Anil Nagar: ಐಐಟಿ ಓದಿ ಕೋಚಿಂಗ್‌ ಕಂಪನಿ ಸ್ಥಾಪಿಸಿ 1400 ಕೋಟಿ ರೂ. ಆಸ್ತಿ ಸಂಪಾದಿಸಿದ ರೈತ ಕುಟುಂಬದ ಅನಿಲ್‌ ನಗರ್‌

ಎಜ್ಯುಟೆಕ್‌ ಪ್ಲಾಟ್‌ಫಾರ್ಮ್‌ ಅಡ್ಡ 247, ವೀಕ್ಷಾ ಎಂಬ 3D ಲರ್ನಿಂಗ್‌ ಪ್ರಾಡೆಕ್ಟ್‌ ಅನ್ನು ಸ್ವಾಧೀನಪಡಿಸಿಕೊಂಡಿದೆ. ಆದರೆ ಈ ಡೀಲ್‌ನ ಆರ್ಥಿಕ ವ್ಯವಹಾರದ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಈ ಕಂಪನಿಯನ್ನು ಅನಿಲ್‌ ನಗರ್‌ ಅವರು ಸ್ಥಾಪಿಸಿದ್ದಾರೆ. ಅನಿಲ್‌ ನಗರ್‌ ಅವರು ಐಐಟಿ ಬಿಎಚ್‌ಯುನಲ್ಲಿ ಓದಿದ್ದಾರೆ. ಅನಿಲ್‌ ನಗರ್‌ 1998 ಹಾಗೂ 2002 ರ ಮಧ್ಯೆ ಬಿಎಚ್‌ಯುನಲ್ಲಿ ಎಂಜಿನಿಯರಿಂಗ್‌ ಪದವಿಯನ್ನು ಮಾಡಿದ್ದಾರೆ.

ಅದೇ ರೀತಿ ಗೋವಾ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನಿಂದ ಮಾರ್ಕೆಟಿಂಗ್‌ ಹಾಗೂ ಫೈನಾನ್ಸ್‌ನಲ್ಲಿ ಪಿಜಿಡಿಎಂ ಪದವಿಯನ್ನು ಕೂಡ ಪಡೆದುಕೊಂಡಿದ್ದಾರೆ. ಅನಿಲ್‌ ನಗರ್‌ ಅವರು ಲಿಂಕ್ಡ್‌ಇನ್‌ನಲ್ಲಿ ನೀಡಿರುವ ಮಾಹಿತಿಯಂತೆ ಉತ್ತರ ಪ್ರದೇಶದ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದಿದ್ದಾರೆ. ಜೀವನದಲ್ಲಿ ವಿದ್ಯೆ ಎನ್ನುವುದು ಕಾಂತ್ರಿಯನ್ನು ಮಾಡುವ ಮೂಲಕ ಸಾಕಷ್ಟು ಬದಲಾವಣೆಗೆ ಕಾರಣವಾಗುತ್ತದೆ ಎಂಬುದನ್ನು ಬಲವಾಗಿ ನಂಬಿದವರು.

ಈ ವಿಷನ್‌ ಇಟ್ಟುಕೊಂಡು ಅನಿಲ್‌ ನಗರ್‌ ಅವರು ಅಡ್ಡ 247 ಅನ್ನು ಪ್ರಾರಂಭಿಸಿದ್ದರು. ಭಾರತದ ವಿವಿಧ ಭಾಷೆಗಳಲ್ಲಿ ಆನ್‌ಲೈನ್‌ ಮೂಲಕ ಜನರಿಗೆ ಕೈಗೆಟಕುವ ದರದಲ್ಲಿ ಶಿಕ್ಷಣವನ್ನು ನೀಡಬೇಕೆಂಬ ಗುರಿಯನ್ನು ಹೊಂದಿದ್ದರು. ಅನಿಲ್‌ ನಗರ್‌ ಅವರು ಕಾಗ್ನಿಜೆಂಟ್‌ ಕಂಪನಿಯಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. ಅನಿಲ್‌ ನಗರ್‌ ಅವರು ತಮ್ಮ ಕಾರ್ಪೊರೇಟ್‌ ಜೀವನದಲ್ಲಿರಬೇಕಾದರೆ, ಬದುಕಿನಲ್ಲಿ ಬಹಳ ಮೌಲ್ಯಯುತವಾದ ಏನನ್ನಾದರೂ ಮಾಡಬೇಕೆಂದು ಬಯಸಿದ್ದರು.

