Kavitark Ram Shriram: ಗೂಗಲ್‌ನ ಮೊದಲ ಹೂಡಿಕೆದಾರ ರಾಮ್ ಶ್ರೀರಾಮ್ ಬಗ್ಗೆ ನಿಮಗೆ ತಿಳಿದಿದೆಯೇ?

ಕವಿತಾರ್ಕ್ ರಾಮ್ ಶ್ರೀರಾಮ್ ಭಾರತೀಯರೆಲ್ಲರೂ ಹೆಮ್ಮೆ ಪಡುವ ವ್ಯಕ್ತಿಯಾದರೂ ಇವರು ಭಾರತೀಯರಿಗೆ ಹೆಚ್ಚಾಗಿ ಚಿರಪರಿಚಿತರಲ್ಲ ಅಂದರೆ ತಪ್ಪಾಗಲಾರದು. ತಮ್ಮ ಜೀವನದ ಆರಂಭದಲ್ಲಿ ಕಷ್ಟಗಳ ಸರಮಾಲೆ ದುರಂತವನ್ನು ಕಂಡು ಬೆಳೆದ ಭಾರತೀಯ ಮೂಲದ ಬಿಲಿಯನೇರ್ ಕವಿತಾರ್ಕ್ ರಾಮ್ ಅವರ "ಜೀವನದ ಅಸಾಧಾರಣ ಯಶಸ್ಸಿನ ಕಥೆ" ಯಲ್ಲಿ ಅಮೇರಿಕನ್ ಟೆಕ್ ಟೈಕೂನ್‌ಗಳಾದ ಅಮೆಜಾನ್‌ನ ಜೆಫ್ ಬೆಜೋಸ್ ಮತ್ತು ಗೂಗಲ್‌ನ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ನಂತವರು ಸಹನಟರಾಗಿದ್ದಾರೆ ಅಂದರೆ ಎಂತವರಿಗೂ ಅಶ್ಚರ್ಯವಾದಿತು.

ಸಣ್ಣ ಗ್ಯಾರೇಜ್‌ನಲ್ಲಿ ಸ್ಥಾಪಿಸಲಾದ ಆಗ ತಾನೇ ಹುಟ್ಟುತ್ತಿರುವ ಕಂಪನಿ ಮುಂದೆ ವಿಶ್ವಕ್ಕೆ ಪಸರಿಸಿಬಹುದೆಂಬುವುದನ್ನು ಕಂಡುಕೊಂಡ ದಾರ್ಶನಿಕರು ಆಗಿದ್ದಾರೆ ಕವಿತಾರ್ಕ್ ರಾಮ್ ಶ್ರೀರಾಮ್. ಮುಂದೆ ಇದೇ ಕಂಪನಿಯು ಗೂಗಲ್ ಎಂದು ಪ್ರಸಿದ್ಧವಾಯಿತು. ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ಇನ್ನೂ ಗ್ಯಾರೇಜ್‌ನಿಂದ ಕೆಲಸ ಮಾಡುತ್ತಿರುವಾಗ ಕವಿತಾರ್ಕ್ ಅವರಲ್ಲಿ ಭರವಸೆಯನ್ನು ಕಂಡಿದ್ದರು.

ಗೂಗಲ್‌ನ ಮೊದಲ ಹೂಡಿಕೆದಾರ ರಾಮ್ ಶ್ರೀರಾಮ್ ಬಗ್ಗೆ ನಿಮಗೆ ತಿಳಿದಿದೆಯೇ?

ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ತಮ್ಮ ಗ್ಯಾರೇಜ್ ಪ್ರಾರಂಭಕ್ಕಾಗಿ ಹಣಕ್ಕಾಗಿ ವೆಂಚರ್ ಕ್ಯಾಪಿಟಲಿಸ್ಟ್ ಕವಿತಾರ್ಕ್ ರಾಮ್ ಶ್ರೀರಾಮ್ ಅವರನ್ನು ಸಂಪರ್ಕಿಸಿದ್ದರು. ಆಗಿನ್ನು ಇಂಟರ್ನೆಟ್ ಯುಗ ಅಸ್ತಿತ್ವಕ್ಕೆ ಬಂದಿರಲಿಲ್ಲ ಮತ್ತು ಅವರ ಕಂಪನಿಯನ್ನು 'ಗೂಗಲ್' ಎಂದು ಕರೆದಿರಲಿಲ್ಲ. ರಾಮ್ ಅವರು ಈ ಇಬ್ಬರು ಹೊಸ ಮತ್ತು ಭರವಸೆಯ ಯುವಕರ ಯೋಚನೆಗಳನ್ನು ಕಂಡು ಅರ್ಧ ಮಿಲಿಯನ್ ಡಾಲರ್‌ಗಳ ಚೆಕ್ ಅನ್ನು ಹಸ್ತಾಂತರಿಸಿದ್ದರು. ಇಂದು ಗೂಗಲ್ ಹೇಗೆ ಬೆಳೆದು ನಿಂತಿದೆ ಎಂಬುವುದು ವಿವರಿಸಬೇಕಿಲ್ಲ.

