೊತೆಗೆ ವಿಶೇಷ ಕೂಪನ್‌ಗಳು ಮತ್ತು ಕ್ಯಾಶ್‌ಬ್ಯಾಕ್ ಅನ್ನು ತನ್ನ ಗ್ರಾಹಕರಿಗೆ ನೀಡುತ್ತದೆ. ಪಿಟಿಐ ಅಂದಾಜಿನ ಪ್ರಕಾರ, ನಾನ್ ಸೀಸನಲ್ ತಿಂಗಳುಗಳಲ್ಲಿ, ಸೈಟ್‌ನ ವಾರ್ಷಿಕ GMV (ಒಟ್ಟು ಮರ್ಚಂಡೈಸ್ ಮೌಲ್ಯ) ಸುಮಾರು 650-750 ಮಿಲಿಯನ್ ಡಾಲರ್ ಅಥವಾ 4000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಗ್ರಾಹಕರ ನಡವಳಿಕೆಯಲ್ಲಿ ಇತ್ತೀಚಿನ ಬದಲಾವಣೆಯಿಂದಾಗಿ, 2020 ಕ್ಕೆ ಹೋಲಿಸಿದರೆ ಕ್ಯಾಷ್‌ಕರೋ ಟ್ರಾಫಿಕ್‌ನಲ್ಲಿ 8 ಪಟ್ಟು ಹೆಚ್ಚಳವಾಗಿದ್ದು, ಮಾರಾಟದಲ್ಲಿ ಐದು ಪಟ್ಟು ಹೆಚ್ಚಳವಾಗಿದೆ. ರೋಹನ್ ಭಾರ್ಗವ ಅವರು ಯುಎಸ್ ಎ ನಲ್ಲಿ ಪೆನ್ಸಿಲ್ವೇನಿಯಾದ ಫ್ರಾಂಕ್ಲಿನ್ ಮತ್ತು ಮಾರ್ಷಲ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.
ಇದಾದ ಬಳಿಕ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್‌ನಲ್ಲಿ ಅರ್ಥಶಾಸ್ತ್ರದಲ್ಲಿ ಎರಡನೇ ಪದವಿ ಪಡೆದರು. 2004 ರಲ್ಲಿ ಕಾಲೇಜಿನಿಂದ ಪದವಿ ಪಡೆದ ನಂತರ, ಅವರು ವಾಷಿಂಗ್ಟನ್ ಸ್ಕ್ವೇರ್ ಎಂಬ ಆಸ್ತಿ ನಿರ್ವಹಣಾ ಕಂಪನಿಯಲ್ಲಿ ಸರ್ಟಿಫೈಡ್ ಫೈನಾನ್ಸಿಯಲ್ ಎನಾಲಿಸ್ಟ್ (ಸಿಎಫ್‌ಎ) ಕೆಲಸ ಮಾಡಲು ಪ್ರಾರಂಭಿಸಿದರು.
2011 ರಲ್ಲಿ ತನ್ನ ಸ್ವಂತ ಉದ್ಯಮದ ಆರಂಭಕ್ಕೂ ಮುನ್ನ, ರೋಹನ್ ಅವರು ಅಲ್ಲಾದೀನ್ ಕ್ಯಾಪಿಟಲ್ ಎಂಬ ದೊಡ್ಡ ಯುಎಸ್ ಮೂಲದ ಹೆಡ್ಜ್ ಫಂಡ್ ಕಂಪನಿಯಲ್ಲಿ ಸಹಾಯಕ ನಿರ್ದೇಶಕರಾಗಿ ಎರಡು ವರ್ಷಗಳ ಕಾಲ ಕೆಲಸ ಮಾಡಿದರು. ಇನ್ನು ಸ್ವಾತಿ ಅವರ ವಿಚಾರಕ್ಕೆ ಬಂದರೆ ಹರ್ಯಾಣದ ಅಂಬಾಲ ಅವರ ಹುಟ್ಟೂರು. 10 ನೇ ತರಗತಿಯಲ್ಲಿ ಸ್ವಾತಿ ಹರಿಯಾಣದಲ್ಲಿ ಉನ್ನತ ಸ್ಥಾನ ಪಡೆದುಕೊಂಡ ವಿದ್ಯಾರ್ಥಿನಿಯಾಗಿದ್ದರು.
ರ್ಯಾಂಕ್ ಪಡೆದುಕೊಂಡ ಸ್ವಾತಿ ವಿದ್ಯಾರ್ಥಿವೇತನ ಪಡೆದುಕೊಂಡ ಅವರು 11 ಮತ್ತು 12 ನೇ ತರಗತಿ ಅಭ್ಯಾಸಕ್ಕಾಗಿ ಸಿಂಗಾಪುರಕ್ಕೆ ಸ್ಥಳಾಂತರಗೊಂಡರು. 10 ನೇ ತರಗತಿಯ ಗಣಿತ ಪರೀಕ್ಷೆಯಲ್ಲಿ 100 ಅಂಕಗಳನ್ನು ಪಡೆದಿದ್ದರು ಎನ್ನುವುದು ಇಲ್ಲಿ ಉಲ್ಲೇಖನಿಯ. ಮುಂದೆ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಅರ್ಥಶಾಸ್ತ್ರ ಮತ್ತು ಮ್ಯಾಥಮೆಟಿಕ್ಸ್ ಪದವಿ ಪಡೆದರು.
ಇದಾದ ಬಳಿಕ 2005 ರಿಂದ 2010 ರವರೆಗೆ ಗೋಲ್ಡ್‌ಮನ್ ಸ್ಯಾಚ್ಸ್‌ನಲ್ಲಿ ಉದ್ಯೋಗದಲ್ಲಿದ್ದರು. ದಿನನಿತ್ಯದ ಕಚೇರಿ ಕೆಲಸದ ಏಕತಾನತೆಯಿಂದ ಬೇಸರಗೊಂಡ ಅವರು, ತಮ್ಮ ಸ್ವಂತ ಕಂಪನಿಯನ್ನು ಪ್ರಾರಂಭಿಸುವ ನಿರ್ಧಾರ ಮಾಡಿದ್ದರು. ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ಪ್ರಕಾರ ಅವರ ನಿವ್ವಳ ಮೌಲ್ಯ ಸುಮಾರು 2 ಮಿಲಿಯನ್ ಡಾಲರ್ ಅಥವಾ 16,65,14,900 ಕೋಟಿ ರೂಪಾಯಿ ಆಗಿದೆ.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications