ಭಾರತೀಯ ಮಹಿಳೆಯರು ಪ್ರತಿ ವರ್ಷವೂ ಬೆಳೆಯುತ್ತಿದ್ದಾರೆ, ಪ್ರತಿ ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ. ಅವರು ಐಟಿ ಉದ್ಯಮದಿಂದ ಹಿಡಿದು ಶಿಕ್ಷಣ ಕ್ಷೇತ್ರದವರೆಗೆ ಹೀಗೆ ಪ್ರತಿಯೊಂರಲ್ಲೂ ಮಹಿಳೆಯರು ತಮ್ಮದೇ ಆದ ಅಗಾಧ ಕೊಡುಗೆಗಳನ್ನು ನೀಡಿದ್ದಾರೆ. ಇವರೆಲ್ಲಾ ಪುಟ್ಟ ಹಳ್ಳಿಯಲ್ಲಿರಬಹುದು ಅಥವಾ ಐಐಟಿ ಅಥವಾ ಐಐಎಂ ಪದವೀಧರ ಮಹಿಳೆಯರಾಗಿರಬಹುದು, ತಮ್ಮ ಉದ್ಯಮಶೀಲತೆಯ ಪ್ರತಿಭೆಯಿಂದ ಗಮನಾರ್ಹ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದಕ್ಕೆ ನಿದರ್ಶನವೆಂದರೆ ಕಮಲಜಿತ್ ಕೌರ್. ಇವರ ಕಥೆ ಪ್ರಾರಂಭವಾಗುವುದು ಜಗತ್ತನ್ನೇ ಸಂಕಷ್ಟಕ್ಕೆ ನೂಕಿದ ಕೋವಿಡ್ ಸಾಂಕ್ರಮಿಕದ ಅವಧಿಯಲ್ಲಿ. ಕೊರೊನಾ ಸಂಕ್ರಾಮಿಕದ ವೇಳೆ ಸಮಸ್ಯೆಯನ್ನು ಸದುಪಯೋಗಪಡಿಸಿಕೊಂಡು ತಮ್ಮ ಅಡುಗೆಮನೆಯಲ್ಲಿ ಕಂಪನಿಯನ್ನು ಸ್ಥಾಪಿಸಿ ಅದನ್ನು ಲಾಭದಾಯಕ ವ್ಯವಹಾರವಾಗಿ ಪರಿವರ್ತಿಸಿದರು.

ಉತ್ಸಾಹವಿದ್ದರೆ ವಯಸ್ಸಿನ ಹಂಗಿಲ್ಲ..ಏಕೆಂದರೆ ಕಮಲಜಿತ್ ಕೌರ್ ಕಿಮ್ಮುಸ್ ಕಿಚನ್ ಮೂಲಕ ಯಶಸ್ವಿ ಉದ್ಯಮಿಯಾದಾಗ ಅವರಿಗಿನ್ನು 50ರ ಹರೆಯ.! ಡೈರಿ ಉತ್ಪನ್ನಗಳಲ್ಲಿ ಹೆಸರುವಾಸಿಯಾದ ಪ್ರತಿಷ್ಟಿತ ಸಂಸ್ಥೆಗಳು, ತುಪ್ಪವನ್ನು ಹಾಲಿನ ಕೆನೆಯ ಮೂಲಕ ತಯಾರಿಸುವ ವಿಧಾನಕ್ಕಿಂತ ಮೊಸರಿನಿಂದ ತಾಜಾ ತುಪ್ಪ ತಯಾರಿಸುವ ಸಂಪ್ರದಾಯಿಕ ವಿಧಾನದ ತಂತ್ರದಿಂದ ಪ್ರತಿ ತಿಂಗಳು ಸಾವಿರಾರು ಡಾಲರ್‌ಗಳನ್ನು ಕಮಲಜಿತ್ ಗಳಿಸುತ್ತಿದ್ದಾರೆ.
ಕಮಲಜಿತ್ ಅವರು 2020 ರಲ್ಲಿ ಮುಂಬೈನಲ್ಲಿ ಕಿಮ್ಮುಸ್ ಕಿಚನ್ ಅನ್ನು ಸ್ಥಾಪಿಸಿದರು. ಫಾರ್ಮ್ ತಾಜಾ ತುಪ್ಪ ಅವರ ಕಂಪನಿಯ ಕೇಂದ್ರಬಿಂದುವಾಗಿದೆ. ಕಮಲಜಿತ್ ಹೇಳುವ ಪ್ರಕಾರ, ತಮ್ಮ ತವರೂರು ಲುಧಿಯಾನ ಗ್ರಾಮದಲ್ಲಿ ವಾಸಿಸುತ್ತಿದ್ದಾಗ ಅವರು ಖಾಯಿಲೆಗಳಿಲ್ಲದ ಆರೋಗ್ಯಕರ ಜೀವನ ನಡೆಸುತ್ತಿದ್ದರು. ಮದುವೆಯಾದ ನಂತರ, ತಾಜಾ ಡೈರಿ ಉತ್ಪನ್ನ ಸಿಗುವುದು ಕಷ್ಟ ಸಾಧ್ಯವಾಗಿತ್ತು. ಹೀಗಾಗಿ ಕಮಲಜಿತ್ ತಾವೇ ಡೈರಿ ಉತ್ಪನ್ನ ತಯಾರಿಸುವ ನಿರ್ಧಾರವನ್ನು ಮಾಡಿದರು.
