ದೇಶದ ಬಾಟಲ್ ವಾಟರ್ ದೈತ್ಯ ಕಂಪೆನಿ ಬಿಸ್ಲೆರಿ ಇಂಟರ್‌ನ್ಯಾಷನಲ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಟಾಟಾ ಗ್ರೂಪ್‌ನ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಕಂಪೆನಿಯ ಮೌಲ್ಯ ಮಾಪನದ ಬಗ್ಗೆ ಎರಡೂ ಕಡೆಯವರು ಒಪ್ಪದ ಕಾರಣ ಟಾಟಾ-ಬಿಸ್ಲೆರಿ ಖರೀದಿ ಮಾತುಕತೆಯು ಮುರಿದು ಬಿದ್ದಿರುವುದಾಗಿ ವರದಿಯಾಗಿದೆ. ಟಾಟಾ ಗ್ರೂಪ್ ಬಿಸ್ಲೆರಿಯಲ್ಲಿ ಷೇರುಗಳನ್ನು ನಿಯಂತ್ರಿಸಲು ಬಯಸಿತ್ತು. ಈ ಡೀಲ್‌ನಲ್ಲಿ ಬಿಸ್ಲೆರಿ ಮಾಲೀಕರು 1 ಶತಕೋಟಿ ಡಾಲರ್‌ಗಿಂತ ಹೆಚ್ಚು ಹಣವನ್ನು ಸಂಗ್ರಹಿಸಲು ಬಯಸಿದ್ದರು.
ಆದರೆ ಟಾಟಾ ಗ್ರೂಪ್ ಅಷ್ಟೊಂದು ಮೌಲ್ಯಮಾಪನದ ಮೇಲೆ ಹಣ ನೀಡಲು ಸಿದ್ಧವಿರಲಿಲ್ಲ. ಈ ನಡುವೆ ಎರಡು ಕಂಪೆನಿಗಳ ನಡುವಿನ ಮಾತುಕತೆ ಮುಂದುವರಿದಿದೆ. ಅದಾಗ್ಯೂ ಎರಡೂ ಕಂಪೆನಿಗಳು ಈ ಬಗ್ಗೆ ಪುನರ್ ಪರಿಶೀಲನೆ ನಡೆಸುವ ಮೂಲಕ ಹೊಸದಾಗಿ ಮಾತುಕತೆ ನಡೆಸುವ ಸಾಧ್ಯತೆಯಿದ್ದು, ಈ ಡೀಲ್ ಅಂತ್ಯಗೊಂಡಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಈ ಬಗ್ಗೆ ಎರಡೂ ಕಂಪೆನಿಗಳ ಪ್ರತಿನಿಧಿಗಳು ಪ್ರತಿಕ್ರಿಯಿಸಲು ನಿರಾಕರಿಸಿವೆ ಎಂಬುದಾಗಿ ಬ್ಲೂಮ್‌ಬರ್ಗ್ ವರದಿ ಮಾಡಿದೆ.

ರಮೇಶ್ ಚೌಹಾಣ್ ಯಾರು? ಜಯಂತಿ ಚೌಹಾಣ್ ಯಾರು?
ರಮೇಶ್ ಚೌಹಾಣ್ ಅವರು ಪಾನೀಯ ಕ್ಷೇತ್ರದಲ್ಲಿ ದಶಕಗಳಿಂದ ಕೆಲಸ ಮಾಡಿರುವ ದೊಡ್ಡ ಉದ್ಯಮಿ. ಭಾರತದಲ್ಲಿ ಥಂಬ್ಸ್ ಅಪ್, ಗೋಲ್ಡ್ ಸ್ಪಾಟ್, ಲಿಮ್ಕಾದಂತಹ ಬ್ರಾಂಡ್‌ಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು 2022ರ ಹಣಕಾಸು ವರ್ಷದಲ್ಲಿ 200 ಕೋಟಿ ರೂ.ಗೂ ಅಧಿಕ ಲಾಭ ಗಳಿಸಿದ ತನ್ನ ಪ್ರೀತಿಯ ಕಂಪೆನಿಯನ್ನು ಮಾರಾಟ ಮಾಡಲು ಅವರು ಹಲವಾರು ಬಿಸಿನೆಸ್ ಸಂಸ್ಥೆಗಳ ಜತೆಗೆ ಸಂಪರ್ಕದಲ್ಲಿದ್ದರು. ಕಳೆದ ಎರಡು ವರ್ಷಗಳಿಂದ ಅವರ ಕಂಪೆಯು ಲಾಭದಾಯಕವಾಗಿ ನಡೆಯುತ್ತಿದೆ.
ಕಂಪೆನಿಯು 2021ರಲ್ಲಿ 96 ಕೋಟಿ ರೂ. ಹಾಗೂ 2020ರಲ್ಲಿ 100 ಕೋಟಿ ರೂ. ಗಳಿಸಿತ್ತು. ಈ ಕಾರಣದಿಂದಾಗಿ ಕಂಪೆನಿಯನ್ನು ಖರೀದಿಸಲು ಬಹಳ ಮಂದಿ ಆಸಕ್ತಿ ತೋರಿಸಿದ್ದರು. ಆ ಪೈಕಿ ಟಾಟಾ ಕನ್ಸ್ಯೂಮರ್ ಪ್ರಾಡೆಕ್ಟ್ಸ್ ಲಿಮಿಟೆಡ್ ಮುಂಚೂಣಿಯಲ್ಲಿತ್ತು. ರಮೇಶ್ ಚೌಹಾಣ್ ಅವರಿಗೆ 82 ವರ್ಷ. ಅವರಿಗೆ ವಯಸ್ಸಾಗಿರುವ ಕಾರಣ ಕಂಪೆನಿಯನ್ನು ಮಾರಾಟ ಮಾಡುತ್ತಿದ್ದಾರೆ. ತಮ್ಮ ಮಗಳು ಜಯಂತಿ ಚೌಹಾಣ್‌ಗೆ ಬಿಸಿನೆಸ್ ಮುಂದುವರಿಸಲು ಆಸಕ್ತಿ ಇಲ್ಲದಿರುವ ಕಾರಣ ಕಂಪೆನಿಯನ್ನು ನೋಡಿಕೊಳ್ಳುವುದಕ್ಕೆ ಯಾರು ಇಲ್ಲ ಎಂಬುದಾಗಿ ಚೌಹಾಣ್ ಕಳೆದ ವರ್ಷ ಹೇಳಿದ್ದರು.
