ಗಿರೀಶ್ ಮಾತೃಭೂತಂ ಅವರು 2010ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ತಮ್ಮ ಏರ್ ಕಂಡೀಷನ್ ಕಂಪನಿಯನ್ನು ಪ್ರಾರಂಭಿಸಿದ್ದರು. ಅವರು ಆರು ಮಂದಿಯ ತಂಡವನ್ನು ಹೊಂದಿದ್ದರು. ಅವರ ಸಾಸ್ ಸಂಸ್ಥೆಯು ಬಹುತೇಕ ಬಹಳ ವೇಗವಾಗಿ ಯಶಸ್ಸನ್ನು ಕಂಡಿದೆ. ಅವರ ಫ್ರೆಶ್‌ವರ್ಕ್ಸ್ ಕಂಪನಿಯು ಪ್ರಾರಂಭವಾದ ಆರು ತಿಂಗಳೊಳಗೆ 200 ಬಿ ಟು ಬಿ ಗ್ರಾಹಕರನ್ನು ಹೊಂದಿತ್ತು. ಕಂಪನಿಯು 2018ರಲ್ಲಿ ಯುನಿಕಾರ್ನ್ ಆಯಿತು.
2021ರಲ್ಲಿ ಕಂಪನಿಯು ಯುನೈಟೆಡ್ ಸ್ಟೇಟ್ಸ್‌ನ NASDAQನಲ್ಲಿ 13 ಬಿಲಿಯನ್ ಡಾಲರ್ ಮೌಲ್ಯದೊಂದಿಗೆ ಲಿಸ್ಟೆಡ್ ಆಗಿತ್ತು. ಮಾತೃಭೂತಂ ತಮ್ಮ ಕಂಪನಿಯ ನೆಲೆಯನ್ನು ಚೆನ್ನೈನಿಂದ ಕ್ಯಾಲಿಫೋರ್ನಿಯಾದ ಸ್ಯಾನ್ ಮಾಟಿಯೊಗೆ ಸ್ಥಳಾಂತರಿಸಿದ್ದರು. ಅವರ ಸಂಸ್ಥೆಯು 120 ಕಂಪನಿಗಳಲ್ಲಿ 50000 ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ. ಅವರ ಈ ಕಂಪನಿಯು ತನ್ನ ಗ್ರಾಹಕರಿಗೆ ಮಾರಾಟ, ಉತ್ಪಾದಕತೆ, ಮಾರ್ಕೆಟಿಂಗ್, ಮಾನವ ಸಂಪನ್ಮೂಲ ಮತ್ತು ಐಟಿ ಕ್ಷೇತ್ರಗಳಿಗೆ ಪೂರಕವಾಗಿರುವ ಸಾಫ್ಟ್‌ವೇರ್ ಟೂಲ್ಸ್ ಒಳಗೊಂಡಿರುವ ಫ್ಲಾಟ್‌ಫಾರಂನ್ನು ಒದಗಿಸುತ್ತದೆ.
ಮಾತೃಭೂತಂ ತರಬೇತಿ ಪಡೆದಿರುವ ಎಂಜಿನಿಯರ್ ಆಗಿದ್ದಾರೆ. ಅವರು ಸುಮಾರು 10 ವರ್ಷಗಳ ಕಾಲ ಜೊಹೊದಲ್ಲಿ ನೆಲೆಸಿದ್ದರು. ಅವರು ತಮ್ಮ ಸ್ವಂತ ಸಂಸ್ಥೆಯನ್ನು ಪ್ರಾರಂಭಿಸಲು ಪ್ರಸ್ತುತ ಕಂಪನಿಯನ್ನು ತೊರೆಯುವಾಗ ಉಪಾಧ್ಯಕ್ಷ ಸ್ಥಾನದಲ್ಲಿದ್ದರು. 2015 ರವರೆಗೆ ಕಂಪನಿಯ ವ್ಯಾಪಾರ ಪ್ರವರ್ಧಮಾನದಲ್ಲಿ ಇತ್ತು. ಆ ಬಳಿಕ ಅವರು ಮ್ಯಾನೇಜ್‌ಮೆಂಟ್ ಟೀಂ ಅನ್ನು ನೇಮಿಸಿಕೊಂಡರು.
ಅವರ ಕಂಪನಿಯು ಅಮೆರಿಕದಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಿದಾಗ ಹೆಚ್ಚಿನ ಉದ್ಯೋಗಿಗಳು ಕೋಟ್ಯಾಧಿಪತಿಗಳಾದರು. ಜತೆಗೆ ಅವರ ಸಂಪತ್ತು ಕೂಡ 700 ಮಿಲಿಯನ್ ಡಾಲರ್‌ಗೆ ಏರಿದೆ (ಸುಮಾರು 5788 ಕೋಟಿ ರೂ.). ಗಿರೀಶ್ ಮಾತೃಭೂತಂ ಅವರು ತಿರುಚಿಯಲ್ಲಿ ಹುಟ್ಟಿ ಬೆಳೆದಿದ್ದಾರೆ. ಅವರಿಗೆ ಐಐಟಿ ಸೇರಲು ಸಾಧ್ಯವಾಗಿರಲಿಲ್ಲ.
ಅವರು ತಮ್ಮ ಎಂಜಿನಿಯರಿಂಗ್ ಅನ್ನು ಊರಿನ ಸಮೀಪದಲ್ಲಿರುವ ಷಣ್ಮುಖ ಆರ್ಟ್ಸ್, ಸೈನ್ಸ್, ಟೆಕ್ನಾಲಜಿ & ರಿಸರ್ಚ್ ಅಕಾಡೆಮಿಯಿಂದ ಪಡೆದುಕೊಂಡಿದ್ದಾರೆ. ನಂತರ ಅವರು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಪದವಿ ಮಾಡಿದ್ದಾರೆ. ಅವರ ಮೊದಲ ಕಚೇರಿಯ ಬಾಡಿಗೆಯು ಕೇವಲ 100 ಡಾಲರ್ ಆಗಿತ್ತು. ಅವರ 500 ಮಂದಿ ಉದ್ಯೋಗಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಆ ಪೈಕಿ 70 ಮಂದಿಯು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
ಗಿರೀಶ್ ಅವರು ನಿವೃತ್ತ ಬ್ಯಾಂಕ್ ಅಧಿಕಾರಿಯೊಬ್ಬರ ಮಗ. ಕಲಿಕೆಯಲ್ಲಿ ಅವರು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿಲ್ಲದ ಕಾರಣ ಸಂಬಂಧಿಕರಿಂದ ಅಪಹಾಸ್ಯವನ್ನು ಎದುರಿಸಿದ್ದರು ಎಂದು ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಅವರು ರಿಕ್ಷಾ ಬಿಡುವುದಕ್ಕೆ ಉತ್ತಮ ಎಂದು ಹೀಯಾಳಿಸಿದ್ದರು. ಈ ರೀತಿಯ ಟೀಕೆಗಳಿಂದಾಗಿ ಅವರಿಗೆ 12ನೇ ತರಗತಿ ಹಾಗೂ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ.


Click it and Unblock the Notifications
