1649 ಕೋಟಿ ರೂ ಮೌಲ್ಯದ ವಿಶ್ವದ ಅತ್ಯಂತ ದುಬಾರಿ ಮನೆ ಹೊಂದಿರುವ ಭಾರತೀಯ ದಂಪತಿಗಳಿವರು!

ಸಿನಿಮಾಗಳಲ್ಲಿ ತೋರಿಸುವ ಅಧ್ಬುತ, ಐಷಾರಾಮಿ ವಿಲ್ಲಾ ಅಥವಾ ಅರಮನೆಯಂತಹ ಮನೆ ತಮ್ಮದಾಗಬೇಕೆಂದು ಪ್ರತಿಯೊಬ್ಬರೂ ಕನಸು ಕಾಣುತ್ತಾರೆ. ಆದರೆ ಕನಸು ಕಂಡ ಪ್ರತಿಯೊಬ್ಬನ ಕನಸನ್ನು ನನಸಾಗುವುದಿಲ್ಲ. ಆದರೆ ಕನಸಿನಂತಹ ಮಹಲನ್ನು ಹೊಂದಿರುವ ಒಂದು ಭಾರತೀಯ ಕುಟುಂಬವೊಂದಿದೆ. ಇವರು ಅಕ್ಷರಶಃ ಸ್ವಪ್ನಮಯವಾದ ಐಷಾರಾಮಿ ಮಹಲು ಹೊಂದಿದ್ದು, ಇಲ್ಲಿರುವ ಸಿರಿವಂತಿಕೆಯ , ಅದ್ಬುತ ವಿನ್ಯಾಸಗಳು ಪ್ರಪಂಚದ ಯಾವುದೇ ಮನೆಯಿಂದ ವಿಭಿನ್ನವಾಗಿದೆ.

ಹೌದು ಈ ಮನೆಯ ಮಾಲೀಕರಾಗಿದ್ದಾರೆ ಪಂಕಜ್ ಮತ್ತು ರಾಧಿಕಾ ಓಸ್ವಾಲ್. ಸ್ವಿಟ್ಜರ್ಲೆಂಡ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಬಿಲಿಯನೇರ್ ದಂಪತಿಗಳು ಇತ್ತೀಚೆಗೆ ವಿಶ್ವದ ಟಾಪ್ 10 ಅತ್ಯಂತ ದುಬಾರಿ ಮತ್ತು ಅಲ್ಟ್ರಾ-ಐಷಾರಾಮಿ ಮನೆಗಳಲ್ಲಿ ಒಂದನ್ನು ಖರೀದಿಸಿದ್ದು ,ಇದರ ಬೆಲೆ 200 ಮಿಲಿಯನ್ ಡಾಲರ್ (ಸುಮಾರು 1,649 ಕೋಟಿಗಳು) ಆಗಿದೆ.

 ವಿಶ್ವದ ಅತ್ಯಂತ ದುಬಾರಿ ಮನೆ ಹೊಂದಿರುವ ಭಾರತೀಯ ದಂಪತಿಗಳಿವರು!

