ಬಡತನದಿಂದ ಸಿರಿತನಕ್ಕೇರಿದ ಅನೇಕ ಉದ್ಯಮಿಗಳ ಕಥೆಗಳನ್ನು ನೀವು ನಮ್ಮ ವೇದಿಕೆಯಲ್ಲಿ ಓದಿರಬಹುದು. ಅವರ ಜೀವನ ಪ್ರಯಾಣದ ರೀತಿ, ತಾವು ಕೂಡಾ ಉದ್ಯಮಿಗಳಾಗಬೇಕು ಎನ್ನುವ ಮಹತ್ವಾಕಾಂಕ್ಷಿ ಹೊಂದಿರುವ ಯುವಕ ಯುವತಿಯರಿಗೆ ನಿಜಕ್ಕೂ ದಾರಿದೀಪಗಳಾಗಿವೆ.
ಇಂತಹ ವ್ಯಕ್ತಿಗಳಲ್ಲಿ ರಘುನಂದನ್ ಶ್ರೀನಿವಾಸ್ ಕಾಮತ್ ಕೂಡಾ ಓರ್ವರಾಗಿದ್ದಾರೆ. ಹಾಗಿದ್ರೆ ರಘುನಂದನ್ ಶ್ರೀನಿವಾಸ್ ಕಾಮತ್ ಯಾರು? ಅವರು ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ನಿರ್ಮಿಸಿದ್ದು ಹೇಗೆ?, ಇಲ್ಲಿದೆ ವಿವರ ಮುಂದೆ ಓದಿ..

ರಘುನಂದನ್ ಶ್ರೀನಿವಾಸ್ ಕಾಮತ್ ಯಾರು?
ರಘುನಂದನ್ ಶ್ರೀನಿವಾಸ್ ಕಾಮತ್ ನ್ಯಾಚುರಲ್ಸ್ ಐಸ್ ಕ್ರೀಮ್ ಸಂಸ್ಥಾಪಕರಾಗಿದ್ದಾರೆ. ಕರ್ನಾಟಕ ಕರಾವಳಿಯ ಮಂಗಳೂರು ಸನಿಹದ ಮೂಲ್ಕಿಯಲ್ಲಿ 1954 ರಲ್ಲಿ ಜನಿಸಿದ ಇವರು, ಏಳು ಮಂದಿ ಒಡಹುಟ್ಟಿದವರಲ್ಲಿ ಕಿರಿಯರಾಗಿದ್ದರು. ಬಡತನದಲ್ಲಿ ಜನಿಸಿದರೂ ರಘುನಂದನ್ ಸ್ವಗ್ರಾಮದಲ್ಲಿ ಹೆತ್ತವರ ಸುಂದರವಾದ ಪಾಲನೆಯಲ್ಲಿ ಬೆಳೆದರು.
ರಘುನಂದನ್ ಅವರ ತಂದೆ ಹಣ್ಣಿನ ವ್ಯಾಪಾರಿಯಾಗಿದ್ದು, ಇದರಲ್ಲಿ ಬಂದ ಅಲ್ಪ ಸ್ವಲ್ಪ ಸಂಪಾದನೆಯಿಂದ ಸಂಸಾರವನ್ನು ಪಾಲಿಸಬೇಕಾಗಿತ್ತು. ಮಂಗಳೂರು ಬಳಿಯ ಪುಟ್ಟಹಳ್ಳಿಯಲ್ಲಿ ಕಾಮತ್ ಅವರು, ತಮ್ಮ ತಂದೆಯ ವ್ಯಾಪಾರದಲ್ಲಿ ಸಹಾಯ ಮಾಡುತ್ತಾ ಬೆಳೆದರು.
ಬಾಲಕನಾಗಿದ್ದಾಗಲೇ ರಘುನಂದನ್, ಹಣ್ಣುಗಳನ್ನು ಕೀಳುವುದು, ಆರಿಸುವುದು, ಮಾಗಿದ ಹಣ್ಣುಗಳನ್ನು ಪ್ರತ್ಯೇಕಿಸುವುದು ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ತಂದೆ ಮಾಡುತ್ತಿದ್ದ ಉದ್ಯೋಗ ನಂಬಿಕೊಂಡರೆ ಮುಂದೆ ಬದುಕು ಕಷ್ಟವೆಂದು 1984ರ ಫೆಬ್ರವರಿ 14ರಂದು ಮಂಗಳೂರಿನಿಂದ ಬಾಂಬೆಗೆ ತೆರಳಿದರು.
ಮುಂಬೈನಲ್ಲಿ ಮೊದಲ ಬಾರಿಗೆ ಸ್ಥಾಪನೆ
ಅಣ್ಣನ ಹೋಟೆಲ್‌ನಲ್ಲಿ ಕೆಲ ಕಾಲ ಕೆಲಸ ಮಾಡಿ ಬಳಿಕ 1984 ರಲ್ಲಿ ಕಾಮತ್ ಅವರು ತಮ್ಮ ಮೊದಲ ನ್ಯಾಚುರಲ್ಸ್ ಐಸ್ ಕ್ರೀಮ್ ಮುಂಬೈನ ಜುಹುದಲ್ಲಿ ಸ್ಥಾಪಿಸಿದರು. ಆದರೂ ತಾವು ತಯಾರಿಸಿದ ನ್ಯಾಚುರಲ್ಸ್ ಹಣ್ಣಿನ ಐಸ್ ಕ್ರೀಂ ಐಸ್ ಕ್ರೀಮ್‌ಗಳನ್ನು ಸವಿಯಲೆಂದೇ ಗ್ರಾಹಕರು ಬರಬಹುದೇ ಎಂಬ ಅನುಮಾನ ಕಾಮತ್‌ಗೆ ಅವರಿಗೆ ಕಾಡಿದ ಕಾರಣ ತಮ್ಮ ಹೊಟೇಲ್ ನ ಪಾವ್ ಭಾಜಿಯನ್ನು ಮುಖ್ಯ ಡಿಶ್ ಆಗಿ ಹಾಗೂ ಐಸ್ ಕ್ರೀಮ್ ಅನ್ನು ಸೈಡ್ ಡಿಶ್ ಆಗಿ ಪರಿಚಯಪಡಿಸುವ ಮೂಲಕ ತಮ್ಮ ವ್ಯವಹಾರವನ್ನು ಪ್ರಾರಂಭಿಸಿದರು.
ಮೊದಲಿಗೆ, ತಮ್ಮ ಹೊಟೇಲ್‌ನಲ್ಲಿ 12 ಸ್ವಾದಗಳ ಐಸ್ ಕ್ರೀಮ್ ಪರಿಚಯಿಸಿದ್ದರು. ಆದರೆ ಮುಂದೆ ಇದು ಉಪಹಾರ ಗೃಹದಿಂದ ಪೂರ್ಣ ಪ್ರಮಾಣದ ಐಸ್ ಕ್ರೀಂ ಪಾರ್ಲರ್ ಆಗಿ ಅಭಿವೃದ್ಧಿಗೊಂಡಿತು. ಇಂದು, ನ್ಯಾಚುರಲ್ಸ್ ಬ್ರ್ಯಾಂಡ್ ದೇಶಾದ್ಯಂತ ವಿವಿಧ ನಗರಗಳಲ್ಲಿ 135 ಔಟ್‌ಲೆಟ್‌ಗಳನ್ನು ಹೊಂದಿದೆ. 2020 ರಲ್ಲಿ, ನ್ಯಾಚುರಲ್ ಐಸ್ ಕ್ರೀಮ್ 300 ಕೋಟಿ ಚಿಲ್ಲರೆ ವಹಿವಾಟು ವರದಿ ಮಾಡಿದೆ. ಕೆಪಿಎಂಜಿ ಸಮೀಕ್ಷೆಯ ಪ್ರಕಾರ, ಗ್ರಾಹಕರ ತೃಪ್ತಿಗಾಗಿ ಇದು ಭಾರತದ ಟಾಪ್ 10 ಬ್ರ್ಯಾಂಡ್‌ಗಳಲ್ಲಿ ಸ್ಥಾನ ಪಡೆದಿದೆ.


Click it and Unblock the Notifications