ಕವಿತಾರ್ಕ್ ರಾಮ್ ಶ್ರೀರಾಮ್ ಅವರು ಕೇವಲ ಮೂರು ವರ್ಷದವರಾಗಿದ್ದಾಗ ಅವರ ತಂದೆಯ ನಿಧನದ ಮೂಲಕ ಜೀವನದಲ್ಲಿ ಹಿನ್ನಡೆಯನ್ನು ಎದುರಿಸಿದರು. ಇದು ಅವರ ಕುಟುಂಬಕ್ಕೆ ಆರ್ಥಿಕ ತೊಂದರೆಯ ಹೊಡೆತ ನೀಡಿತ್ತು. ಹಣಕಾಸು ಸಂಕಷ್ಟದಿಂದ ಕವಿತಾರ್ಕ್ ಶ್ರೀರಾಮ್ ಅವರನ್ನು ಶಾಲೆಗೆ ಸೇರಿಸುವುದು ಸವಾಲಾಗಿತ್ತು.

ಎಲ್ಲಾ ಕಷ್ಟಗಳನ್ನು ಎದುರಿಸಿ ಅಂತಿಮವಾಗಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಬಿಎಸ್ ಪದವಿಯನ್ನು ಗಳಿಸಿದರು. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಎಂಬಿಎ ಓದುವ ಅವಕಾಶ ಬರುವ ಮೂಲಕ ಇವರ ಜೀವನದಲ್ಲಿ ಮೊದಲ ತಿರುವು ಬಂದಿತು. ನಂತರ ಅವರು ಕಾರ್ಯನಿರ್ವಾಹಕರಾಗುವ ಮೂಲಕ ವೃತ್ತಿಜೀವನವನ್ನು ಆರಂಭಿಸಿದರು. ಇಂದು ಇ-ಕಾಮರ್ಸ್ ದೈತ್ಯವಾಗಿ ಬೆಳೆದಿರುವ ಅಮೆಜಾನ್ ಸಂಸ್ಥೆಯ ಆರಂಭಿಕ ಹಂತದಲ್ಲಿ ಜೆಫ್ ಬೆಜೋಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು.

ಶ್ರೀರಾಮ್ ಅವರ ನೇತೃತ್ವದಲ್ಲಿ ಆನ್‌ಲೈನ್ ಸಂಸ್ಥೆ ಜಂಗ್ಲೀ ಅನ್ನು 1998 ರಲ್ಲಿ ಅಮೆಜಾನ್ $185 ಮಿಲಿಯನ್‌ಗೆ ಸ್ವಾಧೀನಪಡಿಸಿಕೊಂಡಿತು. ರಾಮ್ ಅವರು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿ ಕಂಪನಿಯ ಉಪಾಧ್ಯಕ್ಷರಾಗಿದ್ದರು. 2000ರಲ್ಲಿಅವರ ಜೀವನದಲ್ಲಿ ಎರಡನೇ ತಿರುವು ಆಗಿತ್ತು. ಇದೇ ವರ್ಷ ಅವರು ತಮ್ಮ ವೆಂಚರ್ ಕ್ಯಾಪಿಟಲ್ (ಸಾಹಸೋದ್ಯಮ ಬಂಡವಾಳ) ಸಂಸ್ಥೆಯಾದ " ಶೆರ್ಪಾಲೋ ವೆಂಚರ್ಸ್" ಅನ್ನು ಸ್ಥಾಪಿಸಿದರು. ಈ ಸಂಸ್ಥೆ ಮೂಲಕ ಇನ್ನು ಅಂಬೆಗಾಲಿಡುತ್ತಿರುವ ಕಲ್ಪನೆಗಳಲ್ಲಿರುವ ಸಂಭಾವ್ಯ ಉದ್ಯಮಕ್ಕೆ ಹೂಡಿಕೆಗಳನ್ನು ಮಾಡಲು ನಿರ್ಧರಿಸಿದರು.

ಶ್ರೀರಾಮ್ ಅವರು ಅರ್ಧ ಮಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಆರಂಭದಲ್ಲಿ ಗೂಗಲ್ ಬೆಂಬಲ ನೀಡಿದರು. ಇದು ಇಂದು ಆಲ್ಫಾಬೆಟ್ ಎಂದು ಕರೆಯಲ್ಪಡುವ ವಿಶ್ವದ ಅತ್ಯಂತ ಶ್ರೀಮಂತ ಕಂಪನಿಯಾಗಿ ಬೆಳೆದು ನಿಂತಿದ್ದು ಇದು 138 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಶ್ರೀರಾಮ್ ತಮ್ಮ ಹೆಚ್ಚಿನ ಪಾಲನ್ನು ಮಾರಾಟ ಮಾಡಿದ್ದರೂ ಕೂಡಾ, ಅವರು ಇನ್ನೂ ಆಲ್ಫಾಬೆಟ್ ಮಂಡಳಿಯಲ್ಲಿದ್ದಾರೆ.

ಶ್ರೀರಾಮ್ ಅವರ ನಿವ್ವಳ ಮೌಲ್ಯ 21,637 ಕೋಟಿ ರೂಪಾಯಿ ಆಗಿದೆ. ಗೂಗಲ್ ಮಾತ್ರವಲ್ಲದೇ ಇತರ ಪ್ರಮುಖ ಹೂಡಿಕೆಗಳನ್ನು ಪೇಪರ್‌ಲೆಸ್ ಪೋಸ್ಟ್, ಗಸ್ಟೋ ಮತ್ತು ಇನ್‌ಮೊಬಿಯಂತಹ ಕಂಪನಿಗಳಲ್ಲಿ ಮಾಡಿದ್ದಾರೆ. ಬಿಲಿಯನೇರ್ ಆಗಿರುವ ಶ್ರೀರಾಮ್ ಮತ್ತು ಅವರ ಪತ್ನಿ 2014 ರಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಕ್ಕೆ 61 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+