ಈ ಸ್ವಿಸ್ ಮ್ಯಾನ್ಷನ್ ಗೆ 'ವಿಲ್ಲಾ ವರಿ' ಎಂದು ಹೆಸರಿಸಲಾಗಿದ್ದು,ಇದನ್ನುಐತಿಹಾಸಿಕ ಕಟ್ಟಡ ಒಬೆರಾಯ್ ರಾಜ್ವಿಲಾಸ್, ಒಬೆರಾಯ್ ಉದಯವಿಲಾಸ್ ಮತ್ತು ಲೀಲಾ ಹೋಟೆಲ್‌ ವಿನ್ಯಾಸಗೊಳಿಸಿದ್ದ ಪ್ರಸಿದ್ಧ ಇಂಟೀರಿಯರ್ ಡಿಸೈನರ್ ಜೆಫ್ರಿ ವಿಲ್ಕ್ಸ್ ವಿನ್ಯಾಸಗೊಳಿಸಿದ್ದಾರೆ. ಈ ಹಿಂದೆ ಈ ಮಹಲು ಗ್ರೀಕ್ ಶಿಪ್ಪಿಂಗ್ ಮ್ಯಾಗ್ನೇಟ್ ಅರಿಸ್ಟಾಟಲ್ ಒನಾಸಿಸ್ ಅವರ ಮಗಳು , ಉದ್ಯಮಿ ಕ್ರಿಸ್ಟಿನಾ ಒನಾಸಿಸ್ ಅವರ ಒಡೆತನದಲ್ಲಿತ್ತು. ಈ ಸ್ವಿಸ್ ಭವನವನ್ನು ಓಸ್ವಾಲ್‌ ಕುಟುಂಬ ದೇಶ ವಿದೇಶಿಗಳಲ್ಲಿ ಸಿಗುವ ಶ್ರೇಷ್ಟ ಪೀಠೋಪಕರಣಗಳು ಮತ್ತುಅಲಂಕಾರಿಗಳ ವಸ್ತುಗಳಿಂದ ಅದ್ದೂರಿಯಾಗಿ ಪುನರ್ ನಿರ್ಮಿಸಿದ್ದಾರೆ.

ಸಿರಿವಂತಿಕೆ ಮತ್ತು ಐಷಾರಾಮಿಗಳನ್ನು ಹೊರಸೂಸುವ ಈ ಮೇರುಕೃತಿ ಮೌಂಟ್ ಬ್ಲಾಂಕ್‌ನ ಹಿಮದಿಂದ ಆವೃತವಾದ ಶಿಖರಗಳ ನಡುವಿ ಪ್ರದೇಶದಲ್ಲಿ ಸ್ವಿಸ್ ಗ್ರಾಮವಾದ ಗಿಂಗಿನ್ಸ್‌ನಲ್ಲಿ 40,000 ಚದರ ಮೀಟರ್‌ಗಳಷ್ಟು ವ್ಯಾಪಿಸಿದೆ. ಇದು ಜಿನೀವಾ ಸರೋವರದ ನಗರದಿಂದ ಕೇವಲ 15 ನಿಮಿಷಗಳ ದೂರದಲ್ಲಿರುವ ವಿಲ್ಲಾ ವರಿ, ಪ್ರಸ್ತುತ ಕ್ಯಾಂಟನ್ ಆಫ್ ವಾಡ್‌ನಲ್ಲಿರುವ ಅತಿದೊಡ್ಡ ಆಸ್ತಿಯಾಗಿದೆ.

ಅವರು ತಮ್ಮ ಹೆಣ್ಣುಮಕ್ಕಳಾದ 24 ವರ್ಷ ವಯಸ್ಸಿನ ವಸುಂಧರಾ ಮತ್ತು 18 ವರ್ಷದ ರಿದಿಯೊಂದಿಗೆ ಕಳೆದ ದಶಕದಿಂದ ಸ್ವಿಟ್ಜರ್ಲೆಂಡ್‌ನಲ್ಲಿ ನೆಲೆಸಿರುವ ಓಸ್ವಾಲ್ ದಂಪತಿ ಇತ್ತೀಚೆಗೆ ತಮ್ಮ ಮಕ್ಕಳ ಹೆಸರಿನಲ್ಲಿರುವ ತಮ್ಮ ಅದ್ಭುತವಾದ ನೂತನ ಮಹಲು 'ವಿಲ್ಲಾ ವರಿ'ಗೆ ಸ್ಥಳಾಂತರಗೊಂಡಿದ್ದಾರೆ.

ವಸುಂಧರಾ ಅವರು ಹಣಕಾಸು ವಿಷಯದಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪದವಿ ಪಡೆದಿದ್ದು, ಅವರು PRO ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಮತ್ತು 'Axis Minerals' ನ ಡೈರೆಕ್ಟರ್ ಜನರಲ್ ಆಗಿದ್ದಾರೆ. ರಿಧಿ ಲಂಡನ್‌ನ ವಿಶ್ವವಿದ್ಯಾನಿಲಯದಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಓದುತ್ತಿದ್ದು, ಅವರು ಇಂಡೋ-ವೆಸ್ಟರ್ನ್ ಪಾಪ್ ಉದ್ಯಮದಲ್ಲಿ ಯಶಸ್ವಿ ಗಾಯಕಿ-ಗೀತರಚನೆಕಾರರಾಗಿ ಹೊರಹೊಮ್ಮಿದ್ದಾರೆ.

