ಮಾರುಕಟ್ಟೆಯಲ್ಲಿ ನಾವಿಂದು ಅನೇಕ ಬ್ರ್ಯಾಂಡ್‌ಗಳನ್ನು ನೋಡಬಹುದು. ಅಂತಹ ಬ್ರ್ಯಾಂಡ್ ಗಳ ಹುಟ್ಟಿಗೆ ಅದರ ಸಂಸ್ಥಾಪಕರು ಎದುರಿಸಿದ ಸಮಸ್ಯೆಗಳೇ ಕಾರಣ ಇರಬಹುದು. ಯಾಕೆಂದರೆ ಜೀವನದಲ್ಲಿ ಯಾವುದನ್ನೋ ಎದುರಿಸಲು ಹೋಗಿ ಇನ್ಯಾವುದೇ ರೂಪದಲ್ಲಿ ಆ ಸಮಸ್ಯೆಯೇ ವರವಾಗಿ ಅದನ್ನೇ ವ್ಯವಹಾರವಾಗಿ ಮಾರ್ಪಡಿಸಿದ ಅದೆಷ್ಟೋ ಉದಾಹರಣೆಗಳ ಲೇಖನಗಳನ್ನು ನೀವು ನಮ್ಮ ವೇದಿಕೆಯಲ್ಲಿ ಓದಿರುತ್ತೀರಿ..
ಈ ಸ್ಟೋರಿಯಲ್ಲಿ ವೈಯಕ್ತಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ ಬಳಿಕ ತಮ್ಮ ಸ್ವಂತ ಕಂಪನಿಯನ್ನು ಪ್ರಾರಂಭಿಸಿ ಉದ್ಯಮಿಗಳಾದ ದಂಪತಿಗಳ ಕುರಿತು ಹೇಳುತ್ತೇವೆ. ಇವರೇ ಸಲೋನಿ ಆನಂದ್ ಮತ್ತು ಆಕೆಯ ಪತಿ ಅಲ್ತಾಫ್ ಸೈಯದ್. ಅಲ್ತಾಫ್ ಅವರು ತಲೆ ಕೂದಲು ಉದುರುವಿಕೆ ಮತ್ತು ಇತರ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡಿದ ನಂತರ ದಂಪತಿಗಳು ತಲೆ ಕೂದಲ ರಕ್ಷಣೆ ಬೆಳವಣೆಗೆ "ತ್ರಯಾ"ಎಂಬ ವೇದಿಕೆಯನ್ನು ಸ್ಥಾಪಿಸಿದರು.

ತಲೆ ಕೂದಲು ಉದುರುವುದು ಕೇವಲ ನೀರಿನ ಗುಣಮಟ್ಟ, ಮಾಲಿನ್ಯ ಮತ್ತು ಕೆಮಿಕಲ್ ಟ್ರೀಟ್ಮೆಂಟ್ ಇದರಿಂದ ಮಾತ್ರವಲ್ಲ, ಇದಕ್ಕಿಂತಲೂ ಪ್ರಮುಖವಾಗಿ ಆರೋಗ್ಯ ಪರಿಸ್ಥಿತಿಗಳು ಇದಕ್ಕೆ ಅವಲಂಭಿತವಾಗಿದೆ ಎಂದು ಅವರು ಅರಿತುಕೊಂಡರು.ಹೀಗಾಗಿ ದಂಪತಿಗಳು ಸಮಸ್ಯೆಗೆ ಪರಿಹಾರ ಹುಡುಕುತ್ತಾ ಆಯುರ್ವೇದ ಮಾರುಕಟ್ಟೆಯನ್ನು ಅನ್ವೇಷಿಸುತ್ತಾ ಹೊರಟಾಗಲೇ "ತ್ರಯಾ" ದ ಪ್ರಯಾಣ ಆರಂಭವಾಯಿತು ಎಂದರೇ ತಪ್ಪಾಗಲಾರದು.
