ಶೂನ್ಯದಿಂದ ಪ್ರಾರಂಭಿಸಿ ದೈತ್ಯಾಕಾರದ ಕನಸುಗಳನ್ನು ನಂಬಲಾಗದಂತೆ ನನಸಾಗಿಸಿದ ಓರ್ವ ವ್ಯಕ್ತಿಯೇ ಮೂತೇದತ್ ಪಂಜನ್ ರಾಮಚಂದ್ರನ್. ಇವರು 14,000 ಕೋಟಿ ರೂಪಾಯಿ ಮೌಲ್ಯದ ಕಂಪನಿಯಾಗಿ ಬೆಳೆದು ನಿಂತ ಜ್ಯೋತಿ ಲ್ಯಾಬೋರೇಟರೀಸ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ. ಬಹುಶಃ ನಿಮಗೆ ಪಂಜನ್ ರಾಮಚಂದ್ರನ್ ಅಂದರೆ ಯಾರು ಎಂದು ತಿಳಿದಿರಲಿಕ್ಕಿಲ್ಲ.
ಆದರೆ ಬಿಳಿ ಬಣ್ಣದ ಉಡುಪುಗಳಲ್ಲಿ ನಿಷ್ಕಳಂಕ ಹೊಳಪು ಮತ್ತು ಬಿಳುಪನ್ನು ನೀಡುವ "ಉಜಾಲಾ ಬ್ಲೂ" ಅಂದರೆ ಥಟ್ಟನೆ ನೀಲಿ ಬಣ್ಣ ಪುಟ್ಟ ಬಾಟಲಿ ನಮ್ಮ ಕಣ್ಣಮುಂದೆ ಹಾದುಹೋಗುತ್ತದೆ. ಇದಲ್ಲದೇ ಜ್ಯೋತಿ ಲ್ಯಾಬೋರೇಟರೀಸ್ ಲಿಮಿಟೆಡ್ ನ ಹಲವು ಉತ್ಪನ್ನಗಳು ಜನಪ್ರಿಯವಾಗಿದೆ. ಅವುಗಳನ್ನು ಮುಂದೆ ನೋಡೋಣ..ಮುಂದೆ ಓದಿ..

ಲಕ್ಷಾಂತರ ಯುವ ಉದ್ಯಮಿಗಳಿಗೆ ಉದಾಹರಣೆ
ಜ್ಯೋತಿ ಲ್ಯಾಬೋರೇಟರೀಸ್ ಲಿಮಿಟೆಡ್ ಹುಟ್ಟು ಹಾಕಿದ ರಾಮಚಂದ್ರನ್ ಲಕ್ಷಾಂತರ ಯುವ ಉದ್ಯಮಿಗಳಿಗೆ ಉದಾಹರಣೆಯಾಗಿದ್ದಾರೆ. ಎಂ ಪಿ ರಾಮಚಂದ್ರನ್ ಅವರು ಕೇವಲ 5000 ರೂ ಸಾಲ ಪಡೆದು ವ್ಯವಹಾರ ಪ್ರಾರಂಭಿಸಿ, ತಮ್ಮ ಕಠಿಣ ಪರಿಶ್ರಮ ಮತ್ತು ತೀಕ್ಷ್ಣವಾದ ವ್ಯವಹಾರದ ಚಾತುರ್ಯದಿಂದ ಇಂದು ಬಹುಕೋಟಿ ಕಂಪನಿಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜ್ಯೋತಿ ಲ್ಯಾಬೋರೇಟರೀಸ್ ಲಿಮಿಟೆಡ್ ಇಂದು ಉಜಾಲಾ ಲಿಕ್ವಿಡ್ ಕ್ಲೋತ್ ವೈಟ್‌ನರ್ ಮತ್ತು ಮ್ಯಾಕ್ಸೋ(Maxo) ಸೊಳ್ಳೆ ನಿವಾರಕ ಲಿಕ್ವಿಡ್, ಎಕ್ಸೋ, ಟಿ-ಶೈನ್ ಹೀಗೆ ಹತ್ತು ಹಲವು ಉತ್ಪನಗಳನ್ನು ಉತ್ಪದಿಸುತ್ತಿದ್ದು, ಅಂದು ತಮ್ಮ ಸ್ವಂತ ತಾತ್ಕಾಲಿಕ ಕಾರ್ಖಾನೆಯನ್ನು ಸ್ಥಾಪಿಸಲು ರಾಮಚಂದ್ರನ್ ಅವರು ತನ್ನ ಸಹೋದರನಿಂದ 5000 ರೂ ಸಾಲವನ್ನು ಪಡೆದು, ಇಂದು ಅದನ್ನು 13,583 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಕಂಪನಿಯನ್ನಾಗಿ ಪರಿವರ್ತಿಸಿದ್ದಾರೆ.
