ಪುಣೆ ಮೂಲದ ಸ್ಟಾರ್ಟ್‌ಅಪ್ ಥಿಂಕ್ ಸ್ಕೂಲ್ (Think School) ವಿವರಣಾತ್ಮಕ ವಿಷಯದ ಮೂಲಕ ಯೂಟ್ಯೂಬ್‌ನಲ್ಲಿ ಮಿಲಿಯಗಟ್ಟಲೆ ಜನರನ್ನು ತಲುಪಿದೆ. ಅದರ ಮಾಹಿತಿಪೂರ್ಣ ವಿಷಯ, ಬ್ಯುಸಿನೆಸ್ ಪಾಠಗಳು ಮತ್ತು ವ್ಯಾಪಾರ ಪರಿಕಲ್ಪನೆಗಳನ್ನು ವಿವರಿಸುತ್ತದೆ.
ಜಿಯೋಪಾಲಿಟಿಕ್ಸ್ , ಯುವ ವಿದ್ಯಾರ್ಥಿಗಳು,ವೃತ್ತಿಪರರಲ್ಲಿ ಮತ್ತು ಟೈರ್-2, ಹಾಗೂ ಟೈರ್-3 ನಗರಗಳಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಥಿಂಕ್‌ಸ್ಕೂಲ್‌ನ ಯೂಟ್ಯೂಬ್ ಚಾನಲ್ ಪ್ರೀ-ರೆಕಾರ್ಡ್ ಮತ್ತು ಲೈವ್ ಕೋರ್ಸ್‌ಗಳನ್ನು ಹೊಂದಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಥಿಂಕ್‌ಸ್ಕೂಲ್‌ನ ಸ್ಥಾಪಕರು ಯಾರು?
ಥಿಂಕ್ ಸ್ಕೂಲ್ ಅನ್ನು ಇಬ್ಬರು ಎಂಜಿನಿಯರ್‌ಗಳಾದ ಗಣೇಶಪ್ರಸಾದ್ ಶ್ರೀಧರನ್ ಮತ್ತು ಪಾರ್ಶ್ ಕೊಠಾರಿ ಅವರು ಸ್ಥಾಪಿಸಿದ್ದಾರೆ. ಇವರು ತಮ್ಮನ್ನು ತಾವು ಭಾರತೀಯ ಶಿಕ್ಷಣ ವ್ಯವಸ್ಥೆಯ ಬಂಡಾಯಗಾರರೆಂದು ಘೋಷಿಸಿದ್ದಾರೆ.
ಪಾರ್ಶ್ ಅವರು ಥಿಂಕ್ ಸ್ಕೂಲ್‌ನ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದ್ದರೆ, ಗಣೇಶಪ್ರಸಾದ್ ಎಸ್ ಥಿಂಕ್‌ಸ್ಕೂಲ್‌ನ ಫೇಸ್ ಆಗಿದ್ದು, ಅವರು ಕಂಟೆಟ್ ಅನ್ನು ನಿಭಾಯಿಸುತ್ತಾರೆ. ಅವರು ಪ್ರಿ-ರೆಕಾರ್ಡ್ ಮಾಡಿರುವ ಮತ್ತು ಲೈವ್ ಕೋರ್ಸ್‌ಗಳನ್ನು ಹೊಂದಿರುವ ಆನ್‌ಲೈನ್ ಸ್ಕೂಲ್ ಅನ್ನು ಮುನ್ನಡೆಸುತ್ತಿದ್ದಾರೆ.
ಗಣೇಶ್ ಅವರು ಪ್ರಿಂಪ್ರಿ ಚಿಂಚ್ವಾಡ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ತಮ್ಮ ಎಂಜಿನಿಯರಿಂಗ್ ಪೂರ್ಣಗೊಳಿಸಿದರೆ, ಪಾರ್ಶ್ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನಿಂದ ಇಂಡಸ್ಟ್ರಿಯಲ್ ಮತ್ತು ಪ್ರೊಡಕ್ಷನ್ ಎಂಜಿನಿಯರಿಂಗ್‌ನಲ್ಲಿ ತನ್ನ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.
ಥಿಂಕ್ ಸ್ಕೂಲ್ ಹುಟ್ಟಿದ್ದು 2019 ರಲ್ಲಿ. ಕೇವಲ 25,000 ರೂಪಾಯಿ ಬಜೆಟ್ ನಲ್ಲಿ ಪುಣೆಯಲ್ಲಿ ಚಿಕ್ಕ ಸ್ಥಳವನ್ನು ಬಾಡಿಗೆಗೆ ಪಡೆದ ಗಣೇಶ್ ಮತ್ತು ಪಾರ್ಶ್ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಸಂವಹನ ಕಲೆ, ಸಮಸ್ಯೆಗಳ ಪರಿಹಾರ ಹೇಗೆ?, ರೆಸ್ಯೂಮ್ ಬರೆಯುವ ಕೌಶಲ್ಯ ಮುಂತಾಹ ವಿಚಾರವಾಗಿ ಬೋಧಿಸಲು ಪ್ರಾರಂಭಿಸಿದರು.
2019 ವರ್ಷಾಂತ್ಯದ ವೇಳೆಗೆ ಥಿಂಕ್ ಸ್ಕೂಲ್ ನಲ್ಲಿ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಇದರ ನಂತರ, ಅವರು ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸೆಳೆಯಲು ಪ್ರಾರಂಭಿಸಿದರು. ಆದರೆ ಅವರ ಈ ಪ್ರಯತ್ನ ಅಷ್ಟಾಗಿ ಯಶಸ್ವಿಯಾಗಲಿಲ್ಲ. ಹೀಗಾಗಿ ಅವರು ಥಿಂಕ್ ಸ್ಕೂಲ್ ಅನ್ನು ಆನ್‌ಲೈನ್ ತರಲು ನಿರ್ಧರಿಸಿದರು.
