ಹಲವು ಉದ್ಯಮಿಗಳು ಕಂಪನಿಗಳಲ್ಲಿ ಕೆಳ ಹಂತದ ಹುದ್ದೆಗಳಲ್ಲಿ ವೃತ್ತಿ ಬದುಕನ್ನು ಪ್ರಾರಂಭಿಸಿ ಉನ್ನತ ಸ್ಥಾನಕ್ಕೆ ಏರಿದ ಹತ್ತಾರು ಉದಾಹರಣೆಗಳು ಅಥವಾ ಯಶೋಗಾಥೆಗಳು ನಮ್ಮ ಮುಂದೆ ಇವೆ. ಅಂಥಹ ಒಬ್ಬರು ಯಶಸ್ವಿ ಉದ್ಯಮಿಯ ಕಥೆ ಇದಾಗಿದ್ದು, ಆ ಕಂಪನಿಯಲ್ಲಿ ಅವರು ಬ್ರಾಂಡ್ ಅಸೋಸಿಯೇಟ್ ಆಗಿ ಸೇರಿಕೊಂಡು ಬಳಿಕ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೇರಿದ್ದಾರೆ. ಅವರ ಹೆಸರು ಡಾ. ಸಂಜೀವ್ ಪಾಂಚಾಲ್. ಅವರು ಅಸ್ಟ್ರಾಜೆನೆಕಾ ಫಾರ್ಮಾ ಇಂಡಿಯಾ ಲಿಮಿಟೆಡ್ ಅಧ್ಯಕ್ಷರು ಹಾಗೂ ಎಂಡಿ ಕೂಡ ಆಗಿದ್ದಾರೆ.
ಪಾಂಚಾಲ್ ಅವರು 2003ರಲ್ಲಿ ಬ್ರಾಂಡ್ ಅಸೋಸಿಯೇಟ್‌ಆಗಿ ಬಯೋಫಾರ್ಮಾಸ್ಯುಟಿಕಲ್ ಕಂಪನಿಗೆ ಸೇರಿದ್ದರು. 2023ರ ಜನವರಿಯಲ್ಲಿ ಅವರು ಅಧ್ಯಕ್ಷರು ಹಾಗೂ ಎಂಡಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಹಲವು ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಕಂಪನಿಯು 2023ರ ಅಕ್ಟೋಬರ್ 11 ರ ಪ್ರಕಾರ, 11,700 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.

ಅಸ್ಟ್ರಾಜೆನೆಕಾ ಫಾರ್ಮಾ ಇಂಡಿಯಾ ಲಿಮಿಟೆಡ್ ಮುಂಚೂಣಿಯಲ್ಲಿರುವ ಬಯೋ ಫಾರ್ಮಾಸುಟಿಕಲ್ ಕಂಪನಿಯಾಗಿದ್ದು, 2023ರ ಜ.1ರಿಂದ ಅನ್ವಯವಾಗುವಂತೆ ಡಾ. ಸಂಜೀವ್‌ಪಾಂಚಾಲ್‌ಅವರನ್ನು ಕಂಟ್ರಿ ಪ್ರೆಸಿಡೆಂಟ್ ಹಾಗೂ ಎಂಡಿಯಾಗಿ ನೇಮಕ ಮಾಡುವುದಾಗಿ ಘೋಷಿಸಲಾಗಿತ್ತು.
ಈ ಕಂಪನಿಯಲ್ಲಿ ಸಂಜೀವ್ ಅವರ ಸುಧೀರ್ಘ 20 ವರ್ಷಗಳ ಅವಧಿಯಲ್ಲಿ ಅವರು ಯುಕೆ ಹಾಗೂ ಸಿಂಗಾಪುರವನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡು ಭಾರತ, ಇಂಡೋನೇಷಿಯಾ, ಏಷ್ಯಾ ಫೆಸಿಫಿಕ್ ಹಾಗೂ ಅಂತಾರಾಷ್ಟ್ರೀಯ ವಲಯಗಳಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸಂಜಯ್ ಅವರು ವಿಜ್ಞಾನದಲ್ಲಿ ಪದವಿ ಹಾಗೂ ಎಂಬಿಎನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.
ಅವರು ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಪಿಎಚ್‌ಡಿ ಪದವಿಯನ್ನು ಕೂಡ ಪಡೆದುಕೊಂಡಿದ್ದಾರೆ. ಈ ನಡುವೆ ಅವರು ಇಂಟರ್ ನ್ಯಾಷನಲ್‌ಬಿಸಿನೆಸ್ ಹಾಗೂ ಮಾನವ ಸಂಪನ್ಮೂಲ ವಿಷಯದಲ್ಲಿ ಡಿಪ್ಲೊಮಾವನ್ನು ಕೂಡ ಪೂರ್ಣಗೊಳಿಸಿದ್ದಾರೆ. ಅಸ್ಟ್ರಾಜೆನೆಕಾ ಫಾರ್ಮಾ ಇಂಡಿಯಾ ಲಿಮಿಟೆಡ್‌ಗೆ ಸೇರುವ ಮೊದಲು ಸಂಜೀವ್ ಅವರು ಸಿಪ್ಲಾ ಕಂಪನಿಯಲ್ಲಿ ಕೆಲಸ ಮಾಡಿದ್ದರು.


Click it and Unblock the Notifications