ಇತ್ತೀಚೆಗೆ ಪಾಕಿಸ್ತಾನವು ಪ್ರಮುಖ ಹಣಕಾಸು ಬಿಕ್ಕಟ್ಟಿಗೆ ಸಿಲುಕಿದೆ. ಶ್ರೀಲಂಕಾದಲ್ಲಿ ಉಂಟಾದ ಸ್ಥಿತಿಯಂತೆ ಪಾಕಿಸ್ತಾನದ ಸ್ಥಿತಿಯಾಗುತ್ತಿದೆ. ಅತೀ ಅಗತ್ಯ ವಸ್ತುಗಳ ಕೊರತೆ ಪಾಕಿಸ್ತಾನದಲ್ಲಿ ಕಂಡು ಬಂದಿದೆ. ಗೋಧಿ, ಅಕ್ಕಿ, ಮೊಟ್ಟೆ ಮೊದಲಾದವುಗಳ ಲಭ್ಯತೆಯಿಲ್ಲದೆ ಕೊರತೆ ಇದ್ದು, ಸಾಮಾನ್ಯ ಜನರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಆಹಾರವನ್ನು ಖರೀದಿ ಮಾಡಲು ಜನರು ಭಾರೀ ಮೊತ್ತವನ್ನು ಪಾವತಿ ಮಾಡಬೇಕಾಗಿದೆ.
ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಕಡಿಮೆ ಇರುವಂತೆ ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆಯು ಕಡಿಮೆಯಾಗಿದೆ. ಅಲ್ಲಿ ಹಿಂದೂಗಳನ್ನು ಸಎರಡನೇ ದರ್ಜೆಯ ಪ್ರಜೆಗಳನ್ನಾಗಿ ಪರಿಗಣಿಸಲಾಗುತ್ತದೆ. ಆದರೂ ಕೂಡಾ ಪಾಕಿಸ್ತಾನದಲ್ಲಿ ಕೆಲವು ಹಿಂದೂಗಳು ಭಾರೀ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದು, ಶ್ರೀಮಂತರು ಆಗಿದ್ದಾರೆ. ಪಾಕಿಸ್ತಾನದ ಅತೀ ಶ್ರೀಮಂತ ಹಿಂದೂ ವಕ್ತಿಯಾದ ದೀಪಕ್ ಪೆರ್ವಾನಿ ಬಗ್ಗೆ ನಾವಿಲ್ಲಿ ಮಾಹಿತಿ ನೀಡಿದ್ದೇವೆ ಮುಂದೆ ಓದಿ....

ದೀಪಕ್ ಪೆರ್ವಾನಿ ಯಾರು?
ದೀಪಕ್ ಪೆರ್ವಾನಿ 1973ರಲ್ಲಿ ಪಾಕಿಸ್ತಾನದ ಮೀರ್‌ಪುರ್ ಖಾಸ್‌ನಲ್ಲಿ ಜನಿಸಿದ್ದಾರೆ. ಹಾಗೆಯೇ ಪಾಕಿಸ್ತಾನದ ಜನಪ್ರಿಯ ಫ್ಯಾಷನ್ ಡಿಸೈನರ್ ಮತ್ತು ನಟರಾಗಿದ್ದಾರೆ. ದೀಪಕ್ ಪೆರ್ವಾನಿ ಪಾಕಿಸ್ತಾನದ ಹಿಂದೂ ಸಿಂಧಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪಾಕಿಸ್ತಾನದಲ್ಲಿ ಫ್ಯಾಷನ್ ಡಿಸೈನಿಂಗ್‌ನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 2022ರಲ್ಲಿ ಪ್ರಕಟವಾದ ವರದಿ ಪ್ರಕಾರ ದೀಪಕ್ ಪೆರ್ವಾನಿ ನಿವ್ವಳ ಆದಾಯ 71 ಕೋಟಿ ರೂಪಾಯಿ ಆಗಿದೆ.