ಕೇರಳದವರಾದ ರಾಮಚಂದ್ರನ್ ಅವರು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದರು. ಶಾಲಾ ಶಿಕ್ಷಣದ ಬಳಿಕ ತ್ರಿಶೂರ್‌ನ ಸೇಂಟ್ ಥಾಮಸ್ ಕಾಲೇಜಿನಲ್ಲಿ ತಮ್ಮ ಬಿ.ಕಾಂ ಪದವಿ ಪಡೆದುಕೊಂಡರು. ಮುಂದೆ ಓದಬೇಕೆಂಬ ಅತಿಯಾಸೆ ಇದ್ದರೂ ಆರ್ಥಿಕ ಸಮಸ್ಯೆಯಿಂದಾಗಿ ರಾಮಚಂದ್ರನ್ ಅವರು ಅಕೌಂಟೆಂಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.
ಕೆಲ ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದರೂ ಆ ಸಂಸ್ಥೆ ಸ್ಥಗಿತಗೊಂಡ ಕಾರಣ ಹೊಸ ಉದ್ಯೋಗವನ್ನು ಹುಡುಕುವ ಬದಲು ಹೊಸದಾಗಿರುವ ಮತ್ತು ಸ್ವಂತವಾಗಿರುವ ವ್ಯಾಪಾರ ಪ್ರಾರಂಭಿಸಬೇಕು ಅಂದುಕೊಂಡರು. ರಾಮಚಂದ್ರನ್ ಬಟ್ಟೆಗಾಗಿ ವೈಟ್ನರ್ ತಯಾರಿ ಮಾಡಲು ನಿರ್ಧರಿಸಿ ಇದಕ್ಕಾಗಿ ಅವರು ತಮ್ಮ ಅಡುಗೆಮನೆಯಲ್ಲಿ ಪ್ರಯೋಗವನ್ನು ಪ್ರಾರಂಭಿಸಿದರು, ಆದರೆ ಅವರಿಗೆ ಯಶಸ್ಸು ಸಿಗಲಿಲ್ಲ.
ಹೀಗಿರುವ ಒಂದು ದಿನ ರಾಮಚಂದ್ರನ್ ಅವರು ಕೆಮಿಕಲ್ ಇಂಡಸ್ಟ್ರಿ ಮ್ಯಾಗಜೀನ್ ಓದುತ್ತಿರುವಾಗ, ಅದರಲ್ಲಿ ಪರ್ಪಲ್ ಡೈ ಯಿಂದ ಜವಳಿ ತಯಾರಕರು ಸಾಧ್ಯವಾದಷ್ಟು ಬಿಳಿ ಮತ್ತು ಬ್ರೈಟ್ ಕಲರ್ ಪಡೆಯಬಹುದು ಎಂದು ಬರೆದಿತ್ತು. ಇದಾದ ನಂತರ, ರಾಮಚಂದ್ರನ್ ಒಂದು ವರ್ಷ ನೇರಳೆ ಬಣ್ಣಗಳ ಪ್ರಯೋಗವನ್ನು ಮುಂದುವರೆಸಿದರು.
ಜೀವನ ಬದಲಾಯಿಸಿದ ಉಜಾಲಾ
"ಉಜಾಲಾ" ಅವರ ಜೀವನವನ್ನು ಬದಲಾಯಿಸುವ ಈ ಕಥೆಯು 1983 ರಲ್ಲಿ ಪ್ರಾರಂಭವಾಯಿತು. ಅದೇ ವರ್ಷ ರಾಮಚಂದ್ರನ್ ಅವರು ಕೇರಳದ ತ್ರಿಶೂರ್‌ನಲ್ಲಿ ತಮ್ಮ ಕುಟುಂಬದ ಜಮೀನಿನ ಸ್ವಲ್ಪ ಭಾಗದಲ್ಲಿ ತಾತ್ಕಾಲಿಕ ಕಾರ್ಖಾನೆಯೊಂದು ಸ್ಥಾಪಿಸಿದರು. ತಮ್ಮ ಕಂಪನಿಗೆ ಜ್ಯೋತಿ ಲ್ಯಾಬೋರೇಟರೀಸ್ ಎಂದು ತಮ್ಮ ಮಗಳು ಜ್ಯೋತಿಯ ಹೆಸರಿರಿಸಿದರು.
ಉಜಾಲಾ ನಿಜಕ್ಕೂ ನವೀನ ಪರಿಕಲ್ಪನೆಯಾಗಿ ಬಡವರಿಂದ ಸಿರಿವಂತರವರೆಗೆ ಇದು ಆಕರ್ಷಿಸಿತು. ಮೊದಲು 5 ಮಾರಾಟ ಮಹಿಳೆಯರ ಮೂಲಕ ಮನೆಯಿಂದ ಮನೆಗೆ ಮಾರಾಟ ಆರಂಭಿಸಿ ಉಜಾಲಾವನ್ನು ಹಲವು ಪ್ರಯತ್ನದ ಬಳಿಕ ಅಂಗಡಿಗಳಲ್ಲಿ ಮಾರಾಟಕ್ಕೆ ಸ್ವೀಕರಿಸಲಾಯಿತು ಮತ್ತು ವಾಣಿಜ್ಯಿಕವಾಗಿ ವಿಸ್ತರಿಸಲಾಯಿತು. ಉಳಿದ ಕಥೆ ಇತಿಹಾಸವಾಯಿತು!


Click it and Unblock the Notifications