ನೂರಾರು ಟ್ರಕ್‌ಗಳ ಮಾಲೀಕರಾಗಿರುವ ವಿಜಯ ಸಂಕೇಶ್ವರ ಅವರು ಶ್ರೀಮಂತರಾಗಿ ಬೆಳೆದಿರುವ ಕಥೆಯು ಸಾವಿರಾರು ಮಂದಿಗೆ ಸ್ಫೂರ್ತಿ ನೀಡುವಂಥದ್ದು. 1970ರ ದಶಕದಲ್ಲಿ ಸ್ವಂತ ಲಾಜಿಸ್ಟಿಕ್ಸ್ ಸಂಸ್ಥೆಯನ್ನು ಕೇವಲ ಒಂದು ಟ್ರಕ್‌ನೊಂದಿಗೆ ಪ್ರಾರಂಭಿಸಿದ ವಿಜಯ ಸಂಕೇಶ್ವರ ಅವರು ಮುಂದೆ ಬಹುದೊಡ್ಡ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಕರ್ನಾಟಕದ ಹುಬ್ಬಳ್ಳಿಯಲ್ಲಿ ಸಾರಿಗೆ ದೊರೆ ಎಂಬ ಬಿರುದು ಪಡೆದುಕೊಂಡಿದ್ದಾರೆ.
ವಿಜಯ ಸಂಕೇಶ್ವರ ಅವರು ಪ್ರಿಂಟಿಂಗ್ ಪ್ರೆಸ್ ವ್ಯವಹಾರದ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಆದರೆ ಅವರು ತಮ್ಮ ಪೋಷಕರ ಇಚ್ಛೆಗೆ ವಿರುದ್ಧವಾಗಿ ತಮ್ಮದೇ ಉದ್ಯಮವನ್ನು ಪ್ರಾರಂಭಿಸಿದ್ದರು. 1976ರಲ್ಲಿ ಅವರು ಬೇರೆಯವರಿಂದ ಹಣವನ್ನು ಸಾಲ ಪಡೆದುಕೊಂಡು ಒಂದು ಟ್ರಕ್ ಅನ್ನು ಖರೀದಿಸಿದ್ದರು. ಆದರೆ ಪ್ರಾರಂಭಿಕ ದಶಕದಲ್ಲಿ ಅವರು ಡ್ರೈವರ್‌ಗಳಿಂದ ಹಿಡಿದು ಗ್ರಾಹಕರವರೆಗೆ ಎಲ್ಲರನ್ನು ಒಗ್ಗೂಡಿಸಿಕೊಂಡು ವ್ಯಾಪಾರವನ್ನು ನಡೆಸುವುದಕ್ಕೆ ಬಹಳ ಸವಾಲು-ಸಮಸ್ಯೆಗಳನ್ನು ಎದುರಿಸಿದ್ದರು. ಏಕೆಂದರೆ, ಆ ಕಾಲದಲ್ಲಿ ಈ ಅಸಂಘಟಿತ ವಲಯದಲ್ಲಿ ಅದಕ್ಕೆ ಪೂರಕವಾಗುವ ತಂತ್ರಜ್ಞಾನ ವ್ಯವಸ್ಥೆ ಇರಲಿಲ್ಲ.

ವಿಜಯ ಸಂಕೇಶ್ವರ ಅವರು ಈ ನಡುವೆ ಸಾಕಷ್ಟು ಲಾಜಿಸ್ಟಿಕ್ ಹಾಗೂ ಆರ್ಥಿಕ ಅಡೆ-ತಡೆಗಳನ್ನು ಎದುರಿಸಿದ್ದರು. ಆದರೆ ತಮ್ಮ ಛಲ ಹಾಗೂ ಪರಿಶ್ರಮವನ್ನು ಯಾವತ್ತೂ ಬಿಡದ ಪರಿಣಾಮ ವಿಜಯಾನಂದ ರೋಡ್‌ಲೈನ್ಸ್ ಎಂಬ ಕಂಪನಿಯನ್ನು ಸ್ಥಾಪಿಸಿದರು. 1994ರಲ್ಲಿ ಕಂಪನಿಯು ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಸಾಧಿಸಲು ಪ್ರಾರಂಭಿಸಿದಾಗ ಅದಕ್ಕೆ ವಿಆರ್‌ಎಲ್ ಎಂದು ಮರುನಾಮಕರಣ ಮಾಡಿದರು. ಆ ವೇಳೆಗೆ ಒಂದು ಟ್ರಕ್‌ನಿಂದ 150 ಟ್ರಕ್‌ಗಳಿಗೆ ವಿಆರ್‌ಎಲ್ ಏರಿಕೆಯಾಗಿತ್ತು.
1996ರಲ್ಲಿ ವಿಜಯ ಸಂಕೇಶ್ವರ ಅವರು ವಾಣಿಜ್ಯ ಸಾರಿಗೆ ಜತೆಗೆ ಪ್ರಯಾಣಿಕರ ಸೇವೆಯನ್ನು ಪ್ರಾರಂಭಿಸುವ ಮೂಲಕ ತಮ್ಮ ಉದ್ಯಮವನ್ನು ಮತ್ತಷ್ಟು ವಿಸ್ತರಿಸಿದರು. ವಿಜಯಾನಂದ ಟ್ರವೆಲ್ಸ್ ಹೆಸರಿನಲ್ಲಿ ನೂರಾರು ಖಾಸಗಿ ಬಸ್ ಸೇವೆಯನ್ನು ಪ್ರಾರಂಭಿಸಿದರು. ಮುಂದೆ ವಿಆರ್‌ಎಲ್ ಲಾಜಿಸ್ಟಿಕ್ ಲಿಮಿಟೆಡ್ ಹೆಸರಿನಲ್ಲಿ ತಮ್ಮ ವ್ಯಾಪಾರ- ಉದ್ಯಮವನ್ನು ಬೇರೆ ಕ್ಷೇತ್ರಗಳಿಗೂ ವಿಸ್ತರಿಸಿಕೊಂಡರು.
ಪ್ರಸ್ತುತ ವಿಜಯ ಸಂಕೇಶ್ವರ ಅವರು ತಮ್ಮ ಮಗ ಆನಂದ ಸಂಕೇಶ್ವರ ಅವರ ಜತೆಗೆ ಸೇರಿಕೊಂಡು ಅನೇಕ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಪೈಕಿ, ವಿಂಡ್ ಎನರ್ಜಿ ಪ್ರಾಜೆಕ್ಟ್, ಮಾಧ್ಯಮ, ಏರ್ ಚಾರ್ಟರ್ ಸೇವೆಯೂ ಸೇರಿದೆ. ಸದ್ಯ ಅವರು ವಿಜಯವಾಣಿ ಹೆಸರಿನ ದಿನಪತ್ರಿಕೆ ಹಾಗೂ ದಿಗ್ವಿಜಯ ಹೆಸರಿನ ಕನ್ನಡ ನ್ಯೂಸ್ ಚಾನೆಲ್ ಅನ್ನು ಕೂಡ ನಡೆಸುತ್ತಿದ್ದಾರೆ. ವಿಆರ್‌ಎಲ್ ಲಾಜಿಸ್ಟಿಕ್ ಲಿಸ್ಟೆಡ್ ಕಂಪನಿಯಾಗಿದ್ದು, 6,000 ಕೋಟಿ ರೂ. ಮಾರ್ಕೆಟ್ ಕ್ಯಾಪ್ ಅನ್ನು ಹೊಂದಿದೆ. 2022ರಲ್ಲಿ ವಿಜಯ ಸಂಕೇಶ್ವರ ಅವರ ಜೀವನ ಕಥೆ ಆಧಾರಿತ ವಿಜಯಾನಂದ ಎಂಬ ಹೆಸರಿನ ಚಲನಚಿತ್ರ ಕೂಡ ನಿರ್ಮಾಣವಾಗಿ ಪ್ರದರ್ಶನ ಕಂಡಿದೆ.


Click it and Unblock the Notifications