ಔಷಧ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸ್ಟೈಡ್ಸ್ ಫಾರ್ಮಾ ಸೈನ್ಸ್ ಕಂಪನಿಯು 1990 ರಲ್ಲಿ ಸ್ಥಾಪನೆಯಾಗಿದ್ದು, ಅರುಣ್ ಕುಮಾರ್ ಅವರು ಈ ಕಂಪನಿಯ ಸಂಸ್ಥಾಪಕ ಹಾಗೂ ಪ್ರವರ್ತಕ ನಿರ್ದೇಶಕರಾಗಿದ್ದಾರೆ. ಅರುಣ್ ಅವರು ಫಸ್ಟ್ ಜನರೇಷನ್ ಉದ್ಯಮಿಯಾಗಿದ್ದಾರೆ.
ಈ ಫಾರ್ಮಾ ಕಂಪನಿಯನ್ನು ಪ್ರಾರಂಭವಾದಾಗಿನಿಂದ ಅರುಣ್ ಅವರು ಇದನ್ನು ಮುನ್ನಡೆಸುತ್ತಿದ್ದು, ತಮ್ಮ ವಿಭಿನ್ನ ಬಿಸಿನೆಸ್ ತಂತ್ರಗಾರಿಕೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಮನ್ನಣೆಯನ್ನು ಪಡೆದುಕೊಂಡಿದೆ. ಈ ಫಾರ್ಮಾ ಕಂಪನಿಯು 4840 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಎನ್‌ಎಸ್‌ಇಯಲ್ಲಿ ಕಂಪನಿಯ ಷೇರು ಮೌಲ್ಯವು 539.70 ರೂಪಾಯಿ ಇದೆ. ಈ ಕಂಪನಿಯ ಕೇಂದ್ರ ಕಚೇರಿಯು ಬೆಂಗಳೂರಿನಲ್ಲಿ ಇದೆ.

ಸ್ಟೈಡ್ಸ್ ಫಾರ್ಮಾ ಸೈನ್ಸ್ ಕಂಪನಿಯು ಔಷಧಗಳು, ಔಷಧೀಯ ಉತ್ಪನ್ನಗಳು, ನ್ಯೂಟ್ರಾಸ್ಯುಟಿಕಲ್‌ಗಳನ್ನು ತಯಾರಿಸುತ್ತಿದೆ. ಸಾಫ್ಟ್ಜೈಲ್ ಕ್ಯಾಪ್ಸುಲ್‌ಗಳು, ಹಾರ್ಡ್‌ಜೆಲ್ ಕ್ಯಾಪ್ಸುಲ್‌ಗಳು, ಮಾತ್ರೆಗಳು, ಚುಚ್ಚುಮದ್ದುಗಳು ಸೇರಿವೆ. ಕಂಪನಿಯ ಆಡಳಿತ ಮಂಡಳಿಯು ಸ್ಟ್ರೈಡ್ಸ್ ಫಾರ್ಮಾ ಸೈನ್ಸ್, ಸ್ಟೆರಿಸೈನ್ಸ್ ಸ್ಪೆಷಾಲಿಟೀಸ್ ಮತ್ತು ಸ್ಟೆಲಿಸ್ ಬಯೋಫಾರ್ಮಾವನ್ನು ವ್ಯವಸ್ಥೆಗೊಳಿಸುವ ಯೋಜನೆಯನ್ನು ಅನುಮೋದಿಸಿರುವುದಾಗಿ ಅಧಿಕೃತವಾಗಿ ತಿಳಿಸಿದೆ.
ಈ ವ್ಯವಸ್ಥೆಯು ಸಿಡಿಎಂಒ (contract development and manufacturing organisation) ಹಾಗೂ ಸ್ಟ್ರೈಡ್ಸ್‌ನ ಸಾಫ್ಟ್ ಜೆಲಾಟಿನ್ ವ್ಯವಹಾರವನ್ನು ವಿಭಜಿಸುವುದಾಗಿ ಅದು ಹೇಳಿದೆ. ಇದು ಸ್ಟೆಲಿಸ್‌ಗೆ ಸ್ಟೆರಿಸೈನ್ಸ್‌ನ ಸಿಡಿಎಂಒ ಒಪ್ಪಂದ ವ್ಯವಹಾರದ ವಿಭಜನೆಯನ್ನು ಒಳಗೊಂಡಿರುತ್ತದೆ.
"ಮುಂದಿನ 12 ರಿಂದ 18 ತಿಂಗಳುಗಳ ಒಳಗೆ ಎನ್‌ಸಿಎಲ್‌ಟಿ ಪ್ರಕ್ರಿಯೆಯ ಮೂಲಕ ಈ ಕಂಪನಿಯನ್ನು ರಚಿಸುವ ನಿರೀಕ್ಷೆ ಇದೆ," ಎಂದು ಸ್ಟ್ರೈಡ್ಸ್ ಫಾರ್ಮಾ ಸೈನ್ಸ್ ಎಕ್ಸಿಕ್ಯೂಟಿವ್ ಚೇರ್‌ಪರ್ಸನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಅರುಣ್ ಕುಮಾರ್ ಹೇಳಿದ್ದಾರೆ.


Click it and Unblock the Notifications