ದೇಶದಲ್ಲಿ ಹಲವಾರು ಉದ್ಯಮಿಗಳು ವೈಯಕ್ತಿಕವಾಗಿ ದೊಡ್ಡ ಮಟ್ಟದ ವ್ಯಾಪಾರ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ್ದಾರೆ. ಅದು ರತನ್ ಟಾಟಾ ಆಗಿರಲಿ ಅಥವಾ ಮುಕೇಶ್ ಅಂಬಾನಿಯಾಗಿರಲಿ; ಹಲವಾರು ಉದ್ಯಮಿಗಳು ತಮ್ಮ ಕುಟುಂಬಸ್ಥರು ಪ್ರಾರಂಭಿಸಿದ ವ್ಯಾಪಾರ ಸಾಮ್ರಾಜ್ಯ ಮುನ್ನಡೆಸುವಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಬಜಾಜ್ ಕುಟುಂಬಕ್ಕೆ ಸೇರಿದ ಸಂಜಯ್ ಬಬಾಜ್ ಅವರು ಸುಮಾರು 96 ವರ್ಷಗಳ ಹಳೇಯ ಬಜಾಜ್ ಗ್ರೂಪ್‌ನ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಹುಲ್ ಬಜಾಜ್ ಅವರು ಬಜಾಜ್ ಗ್ರೂಪ್‌ನ ಆಡಳಿತ ಮಂಡಳಿತಯಲ್ಲಿ ಉನ್ನತ ಸ್ಥಾನದಲ್ಲಿದ್ದು, 1965ರಿಂದ ಕಂಪನಿಯನ್ನು ಎತ್ತರಕ್ಕೆ ಬೆಳೆಸಿದ್ದ ಸಂಜೀವ್ ಬಜಾಜ್ ಅವರು 1994ರಿಂದ ಕಂಪನಿಯೊಂದನ್ನು ಮುನ್ನಡೆಸುತ್ತಿದ್ದಾರೆ. ಪ್ರಸ್ತುತ ಅವರು ಬಜಾಜ್ ಫಿನ್‌ಸರ್ವ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಂಜೀವ್ ಬಜಾಜ್ ಯಾರು?
ಸಂಜೀವ್ ಬಜಾಜ್ ಅವರು ಪ್ರಸಿದ್ಧ ಬಜಾಜ್ ಕುಟುಂಬಕ್ಕೆ ಸೇರಿದ್ದಾರೆ. ಇವರು ಖ್ಯಾತ ಬಿಲಿಯನೇರ್ ಉದ್ಯಮಿ ರಾಹುಲ್ ಬಜಾಜ್ ಅವರ ಕಿರಿಯ ಮಗ ಹಾಗೂ ಜಮ್ನಾಲಾಲ್ ಬಜಾಜ್ ಅವರ ಮೊಗ್ಮಗ. ಸಂಜೀವ್ ಅವರು ತಮ್ಮಕುಟುಂಬದ ಪರಂಪರೆಯ ಕಂಪನಿಯನ್ನು ಮುನ್ನಡೆಸುತ್ತಾರೆ ಎನ್ನುವುದು ಬಹುತೇಕರಿಗೆ ಗೊತ್ತಿತ್ತು. ಸಂಜಯ್ ಅವರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ಬಜಾಜ್ ಆಟೊದಲ್ಲಿ ತೊಡಗಿಸಿಕೊಂಡಿದ್ದಾರೆ.
ಸಂಜಯ್ ಬಜಾಜ್ ಅವರು ಮ್ಯೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪುಣೆ ವಿವಿಯಿಂದ ಪದವಿಯನ್ನು ಪಡೆದುಕೊಂಡಿದ್ದಾರೆ. ಆ ಬಳಿಕ ಅವರುಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಿಂದ ಮ್ಯಾನೇಜ್‌ಮೆಂಟ್ ಪದವಿಯನ್ನು ಗಳಿಸಿದ್ದಾರೆ. ಜತೆಗೆ, ವಾರ್ವಿಕ್ ವಿವಿಯಿಂದ ಸಿಸ್ಟಮ್ ಎಂಜಿನಿಯರಿಂಗ್‌ನಲ್ಲಿ ಡಿಗ್ರಿ ಪಡೆದುಕೊಂಡರು.
ಆ ಮೂಲಕ 1994ರಲ್ಲಿ ಬಜಾಜ್ ಆಟೊದಲ್ಲಿ ವೃತ್ತಿ ಬದುಕನ್ನು ಪ್ರಾರಂಭಿಸಿದರು. ಕಂಪನಿಯಲ್ಲಿ ಅವರು ಹಣಕಾಸು, ಕಾನೂನು, ಅಂತಾರಾಷ್ಟ್ರೀಯ ಬಿಸಿನೆಸ್ ಕಾರ್ಯನಿರ್ವಹಣೆ ಸೇರಿದಂತೆ ಹಲವು ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2007ರಲ್ಲಿ ಬಜಾಜ್ ಫಿನ್‌ಸರ್ವ್‌ನಿಂದ ಬಜಾಜ್ ಆಟೊ ಬೇರ್ಪಟ್ಟಿದ್ದು, ಸಂಜಯ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
2012ರಲ್ಲಿ ಅವರು ಬಜಾಜ್ ಅಲಯನ್ಸ್ ಲೈಫ್ ಇನ್ಶೂರೆನ್ಸ್ ಹಾಗೂ ಬಜಾಜ್ ಅಲಯನ್ಸ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದರು. ಬಜಾಜ್ ಹೋಲ್ಡಿಂಗ್ಸ್ ಅಂಡ್ ಇನ್‌ವೆಸ್ಟ್‌ಮೆಂಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಬಜಾಜ್ ಫೈನಾನ್ಸ್‌ನ ಉಪಾಧ್ಯಕ್ಷರಾದರು. 2023ರಲ್ಲಿ ಭಾರತದಲ್ಲಿ ಬಜಾಜ್ ಫಿನ್‌ಸರ್ವ್ ಮ್ಯೂಚುವಲ್ ಫಂಡ್ ಅನ್ನು ಪ್ರಾರಂಭಿಸಿದರು.
ಸಂಜಯ್ ಅವರು ಬಜಾಜ್ ಈಗ ಫಿನ್‌ಸರ್ವ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. 2020ರ ಮೇ ತಿಂಗಳಲ್ಲಿ ಅವರು ತಮ್ಮ ಎಂಡಿ ಸ್ಥಾನದಲ್ಲಿ ಐದು ವರ್ಷ ಮುಂದುವರಿಯುವ ನಿರ್ಧಾರವನ್ನು ಪ್ರಕಟಿಸಲಾಗಿತ್ತು. ಫೋರ್ಬ್ಸ್‌ನ 2023ರ ವರದಿ ಪ್ರಕಾರ ಸಂಜಯ್ ಅವರು 4.4 ಬಿಲಿಯನ್ ಅಂದರೆ 36000 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ. 2023 ರ ಅಕ್ಟೋಬರ್ 6ರ ಮಾಹಿತಿಯಂತೆ ಬಜಾಜ್ ಫಿನ್‌ಸರ್ವ್ ಮಾರುಕಟ್ಟೆ ಮೌಲ್ಯ 2.6 ಲಕ್ಷ ಕೋಟಿ ರೂಪಾಯಿ ಆಗಿದೆ.


Click it and Unblock the Notifications