ಅಜೀಂ ಪ್ರೇಮ್‌ಜಿ ಅವರು ಭಾರತದ ಒಬ್ಬ ಶ್ರೀಮಂತ ಉದ್ಯಮಿ. ಅವರು ಕಂಪನಿಯ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಾಹಣೇತರ ಸದಸ್ಯರಾಗಿದ್ದಾರೆ. ಅವರು ವಿಪ್ರೋ ಕಂಪನಿಯನ್ನು ಸಾಫ್ಟ್‌ವೇರ್ ಬಿಸಿನೆಸ್‌ನತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮ ವಿಭೂಷಣವನ್ನು ಪಡೆದುಕೊಂಡಿದ್ದಾರೆ.
ಅಜೀಂ ಪ್ರೇಮ್‌ಜಿ ಅವರ ತಂದೆ ಹಸೀಮ್ ಪ್ರೇಮ್‌ಜಿ ಅವರು ಕೂಡ ಸಿರಿವಂತ ಉದ್ಯಮಿಯಾಗಿದ್ದರು. 1966ರಲ್ಲಿ ತಂದೆ ದಿಢೀರ್ ಸಾವನ್ನಪ್ಪಿದಾಗ ಅವರು ಸ್ಟಾಂಡ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಭಾರತಕ್ಕೆ ವಾಪಾಸ್ಸಾಗಿದ್ದರು. ಆಗ ಅವರು ಕಲಿಕೆಯನ್ನು ಅರ್ಧಕ್ಕೆ ಬಿಟ್ಟು ತಮ್ಮ ತಂದೆಯವರ ವ್ಯವಹಾರವನ್ನು ವಹಿಸಿಕೊಂಡರು. ಈ ದಂಪತಿಗೆ ರಿಶಾದ್ ಹಾಗೂ ತಾರಿಕ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಅಜಿಂ ಪ್ರೇಮ್‌ಜಿ ಆಸ್ತಿ ಮೌಲ್ಯ ಎಷ್ಟಿದೆ?
ಅಜಿಂ ಪ್ರೇಮ್‌ಜಿ ಅವರು 9.2 ಬಿಲಿಯನ್ ಡಾಲರ್ (75,600 ಕೋಟಿ ರೂಪಾಯಿ) ಆಸ್ತಿ ಮೌಲ್ಯ ಹೊಂದಿದ್ದಾರೆ. ಅವರ ಕಂಪನಿಯ ವಾರ್ಷಿಕ ಆದಾಯವು 10.4 ಬಿಲಿಯನ್ ಡಾಲರ್ ಆಗಿದೆ.
ಹಶೀಮ್ ಪ್ರೇಮ್‌ಜಿ ಅವರು ಮಹಾರಾಷ್ಟ್ರದ ಜಲಂಗಾವ್ ಜಿಲ್ಲೆಯ ಅಮಲ್ನೇರ್ ಎಂಬ ಸಣ್ಣ ಪಟ್ಟಣದಲ್ಲಿ ವೆಸ್ಟರ್ಸ್ ಇಂಡಿಯನ್ ವೆಜಿಟೇಬಲ್ ಪ್ರಾಡೆಕ್ಸ್ಟ್ ಲಿಮಿಟೆಡ್ ಅನ್ನು ಪ್ರಾರಂಭಿಸಿದ್ದರು.
ಇದು ಅಡುಗೆ ಎಣ್ಣೆ ಹಾಗೂ 787 ಎಂಬ ಸೋಪ್ ಅನ್ನು ತಯಾರಿಸುತ್ತಿತ್ತು. ಅವರು ಕೇವಲ 21 ವರ್ಷ ವಯಸ್ಸಿದ್ದಾಗ ವಿಪ್ರೋದ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು ತಮ್ಮ ಕಂಪನಿಯನ್ನು ವಿಸ್ತರಿಸಿಕೊಳ್ಳುವ ಮೂಲಕ ಬಾತ್‌ರೂಂ ಉತ್ಪನ್ನ, ಕೂದಲು ರಕ್ಷಣೆ ಸಾಬೂನು, ಬೇಬಿಕೇರ್ ಪ್ರಾಡೆಕ್ಟ್ಸ್, ಲೈಟಿಂಗ್ ಉಪಕರಣಗಳು ಹಾಗೂ ಹೈಡ್ರಾಲಿಕ್ ಸಿಲಿಂಡರ್‌ಗಳು ಸೇರಿದಂತೆ ನಾನಾ ರೀತಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದರು.