ದೀಪಕ್ ಪೆರ್ವಾನಿ ಪಾಕಿಸ್ತಾನದಲ್ಲಿನ ನಟ ಕೂಡಾ ಹೌದು. ಪಾಕಿಸ್ತಾನದ ಜನಪ್ರಿಯ ಟಿವಿ ಧಾರಾವಾಹಿಗಳಾಗಿ ದೀಪಕ್ ಪೆರ್ವಾನಿ ನಟಿಸಿದ್ದಾರೆ. ಮೇರೆ ಪಾಸ್ ಪಾಸ್ (ಹಮ್ ಟಿವಿ), ಕಾದೋರಾತ್ (2013ರಲ್ಲಿ ಹಮ್ ಟಿವಿ) ದೀಪಕ್ ಪೆರ್ವಾನಿ ನಟಿಸಿ ಪ್ರಮುಖ ಧಾರಾವಾಹಿಗಳಾಗಿದೆ. ದೀಪಕ್ ಪೆರ್ವಾನಿ ರೊಮ್ಯಾಂಟಿಕ್, ಕಾಮೆಡಿ ಸಿನಿಮಾ ಪಂಜಾಬ್ ನಹಿ ಜೌಂಗಿಯಲ್ಲಿಯೂ (2017) ನಟಿಸಿದ್ದಾರೆ.
ದೀಪಕ್ ಪಡೆದ ಪ್ರಶಸ್ತಿಗಳು ಹಲವು
ದೀಪಕ್ ಪೆರ್ವಾನಿ ವರ್ಲ್ಡ್ ಬ್ಯ್ರಾಂಡಿಂಗ್ ಅವಾರ್ಡ್ 2017-2018ರ ವಿಜೇತರಾಗಿದ್ದಾರೆ. ಆರು ಲಕ್ಸ ಸ್ಟೈಲ್ ಅವಾರ್ಡ್ ಅನ್ನು ಕೂಡಾ ದೀಪಕ್ ಪೆರ್ವಾನಿ ಪಡೆದುಕೊಂಡಿದ್ದಾರೆ. 2 ಬಾರಿ ಎಂಟಿವಿ ಸ್ಟೈಲ್ ಗುರು ಅವಾರ್ಡ್ ಪಡೆದುಕೊಂಡಿದ್ದಾರೆ. ಮಿಲನ್ ಫ್ಯಾಶನ್ ವೀಕ್ 2010ನಲ್ಲಿ ತೀರ್ಪುಗಾರರಿಂದ ಪ್ರಶಂಸೆಗೆ ಒಳಗಾಗಿದ್ದಾರೆ. ಮಿಯಾಮಿ ಫ್ಯಾಷನ್ ವೀಕ್‌ನಲ್ಲಿ ಉತ್ತಮ ಅಂತಾರಾಷ್ಟ್ರೀಯ ಡಿಸೈನರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಬಡತನ ನಿರ್ಮೂಲನೆಗಾಗಿ ಕಾರ್ಯನಿರ್ವಹಣೆ ಮಾಡುವ ದೀಪಕ್ ಪೆರ್ವಾನಿ, ಪಾಕಿಸ್ತಾನದ ಗ್ರಾಮೀಣ ಮಹಿಳೆಯರಿಗೆ ಸಹಾಯ ಮಾಡುವ ಎಸ್‌ಎಂಇಡಿಎಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಹಾಗೆಯೇ ಹಲವಾರು ಎನ್‌ಜಿಒಗಳಿಗೆ ಧನಸಹಾಯ ಮಾಡುವ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಮಲೇಶಿಯಾದಲ್ಲಿ ನಡೆದ ಇಸ್ಲಾಮಿಕ್ ಫ್ಯಾಷನ್ ವೀಕ್‌ನ ಸ್ಥಾಪಕರು ಎಂದು ಕೂಡಾ ಹೇಳಲಾಗುತ್ತಿದೆ. ದೀಪಕ್ ಪೆರ್ವಾನಿ ಡಿಸೈನ್ ಮಾಡಿದ ಕುರ್ತಾವು ವಿಶ್ವದ ಅತೀ ದೊಡ್ಡ ಕುರ್ತಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಗಿನ್ನಿಲ್ ಬುಕ್‌ನಲ್ಲಿದೆ.
ಪಾಕಿಸ್ತಾನದ ಸ್ನೋಕರ್ ಆಟಗಾರ ನವೀನ್ ಪೆರ್ವಾನಿ ದೀಪಕ್ ಪೆರ್ವಾನಿಯ ಸಂಬಂಧಿಕರಾಗಿದ್ದಾರೆ. ನವೀನ್ ಪೆರ್ವಾನಿ 1971ರ ಅಕ್ಟೋಬರ್ 30ರಂದು ಜನಿಸಿದ್ದಾರೆ. 2006ರಲ್ಲಿ ಕತಾರ್‌ನ ದೋಹಾದಲ್ಲಿ ನಡೆಸಲಾದ ಏಷ್ಯನ್ ಗೇಮ್ಸ್‌ನಲ್ಲಿ ನವೀನ್ ಪೆರ್ವಾನಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications