ಸಾಕ್ಷಿ ಛಾಬ್ರಾ ಮಿತ್ತಲ್ ಅವರು "ಫುಡ್‌ಹಕ್" (Foodhak) ನ ಸಂಸ್ಥಾಪಕರು ಮತ್ತು ಸಿಇಒ ಆಗಿದ್ದು, ವಿಜ್ಞಾನ, ತಂತ್ರಜ್ಞಾನ ಮತ್ತು ಸಾಂಪ್ರದಾಯಿಕ ಆಯುರ್ವೇದ ತತ್ವಗಳನ್ನು ಜೊತೆ ಸೇರಿಸುವ ಮೂಲಕ ಆಹಾರ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡಿದ ಸ್ಟಾರ್ಟಪ್ ಇದಾಗಿದೆ.
ಅದಕ್ಕೂ ಮೊದಲು ಸಾಕ್ಷಿ ಛಾಬ್ರಾ ಅವರು ಹೂಡಿಕೆದಾರರಾಗಿ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಸುಮಾರು 12 ವರ್ಷಗಳ ಕಾಲ ಕೆಲಸ ಮಾಡಿದ ನಂತರ, ಅವರು ಊಟ ವಿತರಣಾ ಸೇವೆ ನೀಡುವ "ಫುಡ್‌ಹಕ್" ಎಂಬ ತಮ್ಮದೇ ಆದ ಕಂಪನಿಯನ್ನು ಸ್ಥಾಪಿಸಿದರು.

ಅಂದಹಾಗೆ ಸಾಕ್ಷಿ ಛಾಬ್ರಾ ಅವರು ಭಾರ್ತಿ ಏರ್‌ಟೆಲ್‌ನ ಮಾಲೀಕರಾದ ಭಾರತೀಯ ಉದ್ಯಮಿ ಸುನಿಲ್ ಮಿತ್ತಲ್ ಅವರ ಸೊಸೆಯಾಗಿದ್ದಾರೆ. ಫೋರ್ಬ್ಸ್ ಪ್ರಕಾರ, ಭಾರತೀಯ ಬಿಲಿಯನೇರ್ ಉದ್ಯಮಿ ಸುನಿಲ್ ಮಿತ್ತಲ್ ಅವರ ರಿಯಲ್ ಟೈಮ್ ನಿವ್ವಳ ಮೌಲ್ಯ 62,360 ಕೋಟಿ ರೂಪಾಯಿ ಆಗಿದೆ.
ಸುನಿಲ್ ಮಿತ್ತಲ್ ಅವರ ಪುತ್ರ , ಭಾರತಿ ಗ್ಲೋಬಲ್ ನಡೆಸುತ್ತಿರುವ ಶ್ರವಿನ್ ಮಿತ್ತಲ್ ಅವರನ್ನು ಸಾಕ್ಷಿ 2015ರಲ್ಲಿ ವಿವಾಹವಾಗಿದ್ದಾರೆ. ಇವರಿಬ್ಬರು ದೆಹಲಿಯ ಬ್ರಿಟಿಷ್ ಶಾಲೆಯಲ್ಲಿ ಬ್ಯಾಚ್‌ಮೇಟ್‌ಗಳಾಗಿದ್ದರು.
ಸಾಕ್ಷಿ ಅವರು ವಾರ್ಟನ್ ಶಾಲೆಯ ಹಳೆಯ ವಿದ್ಯಾರ್ಥಿ (MBA) ಯಾಗಿದ್ದು, ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ (BSc) ಬಯೋಟೆಕ್ನಾಲಜಿಯಲ್ಲಿ ಪದವಿ ಪಡೆದರು. ಫೈಜರ್ (Pfizer) ಮತ್ತು ಲಂಡನ್ ಮೂಲದ EPIC ಪ್ರೈವೇಟ್ ಇಕ್ವಿಟಿ ಸೇರಿದಂತೆ ಹಲವಾರು ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಸದ್ಯ ಯುಕೆಯಲ್ಲಿ ನೆಲೆಸಿದ್ದಾರೆ.
2017 ರಲ್ಲಿ ಅವರು ಮೊದಲ ಬಾರಿಗೆ ಗರ್ಭಿಣಿಯಾದಾಗ ಅವರು ಅಪರೂಪವಾದ ಯಕೃತ್ತಿ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ತಿಳಿದುಬಂತು. ಆ ವೇಳೆ, ಅವರು ಜಪಾನಿನ ಬಹುರಾಷ್ಟ್ರೀಯ ಸಾಫ್ಟ್‌ಬ್ಯಾಂಕ್‌ನೊಂದಿಗೆ ಕೆಲಸ ಮಾಡುವ ಕಾರ್ಪೊರೇಟ್ ಪ್ರೊಫೆಷನಲ್ ಆಗಿದ್ದರು.
ಗರ್ಭಿಣಿಯಾಗಿದ್ದ ವೇಳೆ ಆರೋಗ್ಯ ಸಮಸ್ಯೆಯ ಕಾರಣ ಅವರು ಸಸ್ಯ-ಆಧಾರಿತ ಆಯುರ್ವೇದ ಆಹಾರಕ್ರಮ (plant-based Ayurvedic diet) ಬದಲಾದರು. ಇದು ಔಷಧದ ರೂಪವಾದ ಆಹಾರ ಕ್ರಮವಾಗಿತ್ತು. ಆರೋಗ್ಯದಲ್ಲಿ ಬದಲಾವಣೆ ಕಂಡು ಅವರಿಗೆ ಈ ಆಹಾರ ಕ್ರಮ ಮತ್ತಷ್ಟು ಶಕ್ತಿ ನೀಡಿತು. ಮಾತ್ರವಲ್ಲದೇ ಮೊದಲಿಗಿಂತ ಉತ್ತಮವಾಗಿರಲು ಸಹಾಯ ಮಾಡಿತು.
ಇದು ಆಹಾರ ವಿತರಣಾ ಸೇವೆಯಾದ ಫುಡ್‌ಹಕ್‌ನ ಕಲ್ಪನೆಯನ್ನು ಹುಟ್ಟುಹಾಕಿತು. ಫುಡ್‌ಹಕ್ ಮೂಲಕ 'ಆಹಾರವನ್ನು ಔಷಧವಾಗಿ' ರುಚಿಕರವಾಗಿ ವಿತರಿಸಿದ್ದು ಇದು ಎಲ್ಲರ ಆಕರ್ಷಣೆಗೆ ಕಾಣವಾಗಿ ಜನಪ್ರಿಯವಾಯಿತು. ಅವರು ಫೆಬ್ರವರಿ 2021 ರಲ್ಲಿ ಫುಡ್‌ಹಕ್ ಅನ್ನು ಸ್ಥಾಪಿಸಿದ್ದು ಅಂದಿನಿಂದ ಕಂಪನಿಯನ್ನು ಸಿಇಒ ಆಗಿ ಮುನ್ನಡೆಸುತ್ತಿದ್ದಾರೆ.


Click it and Unblock the Notifications