ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಿಂದ ಐಟಿ ಪದವಿ ಪಡೆದ ಅನೇಕ ಪದವೀಧರರು ಜಗತ್ತಿನ ದೊಡ್ಡ ದೊಡ್ಡ ಐಟಿ ಕಂಪನಿಗಳಲ್ಲಿ ಉನ್ನತವಾದ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದ ಅನೇಕ ದೊಡ್ಡ ಕಾರ್ಪೊರೇಟ್ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ. ಇನ್ನು ಕೆಲವರು ಪದವಿ ಪಡೆದ ಬಳಿಕ, ಉದ್ಯೋಗನ್ನೇ ನೆಚ್ಚಿಕೊಳ್ಳುವ ಬದಲು ತಮ್ಮದೇ ಆದ ಉದ್ಯಮ, ಸ್ಟಾರ್ಟ್‌ಅಪ್ ಹೀಗೆ ಏನಾದರೊಂದು ಸಾಹಸ ಮಾಡಲು ಇಚ್ಚಿಸುತ್ತಾರೆ.
ಈ ಪೈಕಿ ಕೆಲವರು ತಮ್ಮ ವ್ಯವಹಾರಗಳಲ್ಲಿ ಅನೇಕ ಬಾರಿ ವೈಫಲ್ಯಗಳನ್ನೇ ಅನುಭವಿಸಿ ಕೊನೆಗೆ ಯಶಸ್ವಿಯ ಹಾದಿ ಹಿಡಿಯುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಅಂಕುಶ್ ಸಚ್‌ದೇವ ಕೂಡಾ ಒಬ್ಬರಾಗಿದ್ದಾರೆ. ಇವರು ಶೇರ್‌ಚಾಟ್ ನ ಸಹ- ಸ್ಥಾಪಕರಾಗಿದ್ದಾರೆ. ಇದೊಂದು ಸ್ಥಳೀಯ ಭಾಷೆಯ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ.

17 ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸಿದ್ದ ಸಚ್‌ದೇವ್
ಶೇರ್ ಚಾಟ್ ಇಂದು ಯಶಸ್ವಿಯಾಗಿದ್ದರೂ ಅದಕ್ಕೂ ಮುಂಚೆ ಅವರು 17 ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸಿದ್ದರು. ಆದರೆ ಅದೆಲ್ಲವೂ ವಿಫಲವಾದ ಕಾರಣ ಯಶಸ್ಸು ಅವರ ಕೈ ಹಿಡಿಯಲಿಲ್ಲ. ಇದರ ನಂತರ, ಅವರ 18 ನೇ ಪ್ರಯತ್ನದಲ್ಲಿ, ಸಚ್‌ದೇವ ಅವರ ಇಬ್ಬರು ಐಐಟಿಯ ಸ್ನೇಹಿತರಾದ ಫರೀದ್ ಅಹ್ಸನ್ ಮತ್ತು ಭಾನು ಸಿಂಗ್ ಸಹಕಾರದೊಂದಿಗೆ ಶೇರ್‌ಚಾಟ್ ಅಪ್ಲಿಕೇಶನ್ ಹುಟ್ಟುಹಾಕಿದರು.
ಮೂರು ಸಹ-ಸಂಸ್ಥಾಪಕರು ಕೂಡ ನವೆಂಬರ್ 2014 ರಲ್ಲಿ ಭಾರತೀಯ ಭಾಷೆಯಲ್ಲಿ ವಿಷಯವನ್ನು ಹೆಚ್ಚಾಗಿ ಬಯಸುವ ಫೇಸ್‌ಬುಕ್ ಮತ್ತು ವಾಟ್ಸಾಪ್‌ನಲ್ಲಿ ಹೊಸ ಪೇಕ್ಷಕರ ಗುಂಪನ್ನು ಗುರುತಿಸಿದರು. 2015 ರ ಜನವರಿಯಲ್ಲಿ ಶೇರ್‌ಚಾಟ್‌ನ ಮೂಲ ಕಂಪನಿಯಾದ ಮೊಹಲ್ಲಾ ಟೆಕ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸಿದರು.
ಬಳಿಕ 2015 ರ ಅಕ್ಟೋಬರ್ ನಲ್ಲಿ ಶೇರ್‌ಚಾಟ್ ಅನ್ನು ಆರಂಭಿಕವಾಗಿ ನಾಲ್ಕು ಭಾಷೆಗಳಲ್ಲಿ ಅಂದರೆ ಹಿಂದಿ, ತೆಲುಗು, ಮಲಯಾಳಂ ಮತ್ತು ಮರಾಠಿಯಲ್ಲಿ ಪ್ರಾರಂಭಿಸಿದರು. ಪ್ರಸ್ತುತ, ಸಚ್‌ದೇವ ಶೇರ್‌ಚಾಟ್‌ನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದು ಅವರು ಐಐಟಿ ಕಾನ್ಪುರದಿಂದ (2011-15) ಸ್ನಾತಕೋತ್ತರ ಪದವಿ (ಕಂಪ್ಯೂಟರ್ ವಿಜ್ಞಾನದಲ್ಲಿ ಬಿ.ಟೆಕ್) ಪದವಿ ಪಡೆದಿದ್ದಾರೆ.
ಇವರು ಸೋಮರ್ವಿಲ್ಲೆ ಶಾಲೆಯಲ್ಲಿ ತಮ್ಮ ಹಿರಿಯ ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಇವರು ಮೈಕ್ರೋಸಾಫ್ಟ್‌ನಲ್ಲಿ ಮೇ ನಿಂದ ಜುಲೈ 2014 ರವರೆಗೆ ಇಂಟರ್ನ್ ಆಗಿದ್ದರು. ಇವರ ಕಂಪನಿಯು ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಭಾರತ, ಯುಎಸ್ ಮತ್ತು ಯುರೋಪ್‌ನಾದ್ಯಂತ ತನ್ನ ತಂಡವನ್ನು ಜಾಗತಿಕವಾಗಿ ಬೆಳೆಸುತ್ತಿದೆ.
ಕಂಪನಿಯು ಕೊನೆಯದಾಗಿ ಈಕ್ವಿಟಿ ಫಂಡಿಂಗ್ ಅನ್ನು ಸುಮಾರು 5 ಶತಕೋಟಿ ಯುಎಸ್ ಡಾಲರ್ ಮೌಲ್ಯದಲ್ಲಿ ಸಂಗ್ರಹಿಸಿದ್ದುಇದು 40,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು (ಜೂನ್ 2022 ರಂತೆ) ಆಗಿದೆ. ಕಂಪನಿಯು ಗೂಗಲ್‌ನಿಂದ ಬೆಂಬಲಿತವಾಗಿದ್ದು 1000ಕ್ಕೂ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ.


Click it and Unblock the Notifications