ಭಾರತದಲ್ಲಿ ಹಲವಾರು ಉದ್ಯಮಿಗಳು ತಮ್ಮ ಸ್ವಂತ ಕಂಪನಿಗಳನ್ನು ಸ್ಥಾಪಿಸುವ ಬದಲು ಕುಟುಂಬ ವ್ಯವಹಾರದಲ್ಲಿ ತಮ್ಮ ವೃತ್ತಿ ಬದುಕನ್ನು ಕಂಡುಕೊಂಡಿದ್ದಾರೆ. ಪ್ರಮುಖ ಷೇರು ಬ್ರೋಕರೇಜ್‌ನಲ್ಲಿ ತಮ್ಮ ಕುಟುಂಬದ ನಾಲ್ಕನೇಯ ತಲೆಮಾರಿನ ಉದ್ಯಮವನ್ನು ಮುನ್ನಡೆಸುವಲ್ಲಿ ಹೇಮೇಂದ್ರ ಕೊಠಾರಿ ಕೂಡ ಒಬ್ಬರು.
77 ವರ್ಷದ ಕೊಠಾರಿ ಅವರು 1975ರಲ್ಲಿ ಹಣಕಾಸು ಸೇವಾ ಸಂಸ್ಥೆ ಡಿಎಸ್‌ಪಿ ಫೈನಾನ್ಶಿಯಲ್ ಕನ್ಸಲ್ಟೆಂಟ್ಸ್ ಅನ್ನು ಸ್ಥಾಪಿಸುವ ಮೊದಲು ತಮ್ಮ ಕುಟುಂಬದ ಸಂಸ್ಥೆಯಾದ ಡಿಎಸ್ ಪುರ್ಬುದಾಸ್ & ಕೋ ನೊಂದಿಗೆ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿದ್ದರು. ಪ್ರಸ್ತುತ ಅವರು ಡಿಎಸ್‌ಪಿ ಇನ್‌ವೆಸ್ಟ್‌ಮೆಂಟ್ ಮ್ಯಾನೇಜರ್ಸ್‌ನಲ್ಲಿ ಅಧ್ಯಕ್ಷರಾಗಿದ್ದು, ಅದು 15 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದೆ. ಅವರು 2008ರಲ್ಲಿ ಬ್ಲ್ಯಾಕ್‌ರಾಕ್‌ನಲ್ಲಿ ಹೂಡಿಕೆ ಮಾಡಿದ್ದು, 10 ವರ್ಷಗಳ ಬಳಿಕ ತಮ್ಮ ಹೂಡಿಕೆಯನ್ನು ವಾಪಾಸ್ ಪಡೆದುಕೊಂಡಿದ್ದಾರೆ.

ಹೇಮೇಂದ್ರ ಕೊಠಾರಿ ಅವರು ಒಬ್ಬ ನುರಿತ ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್ ಆಗಿದ್ದಾರೆ. ಅವರ ಮಗಳು ಅದಿತಿ ಕೊಠಾರಿ ದೇಸಾಯಿ ಅವರು ಕಂಪನಿಯನ್ನು ಮುನ್ನಡೆಸುವುದಕ್ಕೆ ನೆರವಾಗುತ್ತಿದ್ದಾರೆ. ಅದಿತಿ ಅವರು ಕಂಪನಿಯಲ್ಲಿ ಉಪಾಧ್ಯಕ್ಷರಾಗಿ ಸೇಲ್ಸ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಹೇಮೇಂದ್ರ ಕೊಠಾರಿ ಅವರು ಬಾಂಬೆ ಸ್ಟಾಕ್ ಎಕ್ಸ್‌ಚೇಂಚ್(ಬಿಎಸ್‌ಇ) ಸ್ಥಾಪಕರಲ್ಲಿ ಒಬ್ಬರಾಗಿದ್ದ ಪುರ್ಭುದಾಸ್ ಜೀವಂದಾಸ್ ಕೊಠಾರಿ ಅವರ ಮೊಮ್ಮಗ.
ಬಿಎಸ್‌ಇ ಲಿಸ್ಟೆಡ್ ಕಂಪನಿಯ ಮಾರುಕಟ್ಟೆ ಬಂಡವಾಳವು ಜನವರಿ 18 ರ ಪ್ರಕಾರ 3,69,49,666.38 ಕೋಟಿ ರೂಪಾಯಿ ಆಗಿದೆ. ಫೋರ್ಬ್ಸ್ ಪಟ್ಟಿ ಪ್ರಕಾರ, ಅವರು 11630 ಕೋಟಿ ರೂಪಾಯಿ ನಿವ್ವಳ ಆಸ್ತಿ ಹೊಂದಿದ್ದಾರೆ. 1995ರಲ್ಲಿ ಕೊಠಾರಿ ಅವರು ಮೆರಿಲ್ ಲಿಂಚ್ ಜತೆ ಪಾಲುದಾರಿಕೆ ಮಾಡಿಕೊಂಡಿದ್ದಾರೆ. ಬಳಿಕ ಕಂಪನಿ ಹೆಸರನ್ನು ಡಿಎಸ್ಪಿ ಮೆರಿಲ್ ಲಿಂಚ್ ಲಿಮಿಟೆಡ್ ಎಂದು ಬದಲಿಸಿಕೊಂಡಿದ್ದಾರೆ.
2009 ರ ಮಾರ್ಚ್ 31ರವರೆಗೆ ಕೊಠಾರಿ ಅವರು ಕಂಪನಿಯ ಅಧ್ಯಕ್ಷರಾಗಿದ್ದರು. ಅವರು 2005ರಿಂದ 2009ರವರೆಗೆ ತಮ್ಮ ಶೇಕಡ 57ರಷ್ಟು ಷೇರನ್ನು ಮಾರಾಟ ಮಾಡಿದ್ದಾರೆ. ಅವರು ಡಿಎಸ್‌ಪಿ ಫೈನಾನ್ಶಿಯಲ್ ಕನ್ಸಲ್ಟೆಂಟ್ಸ್ ಲಿಮಿಟೆಡ್ ಅನ್ನು 1975ರಲ್ಲಿ ಸ್ಥಾಪನೆ ಮಾಡಿದ್ದು, ದೇಶದ ಬಹುತೇಕ ನಗರಗಳಲ್ಲಿ ಸುಸಜ್ಜಿತ ಹಣಕಾಸು ಸೇವೆ ನೀಡುವ ಕಚೇರಿಗಳನ್ನು ಹೊಂದಿದ್ದಾರೆ.
ಕೊಠಾರಿ ಅವರು ಭಾರತೀಯ ಕೈಗಾರಿಕೆಗಳ ಒಕ್ಕೂಟ, ಫಿಕ್ಕಿ ಸೇರಿದಂತೆ ಹಲವು ಉದ್ಯಮ ಪ್ರತಿನಿಧಿಗಳ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದಾರೆ. ಕೊಠಾರಿ ಅವರು ಮುಂಬೈ ವಿವಿಯಿಂದ ಕಲಾ ವಿಭಾಗದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಅವರು ವನ್ಯಜೀವಿಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು, ವನ್ಯಜೀವಿಗಳ ಸಂರಕ್ಷಣಾ ಟ್ರಸ್ಟ್ ಅನ್ನು ಸ್ಥಾಪಿಸಿದ್ದಾರೆ.


Click it and Unblock the Notifications