ಬಾಬಾ ರಾಮ್‌ದೇವ್ ಅವರ ಪತಂಜಲಿ ದೇಶದಾದ್ಯಂತ ಚಿರಪರಿಚಿತ ಬ್ರ್ಯಾಂಡ್ ಆಗಿದೆ. ಬಾಬಾ ರಾಮ್‌ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಸಹಯೋಗದಲ್ಲಿ ರೂಪಿಸಲಾದ ಬ್ರ್ಯಾಂಡ್ ಪತಂಜಲಿ ಯಶಸ್ಸಿನಲ್ಲಿ ದಂಪತಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ.
ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು 2006 ರಲ್ಲಿ ತಮ್ಮ ಕಂಪನಿಯನ್ನು ಸ್ಥಾಪಿಸಲು ವೈಯಕ್ತಿಕ ಸಾಲವನ್ನು ತೆಗೆದುಕೊಂಡಿದ್ದರು. ಆದರೆ ಆ ವೇಳೆ ಬ್ಯಾಂಕ್ ಖಾತೆಯನ್ನು ಹೊಂದಿರದ ಇವರು ಸಾಲ ಪಡೆಯುವುದು ಹೇಗೆ? ಇದಕ್ಕಾಗಿ ಸಹಾಯ ಮಾಡಿದವರು ಅವರ ಅನುಯಾಯಿಗಳಾದ ಸುನೀತಾ ಮತ್ತು ಸರ್ವಾನ್ ಸ್ಯಾಮ್ ಪೊದ್ದಾರ್ ದಂಪತಿಗಳು.

ದಂಪತಿಗಳ ಬಗ್ಗೆ ಮಾಹಿತಿ
2011 ರ ವರದಿಯ ಪ್ರಕಾರ, ಸರ್ವಾನ್ 'ಸ್ಯಾಮ್' ಪೊದ್ದಾರ್ ಮತ್ತು ಅವರ ಪತ್ನಿ ಸುನೀತಾ ಸ್ಕಾಟ್ಲೆಂಡ್ ನಿವಾಸಿಗಳಾಗಿದ್ದಾರೆ. ಇವರು ಲಿಟಲ್ ಕುಂಬ್ರೇ ಎಂಬ ದ್ವೀಪವನ್ನು ಎರಡು ಮಿಲಿಯನ್ ಪೌಂಡ್‌ಗಳಿಗೆ ಖರೀದಿಸಿ ಅದನ್ನು 2009ರಲ್ಲಿ ಬಾಬಾ ರಾಮ್‌ದೇವ್‌ಗೆ ಭರ್ಜರಿ ಉಡುಗೊರೆಯಾಗಿ ನೀಡಿದ್ದರು.
2011 ರಲ್ಲಿ ದಂಪತಿಗಳು ಕಂಪನಿಯಲ್ಲಿ ತಲಾ 12.46 ಲಕ್ಷ ಷೇರುಗಳನ್ನು ಹೊಂದಿದ್ದು, 7.2 ಶೇಕಡ ಪಾಲನ್ನು ಹೊಂದಿದ್ದರು ಎಂದು ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ. ಇದರೊಂದಿಗೆ ಅವರು ಪತಂಜಲಿ ಆಯುರ್ವೇದದಲ್ಲಿ 92 ಪ್ರತಿಶತದಷ್ಟು ಷೇರುಗಳನ್ನು ಹೊಂದಿರುವ ಆಚಾರ್ಯ ಬಾಲಕೃಷ್ಣ ಅವರ ನಂತರ ಕಂಪನಿಯಲ್ಲಿ ಎರಡನೇ ಅತಿ ದೊಡ್ಡ ಪಾಲುದಾರರಾದರು.
