ಎಡೆಲ್ ಗಿವ್ ಹುರುನ್ ಇಂಡಿಯಾ ಫಿಲಾಂತ್ರಪಿ ಲಿಸ್ಟ್ 2022 ರ ಪ್ರಕಾರ ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರ ಪತ್ನಿ ರೋಹಿಣಿ ನಿಲೇಕಣಿ ಭಾರತದ ಅತ್ಯಂತ ಉದಾರವಾಗಿ ದಾನ ಮಾಡುವ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಯಾಕೆಂದರೆ 2021-22ನೇ ಸಾಲಿನಲ್ಲಿ ಅವರು 120 ಕೋಟಿ ರೂಪಾಯಿಗಳನ್ನು ದಾನದ ರೂಪದಲ್ಲಿ ನೀಡಿದ್ದಾರೆ.
ರೋಹಿಣಿಯವರು ಹೆಚ್ಚಿನ ದೇಣಿಗೆಗಳೆಲ್ಲವೂ ಇಕೋಲಜಿ (ಪರಿಸರ ವಿಜ್ಞಾನ), ನೈರ್ಮಲ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಕ್ಷೇತ್ರಗಳಿಗೆ ಹೆಚ್ಚು ಹಂಚಿ ಹೋಗಿದೆ. ಲೋಕೋಪಕಾರಿ ಪಟ್ಟಿಯಲ್ಲಿ ನಿಲೇಕಣಿ ಅವರು 11ನೇ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಸಾಮಾಜಿಕ ಕಾರಣಗಳಿಗಾಗಿ 21 ಕೋಟಿ ರೂ. ವಿನಿಯೋಗಿಸಿದ ಯುಎಸ್ವಿಯ ಲೀನಾ ಗಾಂಧಿ ತಿವಾರಿ ಇದ್ದಾರೆ.

ರೋಹಿಣಿ ನಿಲೇಕಣಿ ಅವರು ಪ್ರತಿಷ್ಠಿತ ಪಬ್ಲಿಷರ್ ಗಳಿಗಾಗಿ ಕೆಲಸ ಮಾಡುವ ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಲಾಭರಹಿತ ಶೈಕ್ಷಣಿಕ ವೇದಿಕೆಯಾಗಿರುವ EkStep ಮತ್ತು ಲಾಭರಹಿತ ಮಕ್ಕಳ ಪ್ರಕಾಶಕ ಪ್ರಥಮ್ ಬುಕ್ಸ್‌ನ ಸ್ಥಾಪಕ ಪಾಲುದಾರರಾಗಿದ್ದಾರೆ.ಇದಲ್ಲದೇ ಸುಸ್ಥಿರ ನೀರು ಮತ್ತು ನೈರ್ಮಲ್ಯಕ್ಕಾಗಿ ರಾಷ್ಟ್ರೀಯ ಯೋಜನೆಗಳನ್ನು ಉತ್ತೇಜಿಸಲು,ಅವರು ಅರ್ಘ್ಯಮ್ ಫೌಂಡೇಶನ್ ಅನ್ನು ಸಹ ಸ್ಥಾಪಿಸಿದ್ದಾರೆ.
ರೋಹಿಣಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದು ಅವರ ತಾಯಿ ಗೃಹಿಣಿಯಾಗಿದ್ದು, ತಂದೆ ಇಂಜಿನಿಯರ್ ಆಗಿದ್ದರು. ಅವರು ಎಲ್ಫಿನ್‌ಸ್ಟೋನ್ ಕಾಲೇಜಿನಲ್ಲಿ ಫ್ರೆಂಚ್ ಸಾಹಿತ್ಯದಲ್ಲಿ ಪದವಿ ಪಡೆದುಕೊಂಡಿದ್ದಾರೆ.
ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ರೋಹಿಣಿ 1980 ರಲ್ಲಿ ಈಗ ನಿಷ್ಕ್ರಿಯವಾಗಿರುವ ಬಾಂಬೆ ಮ್ಯಾಗಜೀನ್‌ನಲ್ಲಿ ವರದಿಗಾರರಾಗಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ನಂತರ ಬೆಂಗಳೂರಿನಲ್ಲಿ ಸಂಡೇ ಮ್ಯಾಗಜೀನ್‌ಗಾಗಿ ಕೆಲಸ ಮಾಡಿದರು.
ಡಿಸೆಂಬರ್ 31, 2022 ರ ಕಾರ್ಪೊರೇಟ್ ಷೇರುದಾರರ ದಾಖಲೆಗಳ ಪ್ರಕಾರ, ರೋಹಿಣಿ ನಿಲೇಕಣಿ ಅವರು ಸಾರ್ವಜನಿಕವಾಗಿ ಒಂದು ಈಕ್ವಿಟಿಯನ್ನು ಹೊಂದಿದ್ದು, ಇದು ಟ್ರೆಂಡ್‌ಲೈನ್ ಪ್ರಕಾರ 4,878.0 ಕೋಟಿ ರೂಪಾಯಿ ಆಗಿದೆ. ನಿಲೇಕಣಿ ಕುಟುಂಬದ ನಿವ್ವಳ ಸಂಪತ್ತು ಪ್ರಸ್ತುತ $1.7 ಬಿಲಿಯನ್ ಎಂದು ಅಂದಾಜಿಸಲಾಗಿದೆ.


Click it and Unblock the Notifications