ವೈಫಲ್ಯದ ಪಾಠವು ಯಾವಾಗಲೂ ಮುಂದಿನ ಸಾಧನೆಗೆ ಒಂದು ಸಣ್ಣ ಅಂಶವಾಗಿರುತ್ತದೆ. ನಿರೀಕ್ಷಿತ ಗುರಿ ಸಾಧನೆ ಹಾಗೂ ಉದ್ದೇಶಿತ ಫಲಿತಾಂಶವನ್ನು ಪಡೆಯುವುದು ಯಶಸ್ವಿನತ್ತ ದೊಡ್ಡ ದಾರಿ ತೋರಿಸಿದರೂ ವೈಫಲ್ಯವು ಯಶಸ್ಸಿನ ಹಾದಿಯಲ್ಲಿ ಗಮನಾರ್ಹ ಪರಿಣಾಮ ಬೀರುತ್ತದೆ.
ವೈಫಲ್ಯ ಎನ್ನುವುದು ಕೇವಲ ಹಿನ್ನಡೆಯಷ್ಟೇ ಅಲ್ಲ, ಜತೆಗೆ ಆ ದಾರಿಯಲ್ಲಿ ಮುನ್ನಡೆಯುವುದಕ್ಕೆ ಎದುರಿಸುವ ತೊಂದರೆಗಳೂ ಆಗಿರುತ್ತವೆ. ಅದರಂತೆ ಕೆಪಿ ಗ್ರೂಪ್‌ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಫಾರೂಕ್ ಗುಲಾಂ ಪಟೇಲ್ ಒಬ್ಬ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದಾರೆ.

ಫಾರೂಕ್ ಗುಲಾಂ ಪಟೇಲ್ ಯಾರು?
ಗುಲಾಮ್ ಪಟೇಲ್ ಹಾಗೂ ರಶೀದಾಬೆನ್‌ನ ಮಗನಾಗಿ 1972ರ ಮಾರ್ಚ್ 24ರಂದು ಹುಟ್ಟಿದ ಫಾರೂಕ್ ಅವರು ಸಾಮಾನ್ಯ ಕುಟುಂಬದಲ್ಲಿ ಬೆಳೆದಿದ್ದಾರೆ. ಡಾ. ಪಟೇಲ್ ಅವರ ತಂದೆ ಗುಜರಾತ್ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಬಸ್ ಕಂಡಕ್ಟರ್ ಆಗಿದ್ದು, ಅದು ತಮ್ಮ ಕೆಳ ಮಧ್ಯಮ ವರ್ಗದ ಕುಟುಂಬವನ್ನು ಪೋಷಿಸಲು ನೆರವಾಗುತ್ತಿತ್ತು.
ಡಾ. ಫಾರೂಕ್ ಅವರು ಕಾನ್ಬಿವಾಡ್ ಭಂಡ್ರಿ ಮೊಹೊಲ್ಲಾದಲ್ಲಿರುವ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಾಡಿದ್ದರು. ನಂತರ ಅವರ ಶಿಕ್ಷಕಿ ಶಾಂತಬೆನ್ ಅವರ ಶಿಫಾರಸ್ಸಿನ ಮೇರೆಗೆ ಅವರು ನಂತರ ಭುಲ್ಕಾ ಭವನ ಎಂದು ಕರೆಯಲ್ಪಡುವ ವಿಡಿ ದೇಸಾಯಿ ವಡಿವಾಲಾ ಶಾಲೆಗೆ ಸೇರಿಕೊಂಡರು.
ಬಡತನದ ಅನುಭವ ಹೊಂದಿದ್ದ ಡಾ. ಫಾರೂಕ್ ಗುಲಾಂ ಪಟೇಲ್ ತಮ್ಮ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸುವುದಕ್ಕೆ ಮುಂಬೈಗೆ ಸ್ಥಳಾಂತರಗೊಂಡರು. ಅವರು ಹಣಕಾಸಿನ ನೆರವಿಗಾಗಿ ಆಪ್ಟೀಶಿಯನ್ ಆಗಿ ದುಡಿಯುವ ಜತೆಗೆ ಆಮದು-ರಪ್ತು ವ್ಯಾಪಾರವನ್ನು ಅಧ್ಯಯನ ಮಾಡಲು ಪ್ರಾರಂಭಿಸಿದ್ದರು. ಹೆಚ್ಚಿನ ಪರಿಣತಿಯನ್ನು ಪಡೆಯುವುದಕ್ಕಾಗಿ ಅವರು 1990ರಲ್ಲಿ ಮ್ಯಾನ್‌ಮೇಡ್ ಟೆಕ್ಸ್‌ಟೈಲ್ ರಿಸರ್ಚ್ ಅಸೋಸಿಯೇಷನ್ ಸೇರಿಕೊಂಡರು.