ಬಾಬಾ ರಾಮ್‌ದೇವ್ ಅವರ ಯೋಗ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ನಂತರ ಸುನಿತಾ ಸಾಕಷ್ಟು ದೇಹದ ತೂಕ ಕಳೆದುಕೊಂಡಿದ್ದರು. ಅಲ್ಲದೇ ಅವರ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರಿದರು. ಹಾಗಾಗಿಯೇ ರಾಮ್‌ದೇವ್‌ಗೆ ಏನಾದರೂ ಉಡುಗೊರೆ ಮತ್ತು ದೊಡ್ಡ ಮೊತ್ತವನ್ನು ದಾನ ನೀಡಬೇಕೆಂಬ ಮಹದಾಸೆಯಿಂದ ಪತಿಯ ಮನವೊಲಿಸುವಲ್ಲಿ ಯಶಸ್ವಿಯಾದರು. ಅದೂ ಅಲ್ಲದೆ ಸುನಿತಾ ಯುಕೆಯ ಪತಂಜಲಿ ಪೀಠ ಟ್ರಸ್ಟ್‌ನ ಟ್ರಸ್ಟಿಯಾಗಿದ್ದರು.
ಮುಂಬೈನಲ್ಲಿ ಜನಿಸಿದ ಸುನೀತಾ ಕಠ್ಮಂಡುವಿನಲ್ಲಿ ಬೆಳೆದಿದ್ದು, ಪ್ರಸ್ತುತ ಗ್ಲಾಸ್ಗೋದ ಸಿರಿವಂತ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಇವರು ಅನೇಕ ಯೋಗ ತರಗತಿಗಳನ್ನು ನೀಡುತ್ತಿದ್ದು, ಇವರು ಯೋಗ ಶಿಕ್ಷಕರಿಗೆ ತರಬೇತಿಯನ್ನು ನೀಡುತ್ತಾರೆ. ಬಾಬಾ ರಾಮ್‌ದೇವ್ ಅವರ ಯೋಗ ತರಗತಿಗಳ ಡಿವಿಡಿಯನ್ನು ಮೊದಲು ಅವರು ನೋಡುತ್ತಿದ್ದರು . ರಾಮದೇವ್ ಗ್ಲಾಸ್ಗೋಗೆ ಬಂದಾಗ ಅವರು ಮೊದಲ ಬಾರಿಗೆ ಭೇಟಿಯಾದರು.
ಇನ್ನು ಸ್ಯಾಮ್ ಪೊದ್ದಾರ್ ಬಿಹಾರದಲ್ಲಿ ಜನಿಸಿದ್ದು ಅವರ ತಂದೆ ಗ್ಲಾಸ್ಗೋದಲ್ಲಿ ವೈದ್ಯರಾಗಿದ್ದರು. ಸ್ಯಾಮ್ ಅವರಿಗೆ 4 ವರ್ಷದವನಾಗಿದ್ದಾಗ ಅವರು ಗ್ಲಾಸ್ಗೋಗೆ ಸ್ಥಳಾಂತರವಾದರು. ಸ್ಯಾಮ್ ಅವರನ್ನು ಮದುವೆಯಾದ ನಂತರ ಗ್ಲಾಸ್ಗೋಗೆ ಬಂದ ಸುನೀತಾ ಅವರಿಗೆ ಆಗ ಕೇವಲ 18 ವರ್ಷವಾಗಿತ್ತು.
ಸ್ಯಾಮ್ ಅವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ. 1980 ರಲ್ಲಿ ಪರಿಚಯಸ್ಥರ ಹೋಮ್ ಕೇರ್ ಬ್ಯುಸಿನೆಸ್‌ನ ಉಸ್ತುವಾರಿ ವಹಿಸಿಕೊಂಡ ಅವರು, ತಮ್ಮ ವೃತ್ತಿಗೆ 1982 ರಲ್ಲಿ ರಾಜೀನಾಮೆ ನೀಡಿದರು. ಇದೇ ಸಮಯದಲ್ಲಿ ಸುನೀತಾ ಗ್ಯಾಸ್ ಸ್ಟೇಶನ್ ನಡೆಸುತ್ತಿದ್ದರು ಅಂತೆಯೇ ತಮ್ಮ ಪತಿಯ ವ್ಯಾಪಾರದಲ್ಲೂ ಸಹಯೋಗ ನೀಡಿದ ಆಕೆ ಬ್ಯುಸಿನೆಸ್ ಯಶಸ್ವಿಯಾಗುವಲ್ಲಿ ಕಾರಣರಾದರು.
