ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮತ್ತು ಟೀನಾ ಅಂಬಾನಿ ದಂಪತಿಗಳ ಪುತ್ರಿ ಇಶಾ ಅಂಬಾನಿ, ಡಿ.12, 2018ರಂದು ಆನಂದ್ ಪಿರಮಲ್ ಅವರೊಂದಿಗೆ ಅಂಬಾನಿ ನಿವಾಸ 'ಆಂಟಿಲಿಯಾ'ದಲ್ಲಿ ಅದ್ದೂರಿ ವಿವಾಹವಾಗಿರುವುದು ನಿಮಗೆಲ್ಲಾ ಗೊತ್ತೆ ಇದೆ.
ಇದೀಗ ಇಶಾ ಅಂಬಾನಿ ಮತ್ತು ಆನಂದ್ ಪಿರಮಲ್ ದಂಪತಿಗಳು ಅವಳಿ ಮಕ್ಕಳಾದ ಕೃಷ್ಣ ಮತ್ತು ಆದಿಯಾ ಪೋಷಕರಾಗಿದ್ದಾರೆ. ಬ್ಯುಸಿನೆಸ್ ವುಮೆನ್ ನಂದಿನಿ ಪಿರಮಲ್, ಇಶಾ ಅಂಬಾನಿಯ ನಾದಿನಿಯಾಗಿದ್ದಾರೆ.
ನಂದಿನಿ ಪಿರಮಲ್ ಯಾರು?:
ನಂದಿನಿ ಪಿರಮಲ್ ಅವರು "ಪಿರಮಿಲ್ ಫಾರ್ಮಾ ಲಿಮಿಟೆಡ್"ನ ಅಧ್ಯಕ್ಷ್ಯರಾಗಿದ್ದಾರೆ. ಇದಲ್ಲದೆ ಅವರು ಮಾನವ ಸಂಪನ್ಮೂಲ, ಮಾಹಿತಿ ತಂತ್ರಜ್ಞಾನ ಕಾರ್ಯದ ಮುಖ್ಯಸ್ಥರಾಗಿದ್ದು, ಇದರೊಂದಿಗೆ ಪಿರಮಿಲ್ ಫಾರ್ಮಾದಲ್ಲಿ ಗುಣಮಟ್ಟ ಘಟಕದ ಮೇಲ್ವಿಚಾರಣೆಯನ್ನು ಮಾಡುತ್ತಾರೆ.

ನಂದಿನಿ ಪಿರಮಲ್ ಅವರು ರಾಜ್ಯಶಾಸ್ತ್ರ, ತತ್ವಶಾಸ್ತ್ರ, ಮತ್ತು ಅರ್ಥಶಾಸ್ತ್ರದಲ್ಲಿ ಅವರು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಬಿಎ(ಆನರ್ಸ್) ಪದವಿ ಪಡೆದಿದ್ದಾರೆ. ಇದರೊಂದಿಗೆ 'ಸ್ಟ್ರಾನ್ ಫೋರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್' ನಲ್ಲಿ ಎಂಬಿಎ ಮಾಡಿದ್ದಾರೆ.
ನಂದಿನಿ ಪಿರಮಲ್ : ನಿವ್ವಳ ಮೌಲ್ಯ( ಸಂಪತ್ತು ಎಷ್ಟು)?
ನಂದಿನಿ ಪಿರಮಲ್ ಅವರು ಹೊಂದಿರುವ ಸಂಪತ್ತಿನ ನಿವ್ವಳ ಮೌಲ್ಯದ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ಇವರ ತಂದೆ ಅಜಯ್ ಪಿರಮಲ್ ಅವರು 24, 8225 ಕೋಟಿ.ರೂ ನಿವ್ವಳ ಮೌಲ್ಯದ ಒಡೆಯರಾಗಿದ್ದಾರೆ.
ನಂದಿನಿ ಪಿರಮಲ್ ದೊರೆತ ಪ್ರಶಸ್ತಿ ಪುರಸ್ಕಾರಗಳು:
ನಂದಿನಿ ಪಿರಮಲ್ ಅವರನ್ನು ಬ್ಯುಸಿನೆಸ್ ಟುಡೇ 2020ರಲ್ಲಿ 'ಇಂಡಿಯಸ್ ಮೋಸ್ಟ್ ಪವರ್ ಫುಲ್ ವುಮೆನ್' ಎಂದು ಗುರುತಿಸಿದೆ. ಇದಲ್ಲದೆ 2014ರಲ್ಲಿ 'ವಲ್ಡ್ ಎಕಾನಮಿ ಫಾರ್ಮ್'ನಿಂದ 'ಯಂಗ್ ಗ್ಲೋಬಲ್ ಲೀಡರ್' ಎಂದು ಗುರುತಿಸಲ್ಪಟ್ಟಿದ್ದಾರೆ.


Click it and Unblock the Notifications