ಭಾರತೀಯ ಕ್ರಿಕೆಟಿಗರು ಸಾಮಾನ್ಯವಾಗಿ, ಉದ್ಯಮಗಳಲ್ಲಿ, ಜಾಹೀರಾತುಗಳಲ್ಲಿ ಹಾಗೂ ವಿವಿಧ ಬ್ರಾಂಡ್‌ಗಳನ್ನು ಪ್ರಚಾರ ಮಾಡುವ ರಾಯಭಾರಿಗಳಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ನೋಡಬಹುದಾಗಿದೆ. ಹೀಗೆ ಬ್ರಾಂಡ್‌ಗಳನ್ನು ಅನುಮೋದಿಸಿ ಪ್ರಚಾರ ಮಾಡುವ ಮೂಲಕ ತಾವು ಕೋಟ್ಯಾಂತರ ರೂಪಾಯಿ ಗಳಿಸುತ್ತಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಕ್ರಿಕೆಟಿಗರು, ಇಂತಹ ಜಾಹೀರಾತು ಒಪ್ಪಂದಗಳಿಗೆ ಭಾರಿ ಸಂಭಾವನೆಗೆ ಮಾತ್ರ ಒಪ್ಪಿಕೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್ ತಾರೆಗಳ ಇಂತಹ ಒಪ್ಪಂದಗಳ ಮೊತ್ತ ಗಗನಕ್ಕೇರಿವೆ ಎಂದರೆ ತಪ್ಪಾಗಲಾರದು. ಆದರೆ ಮೊದಲ 100 ಕೋಟಿ ರೂಪಾಯಿ ಒಪ್ಪಂದಕ್ಕೆ ಸಹಿ ಹಾಕಿದ ಕ್ರಿಕೆಟಿಗ ಯಾರು ಗೊತ್ತಾ? ಅವರು ಬೇರೆ ಯಾರೂ ಅಲ್ಲ, ಟೀಂ ಇಂಡಿಯಾದ ಮಾಜಿ ನಾಯಕ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್.

2001ರಲ್ಲಿ, ಮಾಸ್ಟರ್ ಬ್ಲಾಸ್ಟರ್ ಮಾರ್ಕ್ ಮಸ್ಕರೇನ್ಹಾಸ್ ಅವರ ಕ್ರೀಡಾ ನಿರ್ವಹಣಾ ಸಂಸ್ಥೆ ವರ್ಲ್ಡ್ ಟೆಲ್ ಜೊತೆಗೆ ಹಿಂದೆಂದೂ ಕೇಳಿರದ 100 ಕೋಟಿ ರೂಪಾಯಿಗಳ ಒಪ್ಪಂದವನ್ನು ಮಾಡಿಕೊಂಡರು. ಇದೇ ವೇಳೇ ತೆಂಡೂಲ್ಕರ್ ಅತ್ಯಂತ ಶ್ರೀಮಂತ ಕ್ರಿಕೆಟಿಗರಾದರು. ಭಾರತೀಯ ಕ್ರಿಕೆಟಿಗರು ಮುಂದೆ ಅಪಾರ ಬ್ರಾಂಡ್ ಮೌಲ್ಯದೊಂದಿಗೆ ಮೆಗಾ ಸ್ಟಾರ್ ಆಗಲು ಇದು ಕಾರಣವಾಯಿತು.
ತೆಂಡೂಲ್ಕರ್ ಅವರ ಕ್ರಿಕೆಟ್ ವೃತ್ತಿಜೀವನವು ಎರಡು ದಶಕಗಳ ಕಾಲ ವ್ಯಾಪಿಸಿದ್ದು, 2013 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತರಾದರು. ಸಚಿನ್ ಈಗ ಐಟಿಸಿ ಸಾವ್ಲಾನ್, ಜಿಯೋ ಸಿನಿಮಾ, ಬಿಎಂಡಬ್ಲ್ಯೂ, ಅಡಿಡಾಸ್ ಸೇರಿ ಹಲವು ಬ್ರಾಂಡ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. 2007ರಲ್ಲಿ ಬಿಸಿಸಿಐಯಿಂದ ಐಪಿಎಲ್ ಪ್ರಾರಂಭವಾದ ನಂತರ, ಕ್ರಿಕೆಟಿಗರು ಮೊತ್ತವನ್ನು ಹೆಚ್ಚಿಸಿದರು. ಇಂದು, ವಿರಾಟ್ ಕೊಹ್ಲಿ 1,000 ಕೋಟಿ ರೂಪಾಯಿಗಿಂತ ಹೆಚ್ಚು ನಿವ್ವಳ ಮೌಲ್ಯದೊಂದಿಗೆ ಶ್ರೀಮಂತ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ.
ಇವರು ಪೂಮಾ ಜೊತೆ 110 ಕೋಟಿ ರೂಪಾಯಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದಲ್ಲದೆ, ಭಾರತ ತಂಡದ ಮತ್ತೊಬ್ಬ ಮಾಜಿ ನಾಯಕ ಎಂಎಸ್ ಧೋನಿ, ರಿಲಯನ್ಸ್, ಎಸ್‌ಬಿಐ, ಓರಿಯೊ, ಇಂಡಿಯಾ ಸಿಮೆಂಟ್ಸ್, ಡ್ರೀಮ್ 11 ಮತ್ತು ರೀಬಾಕ್‌ನಂತಹ ದೊಡ್ಡ ಬ್ರಾಂಡ್‌ಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.


Click it and Unblock the Notifications