ಗಣೇಶ್ ಪ್ರಸಾದ್ ಮತ್ತು ಪಾರ್ಶ್ 2019 ರಲ್ಲಿ ತಮ್ಮ ಕಂಪನಿ Think School LLP ಅನ್ನು ನೋಂದಾಯಿಸಿಕೊಂಡರು. ಅವರ ಯೂಟ್ಯೂಬ್ ಚಾನೆಲ್ ಇಂದು 3.44 ಮಿಲಿಯನ್ ಗೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಥಿಂಕ್ ಸ್ಕೂಲ್ ಗೆ ಉಡೆಮಿ, ಸಿಪ್ಲಿಲರ್ನ್, ಅಪ್‌ಗ್ರ್ಯಾಡ್, ಕೋರ್ಸೆರ್ ಮತ್ತು ಡಿಗ್ರೀಡ್ ಪ್ರಮುಖ ಪೈಪೋಟಿಗಾರರಾಗಿದ್ದಾರೆ.
ಥಿಂಕ್ ಸ್ಕೂಲ್, ಯುವ ಭಾರತದ ಸಂವಹನ ಕೌಶಲ್ಯಗಳನ್ನು ಸುಧಾರಿಸಲು ಮತ್ತು ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಲು ಪ್ರಯತ್ನಿಸುತ್ತಿದೆ ಸ್ಟಾರ್ಟ್ ಅಪ್ ಹೇಳಿದೆ.
ಥಿಂಕ್ ಸ್ಕೂಲ್‌ನ ಜನಪ್ರಿಯ ವಿಡಿಯೋಗಳು
ವ್ಯಾಪಾರ, ಜಿಯೋಪಾಲಿಟಿಕ್ಸ್ ಮತ್ತು ಅರ್ಥಶಾಸ್ತ್ರದ ಬಗ್ಗೆ ಎಲ್ಲವನ್ನೂ ಕಲಿಸುವ ತನ್ನ ಧ್ಯೇಯದೊಂದಿಗೆ, ಥಿಂಕ್ ಸ್ಕೂಲ್ ಪ್ರಸ್ತುತ ಪ್ರಪಂಚಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಶಿಕ್ಷಣವನ್ನು ನೀಡುತ್ತದೆ. ಈ ಗುರಿಯೊಂದಿಗೆ, ಥಿಂಕ್ ಸ್ಕೂಲ್ ಭಾರತ-ಕೆನಡಾ ವಿವಾದದಿಂದ, ಫುಟ್ಬಾಲ್‌ವರೆಗೆ ಹೀಗೆ ಎಲ್ಲ ವಿಷಯದ ಎಲ್ಲದರ ಬಗ್ಗೆ ವಿವರಣಾತ್ಮಕ ವಿಡಿಯೋಗಳನ್ನು ಹೊಂದಿದೆ.
ಅವರ ಎಕನಾಮಿಕ್ ಕೇಸ್ ಸ್ಟಡೀಸ್, ಇಂಡಿಯನ್ ಎಂಪೈರ್ಸ್ ಹಿಸ್ಟರಿ ಮುಂತಾದವು ಯುವಕರಲ್ಲಿ ಅತ್ಯಂತ ಜನಪ್ರಿಯವಾಗಿವೆ. "ನಮ್ಮ ಇಂಜಿನಿಯರಿಂಗ್ ಪದವಿಯ ನಂತರ ನಾವು ಎಂಎನ್‌ಸಿಗಳಲ್ಲಿ ಉದ್ಯೋಗಪಡೆದುಕೊಂಡಾಗ ಅಲ್ಲಿ ಸಂವಹನ ಕೌಶಲ್ಯ (communication skill) ದ ಎಷ್ಟು ಮುಖ್ಯವಾಗುತ್ತದೆ ಎಂಬುವುದನ್ನು ನಾವು ಅರಿತುಕೊಂಡಿದ್ದೇವೆ," ಎಂದು ಥಿಂಕ್ ಸ್ಕೂಲ್‌ನ ಸಿಒಒ ಗಣೇಶಪ್ರಸಾದ್ ಹೇಳಿದ್ದಾರೆ.
"ಎಂಎನ್‌ಸಿಯಲ್ಲಿ ಉದ್ಯೋಗವನ್ನು ಸಂದರ್ಶನಗಳಲ್ಲಿ, ಸಂವಹನ ಸಾಮರ್ಥ್ಯ, ಬಾಡಿ ಲ್ಯಾಂಗ್ವೆಜ್ ಇತ್ಯಾದಿ ಸಾಫ್ಟ್ ಸ್ಕಿಲ್ಸ್ ನಮಗೆ ಕಾಲೇಜಿನಲ್ಲಿ ಕಲಿಸಿದ ತಾಂತ್ರಿಕ ಜ್ಞಾನಕ್ಕಿಂತ ಹೆಚ್ಚು ಮುಖ್ಯವಾಗಿದೆ. ಹೀಗಾಗಿ ಕೌಶಲ್ಯ-ಆಧಾರಿತ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸುವ ವಿಷಯದಲ್ಲಿ ಹೆಚ್ಚಿನ ಬೆಂಬಲದ ಅಗತ್ಯವಿದೆ ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇವೆ," ಎಂದು ಕೂಡಾ ತಿಳಿಸಿದರು.


Click it and Unblock the Notifications