ಹಿನಾ ನಾಗರಾಜನ್ ದೇಶದ ಕಾರ್ಪೊರೇಟ್ ಜಗತ್ತಿನ ಪ್ರಮುಖ ಲೀಡರ್ ಗಳಲ್ಲಿ ಒಬ್ಬರಾಗಿದ್ದಾರೆ. ಇವರು ವಿಶ್ವದ ಅತಿ ದೊಡ್ಡ ಸ್ಪಿರಿಟ್ ಉತ್ಪಾದಕ ಡಿಯಾಜಿಯೊ (Diageo) ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಸಂಸ್ಥೆಯ ಲಾಭ ಮತ್ತು ನಷ್ಟ, ಹೂಡಿಕೆ, ಕಾರ್ಪೊರೇಟ್ ಆಡಳಿತ ಹೀಗೆ ಬ್ಯುಸಿನೆಸ್ ನ ಇತರ ಎಲ್ಲಾ ಅಂಶಗಳನ್ನು ನಿರ್ವಹಿಸುತ್ತಾರೆ. "ಡಿಯಾಜಿಯೊ ಇಂಡಿಯಾ "ದಲ್ಲಿ ನಾಯಕತ್ವ ವಹಿಸಿಕೊಳ್ಳುವ ಮೊದಲು ಡಿಯಾಜಿಯೊದ ಆಫ್ರಿಕಾದ ಉದಯೋನ್ಮುಖ ಪ್ರಾದೇಶಿಕ ಮಾರ್ಕೆಟಿಂಗ್ ಅನ್ನು ನಿರ್ವಹಿಸುತ್ತಿದ್ದರು.
ಘಾನಾ, ಕ್ಯಾಮರೂನ್, ಇಥಿಯೋಪಿಯಾ ಹೀಗೆ ಹಲವು ದೇಶಗಳ ಕಾರ್ಯಾಚರಣೆಯನ್ನು ಒಳಗೊಂಡಿತ್ತು. ಕಂಪನಿಯ ಹೇಳಿಕೆಯ ಪ್ರಕಾರ, ಡಿಯಾಜಿಯೊ ಆಫ್ರಿಕಾದ ಗಮನಾರ್ಹ ಬೆಳವಣಿಗೆಗೆ ಹಿನಾ ಕಾರಣವಾಗಿದ್ದರು. ಡಿಯಾಜಿಯೊಗೆ ಸೇರುವ ಮೊದಲು, ಹಿನಾ ನಾಗರಾಜನ್ ಅವರು FMCG ಉದ್ಯಮದಲ್ಲಿ ಸುಮಾರು 30 ವರ್ಷಗಳ ಕಾಲ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ರೆಕಿಟ್ ಬೆನ್ಕಿಸರ್ (RB), ನೆಸ್ಲೆ ಇಂಡಿಯಾ ಮತ್ತು ಮೇರಿ ಕೇ ಇಂಡಿಯಾದ ಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದರು.

ಇವರ ಶೈಕ್ಷಣಿಕ ಅರ್ಹತೆಯೂ ಅತ್ಯುತ್ತಮವಾಗಿದ್ದು, ದೆಹಲಿ ವಿಶ್ವವಿದ್ಯಾಲಯದಿಂದ ಬಿ.ಕಾಂ. ನಂತರ, ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಪದವಿ ಪಡೆದು ನೆಸ್ಲೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಡಿಯಾಜಿಯೊ ಕಂಪನಿಯು ಭಾರತದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಅಂದರೆ ಹಿನಾ ನಾಗರಾಜನ್ ಅವರು ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ಇದ್ದ ಎಂಡಿ ಮತ್ತು ಸಿಇಒ ಆನಂದ್ ಕೃಪಾಲು ಅವರು ರಾಜೀನಾಮೆ ನೀಡಿದ ನಂತರ 2021ರ ಜುಲೈ 1ರಂದು ಹಿನಾ ನಾಗರಾಜನ್ ಡಿಯಾಜಿಯೊ ಇಂಡಿಯಾದ ಎಂಡಿ ಮತ್ತು ಸಿಇಒ ಆಗಿ ನೇಮಕಗೊಂಡರು.
"ರಾಯಲ್ ಚಾಲೆಂಜರ್ಸ್ ಬೆಂಗಳೂರು" ಇದರ ಒಡೆತನವನ್ನು ಈ ಸಂಸ್ಥೆ ಹೊಂದಿದ್ದು, ಇದರ ನಿವ್ವಳ ಮೌಲ್ಯ 8500 ಕೋಟಿ ರೂಪಾಯಿ ಆಗಿದೆ. ವಿರಾಟ್ ಕೊಹ್ಲಿ ಹಲವು ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದರು. ಹಿನಾ ನಾಗರಾಜನ್ ಅವರು ಇನ್ನೂ ತಂಡದ ಹಿರಿಯ ಆಟಗಾರರಾಗಿದ್ದಾರೆ. ಹಿನಾ ನಾಗರಾಜನ್ ಅವರು 3261 ಉದ್ಯೋಗಿಗಳನ್ನು ಹೊಂದಿರುವ ಕಂಪನಿಯ ಭಾರತದಲ್ಲಿನ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದಾರೆ.
ಸಂಗೀತ ಪ್ರೇಮಿಯಾಗಿರುವ ಹಿನಾರಿಗೆ ಬಾಲಿವುಡ್‌ನ ಹಳೆಯ ಹಾಡುಗಳೆಂದರೆ ಬಹಳ ಇಷ್ಟ. ಹಿನಾ ನಾಗರಾಜನ್ ಅವರಿಗೆ 2,75,00,000 ರೂಪಾಯಿ ಮೂಲ ವೇತನ, 2,58,26,850 ರೂಪಾಯಿ BOA ಭತ್ಯೆಗಳನ್ನು ಪಾವತಿಸುವುದಾಗಿ ಕಂಪನಿ ತಿಳಿಸಿದೆ. ಹಿನಾ ನಾಗರಾಜನ್ ಅವರ ವಾರ್ಷಿಕ ಪಿಎಫ್ ಕೊಡುಗೆ 33,00,000 ರೂಪಾಯಿ ಹಾಗೂ ಗ್ರಾಚ್ಯುಟಿ 13,22,750 ರೂಪಾಯಿ ಆಗಿದೆ.
BSE ಪ್ರಕಟಿಸಿದ ಕಂಪನಿಯ 2020 ರ ವಾರ್ಷಿಕ ವರದಿಯ ಪ್ರಕಾರ ಅವರ CTC 8 ಕೋಟಿ ರೂಪಾಯಿ ಆಗಿದೆ. ಆದರೆ ಕಳೆದ ವರ್ಷ ಅವರು ಎಷ್ಟು ಸ್ವೀಕರಿಸಿದರು ಎಂಬ ಮಾಹಿತಿ ಸ್ಪಷ್ಟವಾಗಿಲ್ಲ. ಹಿನಾ ನಾಗರಾಜನ್ 2013 ರಲ್ಲಿ AmCham ಇಂಡಿಯಾ ರಾಷ್ಟ್ರೀಯ ಮಂಡಳಿಯ ಸದಸ್ಯರಾಗಿದ್ದರು. ಹಿನಾ ನಾಗರಾಜನ್ ಅವರು ದೇಶದಲ್ಲಿ ದೊಡ್ಡ ಪ್ರಮಾಣದ ಮದ್ಯದ ಕಂಪನಿಯನ್ನು ಮುನ್ನಡೆಸುತ್ತಿರುವ ಪ್ರಥಮ ಮಹಿಳೆಯಾಗಿದ್ದಾರೆ.
ಇನ್ನು ಹಲವಾರು ಮಹಿಳೆಯರು ವ್ಯಾಪಾರ ವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕಮಲಜಿತ್ ಕೌರ್ ಅಡುಗೆ ಮನೆಯಿಂದ ವ್ಯಾಪಾರ ಆರಂಭಿಸಿದ್ದು ಪ್ರಸ್ತುತ ತಿಂಗಳ ಸಂಪಾದನೆ 20 ಲಕ್ಷ ರೂಪಾಯಿ ಆಗಿದೆ. ಚಿನು ಕಲಾ ಅವರು ಕೂಡಾ ಪ್ರಸ್ತುತ ಭಾರತದ ಅತ್ಯಂತ ಸ್ಫೂರ್ತಿದಾಯಕ ಉದ್ಯಮಿಯಾಗಿದ್ದಾರೆ. 100 ಕೋಟಿಯ ಜ್ಯುವೆಲ್ಲರಿ ಬ್ರಾಂಡ್ ಹೊಂದಿರುವ ಚಿನುಕಾಲ ಬಿಎಂಡಬ್ಲ್ಯು ಕಾರಿನಲ್ಲಿ ಓಡಾಡುತ್ತಿದ್ದಾರೆ. ದೆಹಲಿಯ ಟಾಪ್ ವ್ಯಾಪಾರ ಉದ್ಯಮದ ಉತ್ತರಾಧಿಕಾರಿ, ಸ್ಟೈಲಿಶ್ ಆಯೇಷಾ ಥಾಪರ್ ಅವರು ಈಗ ಅಮೆರಿಕಾದಲ್ಲಿ ಯಶಸ್ವಿ ರೆಸ್ಟೊರೆಂಟರ್ ಆಗಿದ್ದಾರೆ.


Click it and Unblock the Notifications