ಈ ಸಂದರ್ಭ ಅವರು ಕೂದಲು ಉದುರುವ ಸಮಸ್ಯೆಯನ್ನು ಅದರ ಮೂಲದಿಂದಲೇ ಅರ್ಥಮಾಡಿಕೊಳ್ಳುತ್ತಾರೆ. 2019 ರಲ್ಲಿ ತ್ರಯಾವನ್ನು ಪ್ರಾರಂಭಿಸಿದ್ದು, ಜನವರಿ 2022 ರಲ್ಲಿ, ಕಂಪನಿಯು ಫೈರ್‌ಸೈಡ್ ವೆಂಚರ್ಸ್ ನೇತೃತ್ವದ ಫಂಢಿಂಗ್ ರೌಂಡ್ ನಲ್ಲಿ $2.2 ಮಿಲಿಯನ್ ಸಂಗ್ರಹಿಸುವಲ್ಲಿ ಯಶಸ್ವಿಯಾಯಿತು.
ಸಲೋನಿ ಆನಂದ್ ಯಾರು?
ಸಲೋನಿ ಆನಂದ್ ಮೂಲತಃ ಟೆಕ್ಕಿಯಾಗಿದ್ದರು ಅವರೊಬ್ಬ ಮಾರ್ಕೆಟಿಯರ್ ಆಗಿ ಬದಲಾಗಿದ್ದಾರೆ. ಸಲೋನಿ ಅವರು ಹೈದರಾಬಾದ್‌ನಲ್ಲಿ ಅಲ್ತಾಫ್ ಅವರನ್ನು ಭೇಟಿಯಾಗಿದ್ದು, ಇವರಿಬ್ಬರು 2017 ರಲ್ಲಿ ದಂಪತಿಗಳಾದರು. ಸಲೋನಿ ಅವರು ತಮ್ಮ ಸ್ವಂತ ಕಂಪನಿ ಸ್ಥಾಪಿಸುವ ಮೊದಲು , ಹೆಲ್ತ್ ಕೇರ್ ಸಂಸ್ಥೆ ಕ್ಯಾಸ್ಟ್‌ಲೈಟ್‌ನಲ್ಲಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು. ಇದಾದ ಬಳಿಕ ಮಾರ್ಕೆಟಿಂಗ್‌ನಲ್ಲಿ ಎಂಬಿಎ ಪದವಿ ಪಡೆದರು. ನಂತರ ಮೂರು ವರ್ಷಗಳ ಕಾಲ SaaS ಸ್ಟಾರ್ಟ್ಅಪ್, Upshot.ai ನ ಮುಖ್ಯಸ್ಥರಾಗಿದ್ದರು.
33 ವರ್ಷದ ಸಲೋನಿ ಅವರ ಶೈಕಣಿಕ ಅರ್ಹತೆ ಬಗ್ಗೆ ಗಮನಿಸುವುದಾದರೆ, 2007-11ರಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ (B.tech) ನಲ್ಲಿ ಪದವಿ ಪೂರ್ಣಗೊಳಿಸಿದ್ದುಇದಾದ ಬಳಿಕ IBS ಹೈದರಾಬಾದ್‌ನಲ್ಲಿ (2013 - 2015) ಎಂಬಿಎ ವ್ಯಾಸಂಗ ಮಾಡಿದರು. ತ್ರಯಾ ಸ್ಥಾಪನೆಗೂ ಮೊದಲು, ಅಲ್ತಾಫ್ ಅವರು ತಮ್ಮದೇ ಫುಡ್ ಡೆಲಿವರಿ ಸ್ಟಾರ್ಟ್-ಅಪ್ ಬಿಲ್ಟ್2ಕುಕ್ ಅನ್ನು ನಡೆಸುತ್ತಿದ್ದರು. ಇದನ್ನು ಬಳಿಕ ಹ್ಯಾವ್ ಗೌರ್ಮೆಟ್( Hav Gourmet) ಎಂದು ಮರುನಾಮಕರಣ ಮಾಡಲಾಯಿತು.
ಅಲ್ತಾಪ್ ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಹಳೆಯ ವಿದ್ಯಾರ್ಥಿಯಾಗಿದ್ದು, ಐಲ್ಲಿ 2012-14 ರವರೆಗೆ ಅಧ್ಯಯನ ಮಾಡಿ ಎಂಬಿಎ ಪೂರ್ಣಗೊಳಿಸಿದ್ದಾರೆ. ಗ್ಲಾಸ್ಗೋ ವಿಶ್ವವಿದ್ಯಾನಿಲಯದಿಂದ (2002 - 2006) ಮೆಡಿಕಲ್ ಬಯೋ - ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿಯನ್ನು (BSc Hons) ಪಡೆದುಕೊಂಡಿದ್ದಾರೆ.


Click it and Unblock the Notifications