ಬಿಲಿಯನೇರ್ ಉದ್ಯಮಿಯಾಗಿರುವ ಮತ್ತು ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರ ಮಗ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆದಾರ್ ಪೂನಾವಾಲಾ ಲಂಡನ್‌ನಲ್ಲಿ ಅತ್ಯಂತ ದುಬಾರಿ ಮನೆಯನ್ನು 1446 ಕೋಟಿ ರೂಪಾಯಿಗೆ ಖರೀದಿಸಲಿದ್ದಾರೆ.
ಈಗಾಗಲೇ ಲಂಡನ್ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು 25,000 ಚದರ ಅಡಿ ನಿವಾಸವನ್ನು ಸುಮಾರು £38 ಮಿಲಿಯನ್‌ಗೆ ಖರೀದಿಸುವ ಡೀಲ್ ನಡೆದಿದೆ. 42 ವರ್ಷದ ಭಾರತೀಯ ಉದ್ಯಮಿ ಪೊಲೆಂಡಿನ ದಿವಂಗತ ಉದ್ಯಮಿ ಜಾನ್ ಕುಲ್ಸ್ಜಿಕ್ ಅವರ ಮಗಳು ಡೊಮಿನಿಕಾ ಕುಲ್ಸ್ಜಿಕ್ ಅವರೊಂದಿಗೆ ಮನೆ ಖರೀದಿ ಒಪ್ಪಂದಕ್ಕೆ ಬಂದಿದ್ದಾರೆ.

ಈ ಮೂಲಕ 2023 ರಲ್ಲಿ ಲಂಡನ್‌ನಲ್ಲಿ ಅತ್ಯಂತ ದುಬಾರಿ ಆಸ್ತಿ ವ್ಯವಹಾರವಾಗಿದ್ದು ಮತ್ತು ಆ ದೇಶದಲ್ಲಿ ಇದುವರೆಗೆ ಮಾರಾಟವಾದ ಎರಡನೇ ದುಬಾರಿ ಮನೆಯಾಗಿದೆ. ಹಲವಾರು ಭಾರತೀಯ ಬಿಲಿಯನೇರ್‌ಗಳು ಖಾಸಗಿ ನಿವಾಸಗಳನ್ನು ಹೊಂದಿರುವ ನಗರವಾದ ಬ್ರಿಟನ್‌ನ ರಾಜಧಾನಿಯಲ್ಲಿ ಆದಾರ್ ಪೂನಾವಾಲಾ ಈಗ ಅತ್ಯಂತ ದುಬಾರಿ ಮನೆಯನ್ನು ಹೊಂದಲಿರುವ ಮತ್ತೊಬ್ಬ ಭಾರತೀಯರಾಗಿದ್ದಾರೆ.
ಈ ಪಟ್ಟಿಯಲ್ಲಿ ಉಕ್ಕಿನ ಉದ್ಯಮಿ ಲಕ್ಷ್ಮಿ ಮಿತ್ತಲ್ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯೂ ಇದ್ದಾರೆ. ಲಂಡನ್‌ನಲ್ಲಿ 980 ಕೋಟಿ ರೂಪಾಯಿಗೆ ಮನೆ ಖರೀದಿಸಿದ್ದ ಮಿತ್ತಲ್ ಹಾಗೂ 592 ಕೋಟಿ ರೂಪಾಯಿಗಳ ಮಹಲು ಹೊಂದಿರುವ ಮುಕೇಶ್ ಅಂಬಾನಿ ಅವರಿಗಿಂತಲೂ ಯುಕೆಯ ಶ್ರೀಮಂತ ಭಾರತೀಯ ಮನೆ ಮಾಲೀಕ ಎಂಬ ಟ್ಯಾಗ್ ಉದ್ಯಮಿ ರವಿ ರೂಯಾ ಅವರದ್ದಾಗಿತ್ತು. ಈಗ ಅದು ಪೂನಾವಾಲಾ ಪಾಲಾಗಿದೆ.
2023 ರಲ್ಲಿ ಭಾರತೀಯ ಉದ್ಯಮಿ ರವಿ ರೂಯಾ ಅವರು ಲಂಡನ್‌ನಲ್ಲಿ ಐಷಾರಾಮಿ ಬಂಗಲೆ ಹ್ಯಾನೋವರ್ ಲಾಡ್ಜ್ ಖರೀದಿಸಿದ್ದರು. ರಷ್ಯಾದ ಆಸ್ತಿ ಹೂಡಿಕೆದಾರ ಆಂಡ್ರೆ ಗೊಂಚರೆಂಕೊ ಅವರಿಗೆ ಸಂಬಂಧಿಸಿದ ಬಂಗಲೆಯನ್ನು 113 ಮಿಲಿಯನ್ ಪೌಂಡ್‌ಗೆ (ಸುಮಾರು 1,200 ಕೋಟಿ ರೂಪಾಯಿ) ರೂಯಾ ಖರೀದಿಸಿದ್ದು, ಇದು ಇತ್ತೀಚಿನ ವರ್ಷಗಳಲ್ಲಿ ಬ್ರಿಟನ್ ರಾಜಧಾನಿಯಲ್ಲಿ ನಡೆದ ಬೃಹತ್ ವಸತಿ ಒಪ್ಪಂದ ಎಂದು ಕರೆಯಲ್ಪಟ್ಟಿತ್ತು.
ಹೂಡಿಕೆ ಸಂಸ್ಥೆ ಎಸ್ಸಾರ್ ಗ್ರೂಪ್ ಮುನ್ನಡೆಸುತ್ತಿರುವ ರುಯಾ ಸಹೋದರರಲ್ಲಿ ಒಬ್ಬರಾಗಿರುವ ರವಿ ರುಯಾ ತಮ್ಮ ಹಿರಿಯ ಸಹೋದರ ಶಶಿ ರುಯಾ ಅವರೊಂದಿಗೆ ಸೇರಿ ಇನ್ಫ್ರಾಸ್ಟ್ರಕ್ಚರ್, ಮೆಟಲ್ಸ್, ತೈಲ ಸಂಸ್ಕರಣಾಗಾರಗಳು, ಗಣಿಗಾರಿಕೆಯಲ್ಲಿ ಆಸಕ್ತಿ ಹೊಂದಿರುವ ಸಾಮ್ರಾಜ್ಯವನ್ನು ನಿಯಂತ್ರಿಸುತ್ತಾರೆ.
ಇತ್ತೀಚೆಗೆ, ಅವರ ಕಂಪನಿ ಎಸ್ಸಾರ್ ಸ್ಟೀಲ್ ಅನ್ನು ಲಕ್ಷ್ಮಿ ಮಿತ್ತಲ್ ಅವರ ಸ್ಟೀಲ್ ಕಂಪನಿ ಖರೀದಿಸಿದೆ. ರವಿ ರುಯಾ ಅವರು ಚೆನ್ನೈನ ಗಿಂಡಿಯ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಪದವಿ ಪಡೆದಿದ್ದರೆ.


Click it and Unblock the Notifications