ಒಂದು ವೇಳೆ ಮಾರಾಟ ಡೀಲ್ ನಡೆದರೆ ಮುಂದಿನ ಎರಡು ವರ್ಷಗಳವರೆಗೆ ಪ್ರಸ್ತುತ ಇರುವ ಮ್ಯಾನೇಜ್‌ಮೆಂಟ್ ಮುಂದುವರಿಯುದಾಗಿಯೂ ಹೇಳಿದ್ದರು. ತಾವು ಸ್ವಲ್ಪ ಮಟ್ಟಿನ ಷೇರುಗಳನ್ನು ಕೂಡ ಇಟ್ಟುಕೊಳ್ಳುವುದಿಲ್ಲ ಎಂದು ಚೌಹಾಣ್ ತಿಳಿಸಿದ್ದರು. ಕಂಪೆನಿ ಮಾರಾಟ ಒಪ್ಪಂದದಿಂದ ಬರುವ ಹಣವನ್ನು ಮಳೆನೀರು ಕೊಯ್ಲು, ಪ್ಲಾಸ್ಟಿಕ್ ಮರುಬಳಕೆ ಹಾಗೂ ಚಾರಿಟಿಯಂಥ ಕ್ಷೇತ್ರಗಳಲ್ಲಿ ಸದ್ಬಳಕೆ ಮಾಡುವುದಾಗಿ ಹೇಳಿದ್ದರು.
ಚೌಹಾಣ್ ಅವರು ದೇಶದಲ್ಲಿ ಥಂಬ್ಸ್ ಅಪ್, ಗೋಲ್ಡ್ ಸ್ಪಾಟ್, ಸಿಟ್ರಾ, ಮಾಜಾ ಮತ್ತು ಲಿಮ್ಕಾದಂತಹ ಹಲವಾರು ಬ್ರಾಂಡ್‌ಗಳನ್ನು ಸೃಷ್ಟಿಸಿದ್ದಾರೆ. ಬಳಿಕ ಅವರು ಈ ಬ್ರಾಂಡ್‌ಗಳನ್ನು ಹಲವಾರು ಅಂತಾರಾಷ್ಟ್ರೀಯ ಕಂಪೆನಿಗಳಿಗೆ ಮಾರಾಟ ಮಾಡಿದ್ದಾರೆ. ಅವರು ಲಂಡನ್‌ನಿಂದ ತರಬೇತಿ ಪಡೆದಿರುವ ಫ್ಯಾಷನ್ ಡಿಸೈನರ್ ಹಾಗೂ ಫೋಟೊಗ್ರಾಫರ್. ಅವರಿಗೆ 37 ವರ್ಷ ವಯಸ್ಸು. ಅವರು ಡಿಜಿಟಲ್ ಮಾರ್ಕೆಟಿಂಗ್, ಜಾಹೀರಾತು ಮತ್ತು ಸಂವಹನ ಅಭಿವೃದ್ಧಿಯಂಥ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜತೆಗೆ ಅವರು ಟ್ರಾವೆಲರ್ ಆಗಿದ್ದು, ಫೋಟಗ್ರಾಫಿ ಹಾಗೂ ಪ್ರಾಣಿ ಪ್ರೇಮಿ ಕೂಡ. ಇನ್ನು ಟಾಟಾ ಹಿಮಾಲಯ ನ್ಯಾಚುರಲ್ ಮಿನರಲ್ ವಾಟರ್ ಹಾಗೂ ಟಾಟಾ ವಾಟರ್ ಪ್ಲಸ್‌ನಂಥ ಬ್ರಾಂಡ್‌ಗಳನ್ನು ಹೊಂದಿದೆ. ಅವರಿಗೆ ಒಬ್ಬರೇ ಮಗಳಿದ್ದು, ಅವರೇ ಜಯಂತಿ ಚೌಹಾಣ್. ಅವರೇ ಈ ದೊಡ್ಡ ಬಿಸಿನೆಸ್ ಲೀಡರ್‌ನ ಏಕೈಕ ಪುತ್ರಿ. ಜಯಂತಿ ಚೌಹಾಣ್ ಅವರು ಬಿಸ್ಲೆರಿಯಲ್ಲಿ ಉಪಾಧ್ಯಕ್ಷೆಯಾಗಿದ್ದಾರೆ. ಅದರೆ ಅವರಿಗೆ ಈ ಬಿಸಿನೆಸ್‌ನ್ನು ಅನುವಂಶೀಯವಾಗಿ ಪಡೆದುಕೊಳ್ಳುವುದಕ್ಕೆ ಇಷ್ಟವಿಲ್ಲ.
More From GoodReturns

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications