ಒಂದು ಕಾಲದಲ್ಲಿ ಯುವಕರ ಕನಸಿನ ರಾಣಿಯಾಗಿ ಮೆರೆದಿದ್ದ 1995 -2000ರವರೆಗೆ ಬಾಲಿವುಡ್‌ನ ಉದಯೋನ್ಮುಖ ನಟಿಯಾಗಿದ್ದ ಮಯೂರಿ ಕಾಂಗೋ ನರ್ಗೀಸ್ ಅವರ ಸ್ಟೋರಿ ನಿಜಕ್ಕೂ ಆಸಕ್ತಿದಾಯಕವಾಗಿದೆ. 1995 ರಲ್ಲಿ ತೆರೆಕಂಡ 'ನಸೀಮ್' ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಮಯೂರಿ, 1996 ರ ಪಾಪಾ ಕೆಹ್ತೆ ಹೇ ಚಿತ್ರ ತೆರೆಕಂಡ ನಂತರ ಸಾಕಷ್ಟು ಜನಪ್ರಿಯರಾದರು.
ಹಿಟ್ ಹಾಡುಗಳಲ್ಲಿಒಂದಾದ 'ಘರ್ ಸೆ ನಿಕಲ್ತೆ ಹಿ' ನಲ್ಲಿಯೂ ಕಾಣಿಸಿಕೊಂಡಿದ್ದರು .ಇದಾದ ಬಳಿಕ ಪ್ಯಾರ್ ಕಿ ಜೀತ್ ಚಿತ್ರದಲ್ಲಿ ನಟಿಸಿದ್ದರು. 2000 ರಲ್ಲಿ ಬಿಡುಗಡೆಗೊಂಡ ವಂಶಿ ಅವರ ಕೊನೆಯ ಸಿನಿಮಾವಾಗಿತ್ತು. ನಟಿ ಮಯೂರಿ ಕಾಂಗೋ ನರ್ಗೀಸ್ ಸಿನಿಮಾಕ್ಕೂ ಮುಂಚೆ ಸೀರಿಯಲ್ ಗಳಲ್ಲೂ ನಟಿಸಿದ್ದರು. ಥೋಡ ಘಮ್ ಥೋಡಿ ಖುಷಿ, ಡಾಲರ್ ಬಾಬು ಮತ್ತು ಕಿಟಿ ಪಾರ್ಟಿ ಮುಂತಾದ ಟೆಲಿವಿಷನ್ ಶೋಗಳಲ್ಲೂ ಕಾಣಿಸಿಕೊಂಡಿದ್ದರು.

2003 ರಲ್ಲಿ, ನಟನೆಗೆ ಗುಡ್ ಬೈ ಹೇಳಿದ ನರ್ಗೀಸ್ ಅವರು ಔರಂಗಾಬಾದ್‌ನಲ್ಲಿ ಅನಿವಾಸಿ ಭಾರತೀಯ (ಎನ್‌ಆರ್‌ಐ) ಆದಿತ್ಯ ಧಿಲ್ಲೋನ್ ಅವರನ್ನು ವಿವಾಹವಾದರು. 1995 ರಲ್ಲಿ ಸೈಯದ್ ಅಖರ್ ಅವರ ನಸೀಮ್ ಚಿತ್ರದಲ್ಲಿ ಮಯೂರಿ ಅವರಿಗೆ ಮೊದಲ ಬ್ರೇಕ್ ಸಿಕ್ಕಿತು. ಅವರ ನಟನೆಯಿಂದ ಪ್ರಭಾವಿತರಾದ ನಿರ್ದೇಶಕ ಮಹೇಶ್ ಭಟ್ "ಪಾಪಾ ಕೆಹ್ತೆ ಹೈ" ಚಿತ್ರಕ್ಕೆ ಆಫರ್ ನೀಡಿದರು. ಈ ವೇಳೆ ಅವರು 12 ನೇ ತರಗತಿ (ಪಿಯುಸಿ ) ಓದುತ್ತಿದ್ದರು.
ಇದಾದ ಬಳಿಕ ಮಯೂರಿ ಕಾಂಗೋ ಅವರು ಹಲವಾರು ಪಾತ್ರಗಳನ್ನು ನಿರ್ವಹಿಸಿದರು ಯಶಸ್ಸನ್ನು ಪಡೆಯಲಿಲ್ಲ. ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಇವರೊಂದಿಗೂ ಮಯೂರಿ ನಟಿಸಿದ್ದಾರೆ. ವಿವಾಹದ ಬಳಿಕ ಮಯೂರಿ ತನ್ನ ಪತಿಯೊಂದಿಗೆ ಅಮೆರಿಕಾಕ್ಕೆ ತೆರಳಿ ಅಲ್ಲಿ ಮಾರ್ಕೆಟಿಂಗ್ ಮತ್ತು ಫೈನಾನ್ಸ್‌ನಲ್ಲಿ ತನ್ನ ಎಂಬಿಎ ಪದವಿ ಪೂರ್ಣಗೊಳಿಸಿದರು. ಇದಾದ ಬಳಿಕ 2004ರಿಂದ 2012 ರ ನಡುವಿನ ಅವಧಿಯಲ್ಲಿ ಅಮೆರಿಕಾದಲ್ಲಿ ಉದ್ಯೋಗ ಸೇರಿ ಕೆಲಸ ಮಾಡಿ 2013 ರಲ್ಲಿ ಭಾರತಕ್ಕೆ ಹಿಂತಿರುಗಿದರು.
ಈ ದಂಪತಿಗಳಿಗೆ ಕಿಯಾನ್ ಎಂಬ ಪುತ್ರನಿದ್ದಾನೆ. ಭಾರತದಲ್ಲಿ ಅವರು ಪರ್ಫಾರ್ಮಿಕ್ಸ್ ಎಂಬ ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದರು. 2019 ರಲ್ಲಿ ಗೂಗಲ್ ಇಂಡಿಯಾವನ್ನುಸೇರ್ಪಡೆಗೊಂಡ ಮಯೂರಿ ಕಾಂಗೋ ನರ್ಗೀಸ್ ಇಂಡಸ್ಟ್ರಿ ಹೆಡ್ ಆಗಿ ಕಾರ್ಯನಿರ್ವಹಿಸಿದರು. ಮಯೂರಿ ಕಾಂಗೋ ಅವರು ಬರೂಚ್ ಕಾಲೇಜ್ ಜಿಕ್ಲಿನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ತಮ್ಮ ಎಂಬಿಎ ಪಡೆದುಕೊಂಡಿದ್ದಾರೆ.
"ನಾನೊಬ್ಬಳು ಪ್ಯಾಶನೇಟ್ ಮಾರ್ಕೇಟರ್. ಡಿಜಿಟಲ್ ಮಾಧ್ಯಮ ಮತ್ತು ಆ ಹೊಸ ಜಗತ್ತಿನಲ್ಲಿ ಮಾರ್ಕೆಟಿಂಗ್ ಮಾಡುವ ಸಾಧ್ಯತೆಗಳು ಈ ಎಲ್ಲವನ್ನು ನಾನು ಪ್ರೀತಿಸುತ್ತೇನೆ. ನಾನು ಯಾವಾಗಲೂ ಹೊಸ ವಿಚಾರಗಳನ್ನು ಕಲಿಯಲು ಮತ್ತು ಹೊಸ ಸವಾಲುಗಳನ್ನು ಎದುರಿಸಲು ಉತ್ಸುಕಳಾಗಿರುತ್ತೇನೆ. ನನ್ನ ಗ್ರಾಹಕರು ಮತ್ತು ಕಂಪನಿಗೆ ಉತ್ತಮ ಬಿಸಿನೆಸ್ ಸೊಲ್ಯೂಷನ್ಸ್ ಗಳನ್ನು ಒದಗಿಸುವ ಸಲುವಾಗಿ ತಿಳುವಳಿಕೆಯುಳ್ಳ ಮಾರ್ಕೇಟರ್ ಆಗುವುದು ನನ್ನ ಪ್ರಾಥಮಿಕ ಉದ್ದೇಶವಾಗಿದೆ" ಎಂದು ಮಯೂರಿ ಕಾಂಗೋ ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾರೆ.
ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಮಯೂರಿ ಕಾಂಗೋ ನರ್ಗೀಸ್ 2019 ರಿಂದ ಗೂಗಲ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಕುತೂಹಲಕಾರಿ ಸಂಗತಿ ಎಂದರೆ ಮಯೂರಿ ಐಐಟಿ ಕಾನ್ಪುರಕ್ಕೆ ಆಯ್ಕೆಯಾಗಿದ್ದು, ನಟಿಯಾಗಬೇಕೆಂಬ ಬಯಕೆಯಿಂದ ಅವಳು ಪ್ರವೇಶ ಪಡೆದುಕೊಂಡಿರಲಿಲ್ಲ. ಅವರು ನಟಿಸಿರುವ 16 ಚಿತ್ರಗಳು ಬಿಡುಗಡೆಯಾಗಲಿಲ್ಲ. ಐಐಟಿ ಪದವೀಧರರಾದ ಸುಂದರ್ ಪಿಚೈ ಅವರು ಗೂಗಲ್ ಮುಖ್ಯಸ್ಥರಾಗಿದ್ದಾರೆ.


Click it and Unblock the Notifications