ಇದರ ಪರಿಣಾಮದಿಂದ ಇಂದು ಜನರಿಗೂ ಕೂಡಾ ತಾಜಾ ತುಪ್ಪ ಮಾರಾಟ ಮಾಡುತ್ತಾರೆ. ಸಾಂಪ್ರದಾಯಿಕ ಬಿಲೋನಾ ವಿಧಾನದ ಮೂಲಕ ತುಪ್ಪವನ್ನು ತಯಾರಿಸಲು ಅವರು ಪಂಜಾಬಿ ನಗರವಾದ ಲುಧಿಯಾನದ ಹಾಲನ್ನು ಬಳಸುತ್ತಾರೆ. ಅದರೂ ಹಾಲಿನ ಸುವಾಸನೆ ಮತ್ತು ಗುಣಮಟ್ಟ ಬದಲಾಗದಂತೆ ಲುಧಿಯಾನದಿಂದ ಹಾಲು ಪಡೆಯುವುದು ಅಷ್ಟು ಸುಲಭದ ಮಾತಾಗಿರಲಿಲ್ಲ.
ತುಪ್ಪವನ್ನು ತಯಾರಿಸಲು ಹಲವಾರು ಮಾರ್ಗಗಳಿವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಬೆಣ್ಣೆಗಿಂತ ಮೊಸರನ್ನು ಬಳಸಿ ತುಪ್ಪವನ್ನು ಉತ್ಪಾದಿಸಲಾಗುತ್ತದೆ. ಆದರೆ ಕಮಲಜಿತ್ ಬಿಲೋನಾ ಎಂಬ ವಿಧಾನವನ್ನು ಬಳಸುತ್ತಾರೆ. ಇದರಲ್ಲಿ ಬೆಣ್ಣೆ, ಕೆನೆ ಅಥವಾ ಹಾಲಿನಿಂದ ತುಪ್ಪ ತೆಗೆಯುವ ಬದಲು ಸಂಪ್ರಾದಾಯಿಕವಾಗಿ ಅಂದರೆ ಹಸುವಿನ ಹಾಲನ್ನು ಕುದಿಸಿ ತಣ್ಣಗಾದ ಬಳಿಕ ಟೀಚಮಚ ಮೊಸರು ಸೇರಿಸಿ ಮರುದಿನ ಅಥವಾ ರಾತ್ರಿಯಿಡೀ ಒಂದು ಸ್ಥಳದಲ್ಲಿಟ್ಟು ಅದೆಲ್ಲವೂ ಮೊಸರಾದ ಬಳಿಕ ಅದನ್ನು ಕಡೆದು ಮಜ್ಜಿಗೆಯಿಂದ ತೆಗೆದ ಬೆಣ್ಣೆಯಿಂದ ತುಪ್ಪ ತಯಾರಿಸುತ್ತಾರೆ.
Chinu Kala: 20 ರೂಪಾಯಿ ವೇತನಕ್ಕೆ ದುಡಿದಾಕೆ ಈಗ ಪ್ರಸಿದ್ಧ ಜ್ಯುವೆಲ್ಲರಿ ಬ್ರಾಂಡ್ ಜತೆ 100 ಕೋಟಿ ರೂ. ಆಸ್ತಿ ಒಡತಿ!
ತಿಂಗಳ ಗಳಿಕೆ ಎಷ್ಟು?
ಕಮಲಜಿತ್ ಕೌರ್ ಅವರು ತಯಾರಿಸುವ ತುಪ್ಪಕ್ಕೆ ,ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ಎಷ್ಟು ಬೆಳೆದಿದೆ ಎಂದರೆ ವಿದೇಶಗಳಿಂದಲೂ ಜನ ತುಪ್ಪಆರ್ಡರ್ ಮಾಡುತ್ತಿದ್ದಾರೆ. 220 ಮಿಲಿ, 500 ಮಿಲಿ ಮತ್ತು 1 ಲೀಟರ್ ಹೀಗೆ ಮೂರು ವಿಭಿನ್ನ ಗಾತ್ರಗಳಲ್ಲಿ ಚಿಲ್ಲರೆ ತುಪ್ಪದ ಬಾಟಲಿಗಗಳು ಅವರ ಸಂಸ್ಥೆಯಲ್ಲಿದೆ. ಕಂಪನಿಯ CTO ಆಗಿ ಸೇವೆ ಸಲ್ಲಿಸುತ್ತಿರುವ ಕಮಲ್‌ಜಿತ್ ಅವರ ಪುತ್ರನ ಪ್ರಕಾರ, 2021 ರಲ್ಲಿ ಅವರ ಸಂಸ್ಥೆ ಪ್ರತಿ ತಿಂಗಳು 4500 ಕ್ಕೂ ಹೆಚ್ಚು ಬಾಟಲಿಗಳನ್ನು ಮಾರಾಟ ಮಾಡಿದ್ದು, 20 ಲಕ್ಷಕ್ಕೂ ಹೆಚ್ಚು ಹಣವನ್ನು ಗಳಿಸಿದ್ದಾರೆ ಎಂದು ದಿ ಬೆಟರ್ ಇಂಡಿಯಾ ವರದಿ ಮಾಡಿದೆ. ಇನ್ನು ಜೀ ನ್ಯೂಸ್ ಹಿಂದಿಯ ಪ್ರಕಾರ ಕಮಲಜಿತ್ ತಮ್ಮ ಆದಾಯದ ಶೇಕಡಾ 1ರಷ್ಟು ಗುರುದ್ವಾರಕ್ಕೆ ಮತ್ತು ಹಸಿದವರಿಗೆ ಆಹಾರ ದಾನ ಮಾಡಲು ನೀಡುತ್ತಾರೆ.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications