ಭಾರತದಲ್ಲಿ ವಿವಿಧ ರೀತಿಯ ಸಾಮಾಜಿಕ ಮಾಧ್ಯಮ ಪ್ರಭಾವಿತ ಐಕಾನ್‌ಗಳು ಹಾಗೂ ಯೂಟ್ಯೂಬರ್‌ಗಳು ಇದ್ದಾರೆ. ಆದರೆ ಅಂಥವರ ಪೈಕಿ ಭುವನ್ ಬಾಮ್ ಅವರು ಬಹಳ ಭಿನ್ನವಾಗಿದ್ದು, ಅವರ ಜೀವನ ಕಥೆಯು ಹಲವರಿಗೆ ಸ್ಫೂರ್ತಿದಾಯಕವಾಗಿದೆ. ಅವರು ಭಾರತದ ಅತ್ಯಂತ ಶ್ರೀಮಂತ ಯೂಟ್ಯೂಬರ್ ಕೂಡ ಆಗಿದ್ದಾರೆ. ಭುವನ್ ಬಾಮ್ ಅವರು ಮನರಂಜನಾ ಕ್ಷೇತ್ರದಲ್ಲಿ ಸಂಗೀತ ಕಲಾವಿದನಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು.
ಅವರು ಸಾಮಾನ್ಯ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ್ದರು. ಪ್ರಸ್ತುತ ಅವರು ಭಾರತ ಒಬ್ಬ ಟಾಪ್ ಯೂಟ್ಯೂಬರ್ ಆಗಿ ಬೆಳೆದಿದ್ದು, ಆ ವಲಯದಲ್ಲಿ ಹೆಚ್ಚಿನ ಆಸ್ತಿಯನ್ನು ಕೂಡ ಸಂಪಾದಿಸಿದ್ದಾರೆ. ಭುವನ್ ಬಾಮ್ ಅವರು ಗುಜರಾತ್‌ನ ವಡೋದರಾ ಮೂಲದವರಾಗಿದ್ದು, ಬಹಳ ಪರಿಶ್ರಮದ ಪರಿಣಾಮವಾಗಿ ಉತ್ತಮ ಸಂಗೀತ ಕಲಾವಿದರಾಗಿ ಹೆಸರನ್ನು ಗಳಿಸುವ ಜತೆಗೆ ಯಶಸ್ವಿನ ಉತ್ತುಂಗಕ್ಕೆ ಏರಿದ್ದಾರೆ.

ಸಣ್ಣ ಕೆಫೆ ಹಾಗೂ ರೆಸ್ಟೊರೆಂಟ್‌ಗಳಲ್ಲಿ ಹಾಡುತ್ತಿದ್ದ ಭುವನ್
ಉತ್ತಮ ಸಂಗೀತಗಾರನಾಗಬೇಂಬ ಕನಸಿನೊಂದಿಗೆ ದಿಲ್ಲಿಯ ಸಣ್ಣ ಕೆಫೆ ಹಾಗೂ ರೆಸ್ಟೊರೆಂಟ್‌ಗಳಲ್ಲಿ ಹಾಡುತ್ತಿದ್ದರು. ಜತೆಗೆ ಟಿವಿ ರಿಯಾಲಿಟಿ ಶೋದ ಸ್ಪರ್ಧೆಗಳಲ್ಲಿ ಹಾಡುತ್ತಿದ್ದರು. ಮಾಧ್ಯಮ ವರದಿ ಹಾಗೂ ಅವರು ಕೊಟ್ಟಿರುವ ಸಂದರ್ಶನಗಳ ಪ್ರಕಾರ, ಭುವನ್ ಬಾಮ್ ಕೆಫೆ ಹಾಗೂ ರೆಸ್ಟೊರೆಂಟ್‌ಗಳಲ್ಲಿ ಹಾಡುವ ವೇಳೆ ಸಾಕಷ್ಟು ಸವಾಲು-ಸಮಸ್ಯೆಗಳನ್ನು ಎದುರಿಸಿದ್ದಾರೆ. ಆಗ ಅವರು ತಿಂಗಳಿಗೆ ಕೇವಲ 5000 ರೂಪಾಯಿ ಸಂಪಾದಿಸುತ್ತಿದ್ದರು.
ಬಳಿಕ ಅವರು ತಮ್ಮ ಸಂಗೀತ ಹಾಡುವುದನ್ನು ನಿಲ್ಲಿಸಿ ಯೂಟ್ಯೂಬ್ ಕಂಟೆಂಟ್ ಕ್ರಿಯೇಟ್ ಮಾಡುವುದಕ್ಕೆ ಪ್ರಾರಂಭಿಸಿದರು. ಬಾಮ್ ಅವರ ಮೊದಲ ಯೂಟ್ಯೂಬ್ ವಿಡಿಯೋವು ಕಾಶ್ಮೀರದ ವೈರಲ್ ವೀಡಿಯೊದ ವಿಶ್ಲೇಷಣೆಯಾಗಿತ್ತು. ಅಲ್ಲಿ ಪ್ರವಾಹದಲ್ಲಿ ಮನೆ ಕಳೆದುಕೊಂಡ ವ್ಯಕ್ತಿಗೆ ಪತ್ರಕರ್ತರೊಬ್ಬರು ಸಂವೇದನಾರಹಿತವಾದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಮೊದಲ ವೀಡಿಯೊದಲ್ಲಿ ಕಾಮಿಡಿಯನ್ ಆಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಅದು ಜನರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು.
ನಂತರ ಭುವನ್ ಬಾಮ್ ಅವರು 'ಬಿಬಿ ಕಿ ವಿನ್ಸ್' ಎಂಬ ಸರಣಿ ಪ್ರಾರಂಭಿಸಿದ್ದು, ಅದರಲ್ಲಿ ಅವರು ತಮ್ಮ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರ ಕೆಲವೊಂದು ಪಾತ್ರಗಳನ್ನು ನಿರ್ವಹಿಸುವ ಮೂಲಕ ಸಣ್ಣ ವಿಡಿಯೋ ತುಣುಕುಗಳನ್ನು ಪೋಸ್ಟ್ ಮಾಡುತ್ತಿದ್ದರು. BB Ki Vines ಬಹಳ ಜನಪ್ರಿಯತೆ ಪಡೆದುಕೊಂಡಿದ್ದು, ಪ್ರಸ್ತುತ 26 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ.
ಭುವನ್ ಬಾಮ್ ಅವರು 15 ಮಿಲಿಯನ್ ಅಮೆರಿಕನ್ ಡಾಲರ್ ಆಸ್ತಿ ಹೊಂದಿದ್ದು, ಅದು 122 ಕೋಟಿ ರೂಪಾಯಿ ಆಗಿದೆ. ಅವರ ನಿವ್ವಳ ಆಸ್ತಿ ಮೌಲ್ಯವು ಬ್ರ್ಯಾಂಡ್ ಮತ್ತು ಅನುಮೋದನೆಯ ವ್ಯವಹಾರಗಳು, ವೆಬ್ ಸರಣಿಗಳು, ಚಲನಚಿತ್ರ ಪಾತ್ರಗಳು ಮತ್ತು ಯೂಟ್ಯೂಬ್ ವೀಡಿಯೊಗಳಿಂದ ಬಂದಿರುವ ಆದಾಯವಾಗಿದೆ.
ಯೂಟ್ಯೂಬರ್ ಆಗಿ 4000 ಕೋಟಿ ಆಸ್ತಿಯ ಕಂಪನಿ ಕಟ್ಟಿದ ಅಲಖ್ ಪಾಂಡೆ!
ಫಿಸಿಕ್ಸ್ ವಲ್ಲಾ ಭಾರತದಲ್ಲಿ ಲಾಭದಾಯಕವಾಗಿರುವ ಏಕೈಕ ಎಜ್ಯು-ಟೆಕ್ ಯುನಿಕಾರ್ನ್ ಆಗಿದೆ. ಈ ಕಂಪನಿಯ ಆದಾಯವು ಕಳೆದ ಹಣಕಾಸು ವರ್ಷದಲ್ಲಿ 780 ಕೋಟಿ ರೂಪಾಯಿಗಳಷ್ಟು ಇತ್ತು. ಇದು 300 ಪರ್ಸೆಂಟ್ ಹೆಚ್ಚಾಗಿದ್ದು ಆಗಿದ್ದು ಅಂದರೆ 233 ಕೋಟಿ ರೂ. ಆಗಿದೆ. ಕಂಪನಿಯು ಈ ಹಣಕಾಸು ವರ್ಷದಲ್ಲಿ 2500 ಕೋಟಿ ರೂಪಾಯಿ ಆದಾಯ ಗಳಿಸುವ ಗುರಿಯನ್ನು ಹೊಂದಿದೆ. ಕಂಪನಿಯು ಕಳೆದ ವರ್ಷ 1.1 ಬಿಲಿಯನ್ ಡಾಲರ್ (9,000 ಕೋಟಿ) ವ್ಯಾಲ್ಯುವೇಷನ್‌ನಂತೆ 100 ಮಿಲಿಯನ್ ಡಾಲರ್ ಫಂಡ್ ರೈಸ್ ಮಾಡಿತ್ತು.
ಇದು ಯುನಿಕಾರ್ನ್ ಸ್ಟೇಟಸ್ ಪಡೆದಿರುವ 101ನೇ ಕಂಪನಿಯಾಗಿದೆ. ಈ ಕಂಪನಿಯನ್ನು ಎಂಜಿನಿಯರಿಂಗ್ ಡ್ರಾಪೌಟ್ ಆಗಿರುವ ಹಾಗೂ ಮಕ್ಕಳಿಗೆ ಟ್ಯೂಷನ್ ನೀಡುತ್ತ ಯೂಟ್ಯೂಬರ್ ಆಗಿ ಕೆಲಸ ಮಾಡುತ್ತಿದ್ದ ಅಲಖ್ ಪಾಂಡೆ ಅವರು ಸ್ಥಾಪಿಸಿದ್ದಾರೆ. ಪಾಂಡೆ ಅವರು ಅದೇ ಹೆಸರಿನ ಯೂಟ್ಯೂಬ್ ಚಾನೆಲ್‌ನೊಂದಿಗೆ ತಮ್ಮ ಉದ್ಯಮದ ಜರ್ನಿಯನ್ನು ಕೂಡ ಪ್ರಾರಂಭಿಸಿದ್ದರು. ಅವರು 2014ರಲ್ಲಿ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ್ದರು. ಯೂಟ್ಯೂಬರ್ ಆಗಿ 4000 ಕೋಟಿ ಆಸ್ತಿಯ ಕಂಪನಿ ಕಟ್ಟಿದ್ದಾರೆ.


Click it and Unblock the Notifications