1995 ರಲ್ಲಿ ರಾಮ್‌ದೇವ್ ತಮ್ಮ ದಿವ್ಯ ಫಾರ್ಮಸಿಯ ನೋಂದಾವಣೆಗೆ ಸಾಕಷ್ಟು ಹಣವಿಲ್ಲ ಎಂದು ತಿಳಿಸಿದ್ದರು. ಈ ಸಮಯದಲ್ಲಿ ಬಾಬಾ ಯೋಗ ತರಬೇತುದಾರರಾಗಿದ್ದರೂ ಈಗಿನಷ್ಟು ಪ್ರಸಿದ್ಧಿ ಹೊಂದಿರಲಿಲ್ಲ. ಆ ವೇಳೆ ದಂಪತಿಗಳು ಬಾಬಾ ರಾಮ್ ದೇವ್ ಸಹಾಯಕ್ಕೆ ನಿಂತರು. ರಾಮ್‌ದೇವ್ ಅವರ ಜನಪ್ರಿಯತೆ ಹೆಚ್ಚಾದಂತೆ ಅವರು ತಮ್ಮ ಕಂಪನಿಯನ್ನು ವಿಸ್ತರಿಸಲು ನಿರ್ಧರಿಸಿದಾಗ ಸ್ಯಾಮ್ ಹಾಗೂ ಸುನೀತಾ ಪೊದ್ದಾರ್ ರಾಮ್‌ದೇವ್‌ಗೆ ಸಾಲದ ರೂಪದಲ್ಲಿ ಸಾಕಷ್ಟು ಧನಸಹಾಯ ಮಾಡಿದರು
ಓಕ್ಮಿನ್‌ಸ್ಟರ್ ಹೆಲ್ತ್‌ಕೇರ್‌ನ ಸಿಇಒ ಹಾಗೂ ಸಂಸ್ಥಾಪಕರಾಗಿರುವ ಸುನೀತಾ ಸ್ಕಾಟ್‌ಲೆಂಡ್‌ನ ಖ್ಯಾತ ಹಾಗೂ ಪ್ರಶಸ್ತಿ ವಿಜೇತ ಹೋಮ್ ಕೇರ್ ಮತ್ತು ಪುನರ್ವಸತಿ ಸೇವೆಗಳ ಪೂರೈಕೆದಾರರಲ್ಲಿ ಒಬ್ಬರಾಗಿದ್ದಾರೆ. 2011 ರಲ್ಲಿ ಹಲವಾರು ಪ್ರಕಟಣೆಗಳಲ್ಲಿ ಪೊದ್ದಾರ್‌ಗಳು ಕಾಣಿಸಿಕೊಂಡಿದ್ದಾರೆ.
ಬಾಬಾ ರಾಮದೇವ್ ಅವರ ಪತಂಜಲಿ ಕಳೆದ ಹಣಕಾಸು ವರ್ಷದಲ್ಲಿ 886.44 ಕೋಟಿ ರೂಪಾಯಿ ಲಾಭ ಗಳಿಸಿದೆ. ಫೋರ್ಬ್ಸ್ ಪ್ರಕಾರ ಆಚಾರ್ಯ ಬಾಲಕೃಷ್ಣ ಅವರ ನಿವ್ವಳ ಮೌಲ್ಯ 29,680 ಕೋಟಿ ರೂಪಾಯಿ ಆಗಿದ್ದು ಕಂಪನಿಯ ಆದಾಯ 40000 ಕೋಟಿ ರೂಪಾಯಿ ಆಗಿದೆ.


Click it and Unblock the Notifications