ನಂತರ ಅವರು ತಮ್ಮ ಕುಟುಂಬವನ್ನು ಬೆಂಬಲಿಸುವ ಸಲುವಾಗಿ 1991ರಲ್ಲಿ ಇಂಗ್ಲೆಂಡ್‌ಗೆ ವಿಮಾನ ಹತ್ತಿದರು. ಅಲ್ಲಿ ಅವರು ಕೆಫೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಎರಡು ವರ್ಷಗಳ ನಂತರ 1993ರಲ್ಲಿ ಸೂರತ್‌ಗೆ ಮರಳಿದರು. ಬಳಿಕ ಅವರು ಕಾರ್ಟಿಂಗ್ ಕಂಪನಿಯನ್ನು ಪ್ರಾರಂಭಿಸಿದರು. ಆದರೆ ಜೀವನದಲ್ಲಿ ಏನಾದರೂ ದೊಡ್ಡ ಸಾಧನೆ ಮಾಡಬೇಕೆಂದುಕೊಂಡು 1994ರಲ್ಲಿ ಒಂದು ಲಕ್ಷ ರೂಪಾಯಿ ಬಂಡವಾಳದೊಂದಿಗೆ ಕೆಪಿ ಗ್ರೂಪ್ ಅನ್ನು ಪ್ರಾರಂಭಿಸಿದರು. ಅದು ಆ ಕಾಲದಲ್ಲಿ ಪಟೇಲ್ ಅವರ ಜೀವನದಲ್ಲಿ ದೊಡ್ಡ ತಿರುವನ್ನು ನೀಡಿದೆ.
2001 ಅವರು KP ಬಿಲ್ಡ್ಕಾನ್ ಪ್ರೈವೇಟ್ ಲಿಮಿಟೆಡ್ ಅನ್ನು ಪ್ರಾರಂಭಿಸಿದರು. ಈ ರೀತಿ ದೂರ ಸಂಪರ್ಕ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ವೃತ್ತಿ ಬದುಕನ್ನು ಪ್ರಾರಂಭಿಸಿದರು. ಆ ಮೂಲಕ ಸಂವಹನ ಕ್ಷೇತ್ರದಲ್ಲಿನ ಮಹತ್ವವನ್ನು ಮನಗಂಡು ಅದಕ್ಕೆ ಪೂರಕವಾಗುವ ಮೂಲಸೌಕರ್ಯವನ್ನು 16 ರಾಜ್ಯಗಳಲ್ಲಿ ಅಭಿವೃದ್ಧಿಪಡಿಸಿದರು. ಹಲವು ವರ್ಷಗಳ ಅನುಭವದ ಬಳಿಕ ಕಂಪನಿಯನ್ನು ಎತ್ತರಕ್ಕೆ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದರು.
ಆ ಬಳಿಕ ಅವರು ಪುನರ್ ಬಳಕೆ ಇಂಧನ ಕ್ಷೇತ್ರದ ಮಾರುಕಟ್ಟೆಗೆ ಪ್ರವೇಶ ಪಡೆದುಕೊಂಡರು. 2008ರಲ್ಲಿ ಕೆಪಿಐ ಗ್ರೀನ್ ಎನರ್ಜಿಯನ್ನು ಸ್ಥಾಪಿಸುವ ಮೂಲಕ ಸೋಲಾರ್ ಇಂಧನ ಉದ್ಯಮಕ್ಕೆ ಪ್ರವೇಶ ಪಡೆದುಕೊಂಡರು. 2010ರಲ್ಲಿ ಕೆಪಿ ಎನರ್ಜಿ ಮೂಲಕ ವಿಂಡ್ ಪ್ರಾಜೆಕ್ಟ್ ಅನ್ನು ಪ್ರಾರಂಭಿಸಿದರು. ತಮ್ಮ ಸೋಲಾರ್ ಪ್ರಾಜೆಕ್ಟ್ ಅನ್ನು ದೊಡ್ಡ ಮಟ್ಟಕ್ಕೆ ವಿಸ್ತರಿಸುವ ನಿರ್ಧಾರ ಮಾಡಿದರು. ಆ ಮೂಲಕ ಸೌದಿಯ ಭರೂಜ್‌ನಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ 220 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡರು.
ವರ್ಷಗಳು ಕಳೆದಂತೆ ಉದ್ಯಮ ಕ್ಷೇತ್ರದಲ್ಲಿ ಅವರ ಮಹತ್ವಾಕಾಂಕ್ಷೆಯು ಬೆಳೆಯುತ್ತ ಹೋಯಿತು. ಸಂಸ್ಥೆಯು ಪ್ರಸ್ತುತ 1500ಕ್ಕೂ ಹೆಚ್ಚು ಭೂಮಿಯನ್ನು ಹೊಂದಿದೆ. ಫಾರೂಕ್ ಗುಜರಾತ್‌ನ ಅತಿದೊಡ್ಡ ಖಾಸಗಿ ಸೋಲಾರ್ ಪಾರ್ಕ್ ಹಾಗೂ 2 GWಗಿಂತ ಹೆಚ್ಚಿನ ಗ್ರೀನ್ ಎನರ್ಜಿ ಬಂಡವಾಳವನ್ನು ಹೊಂದಿದೆ. ಆ ಮೂಲಕ ಕೆಪಿ ಗ್ರೂಪ್ ಭಾರತದಾದ್ಯಂತ 2,000ಕ್ಕಿಂತ ಹೆಚ್ಚಿನ ವಾಣಿಜ್ಯ ಸಾಮ್ರಾಜ್ಯವನ್ನು ಹೊಂದಿದೆ.


Click it and Unblock the Notifications