ಐಬಿಎಂ ಅನ್ನು ಹೊರಹಾಕುವಂತೆ ಸರ್ಕಾರ ಕೇಳಿಕೊಂಡಾಗ 980ರಲ್ಲಿ ಅವರು ವಿಪ್ರೋವನ್ನು ಪ್ರಾರಂಭಿಸಿದರು. 1990ರ ದಶಕದಲ್ಲಿ ವಿಪ್ರೋದ ಮೌಲ್ಯವು ಭಾರೀ ಪ್ರಮಾಣದಲ್ಲಿ ಜಾಸ್ತಿಯಾಯಿತು. 1999ರಲ್ಲಿ ದೂರ ಶಿಕ್ಷಣದ ಮೂಲಕ ಅಜೀಂ ಪ್ರೇಮ್‌ಜಿ ಅವರು ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದರು. ಅಜೀಂ ಪ್ರೇಮ್‌ಜಿ ಕೇವಲ ಶ್ರೀಮಂತ ಉದ್ಯಮಿಯಾಗಿ ಮಾತ್ರ ಉಳಿದುಕೊಂಡಿಲ್ಲ; ಜತೆಗೆ ಅಜೀಂ ಪ್ರೇಮ್‌ಜಿ ಭಾರತದ ಅತಿದೊಡ್ಡ ದಾನಿಯೂ ಆಗಿದ್ದಾರೆ.
2013ರಲ್ಲಿ ಅಜೀಂ ಅವರು ತಮ್ಮ ಒಟ್ಟು ಸಂಪತ್ತಿನ ಅರ್ಧದಷ್ಟು ಹಣವನ್ನು ದಾನವಾಗಿ ನೀಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಮೂಲಕ ಅದಕ್ಕೆ ಸಹಿ ಹಾಕಿದ್ದರು. ಭಾರತದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿರುವ ತಮ್ಮ ಅಜೀಂ ಪ್ರೇಮ್‌ಜಿ ಫೌಂಡೇಶನ್‌ಗೆ ಅವರು 2.2 ಬಿಲಿಯನ್ ಡಾಲರ್ ಅನ್ನು ದೇಣಿಗೆ ನೀಡಿದರು. ಫೋರ್ಬ್ಸ್ ಪ್ರಕಾರ, ಅವರು 21 ಬಿಲಿಯನ್ ಡಾಲರ್‌ಗಳನ್ನು ಚಾರಿಟಿಗೆ ನೀಡಿದ್ದಾರೆ. ಇದು 1.7 ಲಕ್ಷ ಕೋಟಿ ರೂಪಾಯಿ ಆಗಿದೆ. 2021ರಲ್ಲಿ ಏಕ ವ್ಯಕ್ತಿಯಾಗಿ ಅವರು ಪ್ರತಿದಿನ 27 ಕೋಟಿ ರೂಪಾಯಿ ದಾನ ಮಾಡುತ್ತಿದ್ದರು
ಕರ್ನಾಟಕ ರಾಜ್ಯದಲ್ಲಿ ಸುಮಾರು 90 ಮಂದಿ ಕೋಟ್ಯಾಧಿಪತಿಗಳು ಇದ್ದು, ಇದರಲ್ಲಿ ಪ್ರಥಮ ಸ್ಥಾನದಲ್ಲಿ ವಿಪ್ರೋದ ಸ್ಥಾಪಕ-ಅಧ್ಯಕ್ಷ ಅಜೀಮ್ ಪ್ರೇಮ್‌ಜಿ ಅಗ್ರಸ್ಥಾನದಲ್ಲಿ ಇದ್ದಾರೆ ಎಂದು ಇಂಡಿಯಾ ಇನ್ಫೋಲಿನ್ ಲಿಮಿಟೆಡ್ (ಐಐಎಫ್‌ಎಲ್) 2021 ತನ್ನ ಶ್ರೀಮತರುಗಳ ಪಟ್ಟಿಯಲ್ಲಿ ಹೇಳಿದೆ. ದೇಶದ ಅಗ್ರ ಹತ್ತು ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಅಜೀಮ್ ಪ್ರೇಮ್‌ಜಿ ಮೂರನೇ ಸ್ಥಾನದಲ್ಲಿ ಇದ್ದಾರೆ. ಅಜೀಮ್ ಪ್ರೇಮ್‌ಜಿ ಆದಾಯವು 18 ಪಟ್ಟು ಅಧಿಕವಾಗಿದೆ ಎಂದು ವರದಿಯಾಗಿದೆ.
ನೂರು ಕೋಟ್ಯಾಂತರ ಆಸ್ತಿಯನ್ನು ಹೊಂದಿರುವ ಸಂಸ್ಥೆಗಳ ಮಾಲೀಕರ ಪಟ್ಟಿಯಲ್ಲಿ ಅಜೀಮ್ ಪ್ರೇಮ್‌ಜಿ ಆಂಡ್ ಫ್ಯಾಮಿಲಿ 33 ಸ್ಥಾನದಲ್ಲಿ ಇದೆ. ವಿಪ್ರೋ ಅಜೀಮ್ ಪ್ರೇಮ್‌ಜಿ ಆಂಡ್ ಫ್ಯಾಮಿಲಿ ಮಾಲೀಕತ್ವದ ಸಂಸ್ಥೆಯಾಗಿದೆ. ಅಜೀಮ್ ಪ್ರೇಮ್‌ಜಿ ಆಂಡ್ ಫ್ಯಾಮಿಲಿಯ ಒಟ್ಟು ಆಸ್ತಿಯು 36,900 ಕೋಟಿ ರೂಪಾಯಿ ಆಗಿದೆ.


Click it and Unblock the Notifications