ಸಣ್ಣ ನಗರಗಳು ಹಾಗೂ ಹಳ್ಳಿಗಳಲ್ಲಿ ನಾನಾ ರೀತಿಯ ಆಕಾಂಕ್ಷೆಗಳನ್ನು ಹೊಂದಿರುವವರಿಗೆ ಸಹಾಯ ಮಾಡಲು ನಿರ್ಧರಿಸಿದರು. ಅನಿಲ್‌ ನಗರ್‌ ಅವರು ಐಐಟಿ ಮಾಡಬೇಕಾದರೆ ಸರಿಯಾದ ಮಾರ್ಗದರ್ಶನ ದೊರೆಯದೆ ಸಾಕಷ್ಟು ತೊಂದರೆ ಅನುಭವಿಸಿದ್ದರು. ಹೀಗಾಗಿ, ಅನಿಲ್‌ ನಗರ್‌ ಅವರಲ್ಲಿ ಗ್ರಾಮೀಣ ಭಾಗದಿಂದ ಕಲಿಕೆಗೆ ಬರುವ ವಿದ್ಯಾರ್ಥಿಗಳಿಗೆ ನೆರವಾಗಬೇಕೆಂಬ ಹಂಬಲ ಇತ್ತು. ಅನಿಲ್‌ ನಗರ್‌, ಸೌರಭ್‌ ಬನ್ಸಾಲ್‌ ಜತೆಗೆ ಸೇರಿಕೊಂಡು ಕೆರಿಯರ್‌ ಪವರ್‌ ಎನ್ನುವ ಮೊದಲ ಸ್ಟಾರ್ಟಪ್‌ ಅನ್ನು ಪ್ರಾರಂಭಿಸಿದರು.

ಅನಿಲ್‌ ನಗರ್‌ ಅವರ ಕೋಚಿಂಗ್‌ ಇನ್‌ಸ್ಟಿಟ್ಯೂಟ್‌ ಪದವೀಧರ ವಿದ್ಯಾರ್ಥಿಗಳಿಗೆ ಸರ್ಕಾರಿ ಪರೀಕ್ಷೆಗಳನ್ನು ಅದರಲ್ಲಿಯೂ ಬ್ಯಾಂಕ್‌ ನೇಮಕಾತಿ ಪರೀಕ್ಷೆಗಳನ್ನು ಪಾಸ್‌ ಮಾಡುವುದಕ್ಕೆ ಮಾರ್ಗದರ್ಶನ ನೀಡುತ್ತಿತ್ತು. 2010ರಲ್ಲಿ ಒಂದು ಲಕ್ಷ ರೂಪಾಯಿ ಮಾಡಿದ್ದ ಹೂಡಿಕೆಯು ಕೇವಲ ಒಂದು ವರ್ಷದಲ್ಲಿ 20 ಲಕ್ಷ ರೂಪಾಯಿ ಆಗಿತ್ತು. ಅಷ್ಟೇಅಲ್ಲ ಅವರ ಕಂಪನಿಯು ಭಾರತದಲ್ಲೇ ಒಂದು ಪ್ರಸಿದ್ಧ ಕೋಚಿಂಗ್‌ ಸೆಂಟರ್‌ ಆಗಿ ಬದಲಾಯಿತು.

ಅನಿಲ್‌ ನಗರ್‌ ಅವರು 2016ರಲ್ಲಿ ಅಡ್ಡ 247 ಅನ್ನು ಪ್ರಾರಂಭಿಸಿದರು. ಈ ಕಂಪನಿಯು ನಿರಂತರ ಪ್ರಗತಿಯನ್ನು ಸಾಧಿಸಲಾರಂಭಿಸಿತು. ಈಗ ಇದು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಹಲವಾರು ಪೋರ್ಟಲ್‌ಗಳನ್ನು ಹೊಂದಿದ್ದು, ಆ ಪೈಕಿ ಬ್ಯಾಂಕಿಂಗ್‌, ಎಸ್‌ಎಸ್‌ಸಿ, ಟೀಚಿಂಗ್‌, ರಕ್ಷಣೆ, ಗೇಟ್‌, ಜೆಇಇ, ನೀಟ್‌, ಯುಪಿಎಸ್‌ಸಿ ಹಾಗೂ ರಾಜ್ಯ ಸರ್ಕಾರದ ಪರೀಕ್ಷೆಗಳ ವಿಷಯಗಳೂ ಕೂಡಾ ಸೇರಿವೆ.

ಎರಡು, ಮೂರು ಹಾಗೂ ನಾಲ್ಕನೇ ಹಂತದ ನಗರಗಳ ವಿದ್ಯಾರ್ಥಿಗಳನ್ನು ತಲುಪುವುದು ಈ ಕಂಪನಿಯ ಮುಖ್ಯ ಗುರಿಯಾಗಿದೆ. ಕಳೆದ ವರ್ಷ ಈ ಕಂಪನಿಯು 280 ಕೋಟಿ ರೂಪಾಯಿ ಫಂಡಿಂಗ್‌ ಅನ್ನು ಕೂಡ ಪಡೆದುಕೊಂಡಿದೆ. ಈ ಕಂಪನಿಯ ಆಸ್ತಿ ಮೌಲ್ಯ ಈಗ 1400 ಕೋಟಿ ರೂಪಾಯಿ ಆಗಿದೆ. ಅನಿಲ್‌ ನಗರ್‌ ಅವರು ರೈತ ಕುಟುಂಬದಲ್ಲಿ ಹುಟ್ಟಿದ್ದಾರೆ. ಅಡ್ಡ 247 ಈಗ ಎರಡು ಮಿಲಿಯನ್‌ ಚಂದಾದಾರರೊಂದಿಗೆ 50 ಲಕ್ಷ ರೂಪಾಯಿ ಮಾಸಿಕ ಆಕ್ಟೀವ್‌ ಯೂಸರ್‌ ಅನ್ನು ಹೊಂದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+