ಪಂಕಜ್ ಓಸ್ವಾಲ್, ಓಸ್ವಾಲ್ ಆಗ್ರೋ ಮಿಲ್ಸ್ ಸಂಸ್ಥಾಪಕ ಅಭಯ್ ಕುಮಾರ್ ಓಸ್ವಾಲ್ ಅವರ ಪುತ್ರರಾಗಿದ್ದಾರೆ. ಅವರ ಕಂಪನಿಯು ಪೆಟ್ರೋಕೆಮಿಕಲ್ಸ್, ರಿಯಲ್ ಎಸ್ಟೇಟ್, ರಸಗೊಬ್ಬರಗಳು ಮತ್ತು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಹಲವಾರು ಪ್ರಸಿದ್ಧ ವ್ಯವಹಾರಗಳನ್ನು ಹೊಂದಿದ್ದರೂ, $3 ಶತಕೋಟಿ ಯುಎಸ್‌ ಡಾಲರ್ ನಿವ್ವಳ ಮೌಲ್ಯವಿರುವ ಓಸ್ವಾಲ್ ಕುಟುಂಬವು ಯಾವಾಗಲೂ ಜನಮನದಿಂದ ದೂರ ಉಳಿದುಕೊಂಡಿದೆ.

ಅವರ ಬಹು-ಶತಕೋಟಿ ಡಾಲರ್ ಅಂತರರಾಷ್ಟ್ರೀಯ ಸಂಘಟಿತ ಸಂಸ್ಥೆಯಾದ 'ಓಸ್ವಾಲ್ ಗ್ರೂಪ್ ಗ್ಲೋಬಲ್' 'PRO ಇಂಡಸ್ಟ್ರೀಸ್ PTE LTD' ನಂತಹ ಬೃಹತ್ ಕಂಪನಿಗಳನ್ನು ಒಳಗೊಂಡಿದೆ. ಇದು ಪೂರ್ವ ಆಫ್ರಿಕಾದ ಅತಿದೊಡ್ಡ ಎಥೆನಾಲ್ ಸ್ಥಾವರ ಮತ್ತು ಪಶ್ಚಿಮ ಆಫ್ರಿಕಾದ ಅತಿದೊಡ್ಡ ಬಾಕ್ಸೈಟ್ ಗಣಿಗಾರಿಕೆ ಯೋಜನೆಗಳಲ್ಲಿ ಒಂದಾದ 'ಆಕ್ಸಿಸ್ ಮಿನರಲ್ಸ್' ಮತ್ತು 'ಬರ್ರಪ್ ಫರ್ಟಿಲೈಸರ್ಸ್' ನ ವಿಶ್ವದ ಅತಿದೊಡ್ಡ ಲಿಕ್ವಿಡ್ ಅಮೋನಿಯಾ ಉತ್ಪಾದನಾ ಕಂಪನಿಯಾಗಿದೆ.

ತಮ್ಮ ಉದ್ಯಮ ವಿಸ್ತರಣೆಯ ಹೊರತಾಗಿ, ಓಸ್ವಾಲ್ ಕುಟುಂಬವು 'ವಿಲ್ಲಾ ವರಿ' ಅನ್ನು ನವೀಕರಣ ಮಾಡುವಾಗ ಭಾರತೀಯ ಪರಂಪರೆಯ ಲೇಪನದೊಂದಿಗೆ ಅನನ್ಯವಾಗಿ ಶೈಲಿ ಮತ್ತು ಆಧುನಿಕ ಅಂಶಗಳನ್ನು ಒಳಗೊಂಡ ಒಂದು ಅದ್ಭುತವಾದ ಮಹಲು ಮಾಡಲು ಬಯಸಿ ಅದನ್ನು ಕಾರ್ಯಗತಗೊಳಿಸಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+