ಇಲಂಗೋ ಪಂಡರಿನಾಥನ್ ಅವರು ಹಿಂದೂಸ್ತಾನ್ ಆಯಿಲ್ ಎಕ್ಸ್‌ಪ್ಲೊರೇಷನ್ ಕಂಪನಿ(ಎಚ್‌ಒಇಸಿ)ಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಈ ಕಂಪನಿಯು ಗ್ಯಾಸ್ ಎಕ್ಸ್‌ಪ್ಲೊರೇಷನ್ ವ್ಯವಹಾರದಲ್ಲಿ ಗಮನಾರ್ಹವಾಗಿ ತೊಡಗಿಸಿಕೊಂಡಿದೆ. 2023ರ ಸೆಪ್ಟಂಬರ್ 29ರ ಮಾಹಿತಿಯಂತೆ ಕಂಪನಿಯು ಒಟ್ಟು 2283 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.
ಆ ದಿನದಂದು ಎನ್‌ಎಸ್‌ಇನಲ್ಲಿ ಎಚ್‌ಒಇಸಿ ಕಂಪನಿಯ ಷೇರು ಮೌಲ್ಯ 172.55 ರೂಪಾಯಿ ಆಗಿತ್ತು. ಪಂಡರಿನಾಥನ್ ಅವರು ಅಪ್‌ಸ್ಟ್ರೀಮ್ ತೈಲ ಹಾಗೂ ಅನಿಲ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ಈ ಉದ್ಯಮ ಕ್ಷೇತ್ರದಲ್ಲಿ ಅವರು ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದು, ಭಾರತೀಯ ಉದ್ಯಮ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಪಂಡರಿನಾಥನ್ ಅವರು ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಎಂಬಿಎನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಇದಕ್ಕೂ ಮೊದಲು ಅವರು ಮದ್ರಾಸ್ ಕ್ರಿಸ್ಟ್ ಕಾಲೇಜಿನಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಪಂಡರಿನಾಥನ್ ಅವರು 1985ರಲ್ಲಿ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿಯಲ್ಲಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿದ್ದರು.
ಇಲಂಗೋ ಅವರು ಎಚ್‌ಒಇಸಿಯಲ್ಲಿ 2015ರಲ್ಲಿ ಪ್ರಮೋಟರ್ ಆಗಿ ಸೇರಿಕೊಂಡಿದ್ದರು. ಎಚ್‌ಒಇಸಿಗೆ ಸೇರುವ ಮೊದಲು ಅವರು ಕೈರ್ನ್ ಇಂಡಿಯಾ ಲಿಮಿಟೆಡ್‌ನಲ್ಲಿ ಐದು ವರ್ಷಗಳ ಕಾಲ ಸಿಇಒ ಹಾಗೂ ಪೂರ್ಣಾವಧಿಯ ನಿರ್ದೇಶಕರಾಗಿದ್ದರು. ಕೈರ್ನ್ ಜತೆಗೆ ಸುಧೀರ್ಘವಾಗಿ ತೊಡಗಿಸಿಕೊಂಡಿದ್ದ ಅವರು ಈ ಸಂಸ್ಥೆಯಲ್ಲಿ ಜನಪ್ರಿಯ ಆಯಿಲ್ ಹಾಗೂ ಗ್ಯಾಸ್ ಕಂಪನಿಯಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅವರು ಈ ಕಂಪನಿಯಲ್ಲಿ 2009ರಿಂದ 2014ರ ಏಪ್ರಿಲ್ ಅಂತ್ಯದವರೆಗೆ ಕೆಲಸ ಮಾಡಿದ್ದರು. ಹಿಂದೂಸ್ತಾನ್ ಆಯಿಲ್ ಎಕ್ಸ್‌ಪ್ಲೊರೇಷನ್ ಕಂಪನಿ ಲಿಮಿಟೆಡ್ ತೈಲ ಹಾಗೂ ಗ್ಯಾಸ್ ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ.
ಈ ಕಂಪನಿಯು ಭಾರತದಲ್ಲಿ ಒಂಬತ್ತು ಗ್ಯಾಸ್ ಹಾಗೂ ಆಯಿಲ್‌ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ. 1983ರಲ್ಲಿ ಸಂಘಟಿತವಾದ ಹಿಂದೂಸ್ತಾನ್ ಆಯಿಲ್ ಎಕ್ಸ್‌ಪ್ಲೊರೇಷನ್ ಕಂಪನಿ ಲಿಮಿಟೆಡ್ ವಡೋದರಾವನ್ನು ಕೇಂದ್ರೀಕರಸಿ ವ್ಯವಹಾರ ನಡೆಸುತ್ತಿದೆ.


Click it and Unblock the Notifications