ಭಾರತದ ಸ್ಟಾರ್ ಜೋಡಿಗಳ ಪೈಕಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರು ಮುಂಚೂಣಿಯಲ್ಲಿದ್ದಾರೆ. ಈ ಜೋಡಿಯು ಸುಮಾರು ಆರು ವರ್ಷಗಳ ಹಿಂದೆ ಬಹಳ ಅದ್ಧೂರಿಯಾಗಿ ಮದುವೆಯಾಗಿದ್ದರು. ವಿರುಷ್ಕಾ ಎಂದು ಕರೆಯಲ್ಪಡುವ ಈ ಸೆಲಬ್ರಿಟಿ ಜೋಡಿಯು ಬಹಳ ರೊಮ್ಯಾಂಟಿಕ್ ಸ್ಥಳವಾದ ಇಟಲಿಯ ಟಸ್ಕಾನಿಯಲ್ಲಿ ಮದುವೆ ಸಮಾರಂಭವನ್ನು ನೆರವೇರಿಸಿದ್ದರು.
2017 ರ ಡಿಸೆಂಬರ್ 11ರಂದು ನಡೆದ ಈ ವಿವಾಹ ಸಮಾರಂಭಕ್ಕೂ ಮೊದಲು ವಿರಾಟ್ ಹಾಗೂ ಅನುಷ್ಕಾ ಹಲವು ವರ್ಷಗಳ ಕಾಲ ಡೇಟಿಂಗ್‌ನಲ್ಲಿದ್ದರು. ಈ ವಿವಾಹ ನಡೆದ ಸ್ಥಳವು ಸುಮಾರು 800 ವರ್ಷಗಳ ಐತಿಹಾಸಿ ಪರಂಪರೆಯನ್ನು ಹೊಂದಿರುವ ಹೆರಿಟೇಜ್ ಎಸ್ಟೇಟ್ ಬೊರ್ಗೊ ಫಿನೋಚಿಯೆಟೊ ಆಗಿತ್ತು.

ಈ ಜಾಗವು ಆರು ಎಕರೆ ಜಾಗವನ್ನು ಹೊಂದಿದ್ದು, ಐದು ಐಷಾರಾಮಿ ವಿಲ್ಲಾಗಳನ್ನು ಹೊಂದಿದೆ. ಅಲ್ಲಿ ಸುಮಾರು 44 ಮಂದಿ ಅತಿಥಿಗಳಿಗೆ ಸ್ಥಳಾವಕಾಶವನ್ನು ಪಡೆಯಬಹುದು. ಈ ಎಸ್ಟೇಟ್ ಯುರೋಪಿಯನ್ ಇತಿಹಾಸದಲ್ಲೇ ಅತ್ಯಂತ ಮಹತ್ವದ ಪಾರಂಪರಿಕ ತಾಣವಾಗಿದೆ.
ಈ ಗ್ರಾಮವು 1318ನೇ ಇಸವಿಯಿಂದಲೂ ಇಟಾಲಿಯನ್ ಭೂಪಟದಲ್ಲಿದೆ. 1900ರ ವೇಳೆಗೆ ಅದರ ಸೌಂದರ್ಯಕ್ಕೆ ದಕ್ಕೆ ಬಂದಿದ್ದು, ಆ ಗ್ರಾಮದ 21 ಕುಟುಂಬಗಳು ದನದ ಕೊಟ್ಟಿಗೆ ಹಾಗೂ ಟ್ರ್ಯಾಕ್ಟರ್ ಶೆಡ್ ಆಗಿ ಬಳಸಿಕೊಂಡಿದ್ದರು. ಬಳಿಕ ಅದನ್ನು ಅಮೆರಿಕಾದ ರಾಯಭಾರಿ ಹಾಗೂ ನ್ಯಾಯವಾದಿಯಾದ ಜಾನ್ ಆರ್ ಫಿಲಿಪ್ಸ್ ಅದನ್ನು ಖರೀದಿ ಮಾಡಿ ಈ ಹಿಂದೆ ಇದ್ದ ಐತಿಹಾಸಿಕ ಹಿನ್ನಲೆ ಹಾಗೂ ಮಹಿಮೆಯನ್ನು ಪುನರ್ ಸ್ಥಾಪಿಸುವಲ್ಲಿ ಯಶಸ್ವಿಯಾದರು.
ಫಿಲಿಪ್ಸ್ ಅವರು 2001ರಲ್ಲಿ ಈ ಜಾಗವನ್ನು ಖರೀದಿ ಮಾಡಿ ಸುಮಾರು 8 ವರ್ಷಗಳ ಕಾಲ ಅದರ ಪುನರ್ ನಿರ್ಮಾಣ ಕಾರ್ಯದ ಯೋಜನೆಯನ್ನು ಕೈಗೆತ್ತಿಕೊಂಡಿದ್ದರು. ಆ ಮೂಲಕ ಆ ಐತಿಹಾಸಿಕ ಸ್ಥಳಕ್ಕೆ ಮರುಜನ್ಮವನ್ನು ನೀಡಿದರು. ಅಷ್ಟೇಅಲ್ಲ, ಅಲ್ಲಿ ಅವರು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಪತ್ನಿ ಮೈಕೆಲ್ ಒಬಾಮಾ ಅವರಿಗೆ ಆತಿಥ್ಯವನ್ನು ನೀಡಿದ್ದರು.
ಫಿಲಿಪ್ಸ್ ಅವರು 2013 ರಿಂದ 2017 ರವರೆಗೆ ಇಟಲಿಯಲ್ಲಿ ಅಮೆರಿಕಾದ ರಾಯಭಾರಿಯಾಗಿದ್ದರು. ಈ ಎಸ್ಟೇಟ್ ಒಟ್ಟು 22 ಬೆಡ್‌ರೂಂ ಅನ್ನು ಹೊಂದಿದ್ದು, ಸಾಮಾನ್ಯ ಡೈನಿಂಗ್ ರೂಮ್, ಹೊರಾಂಗಣ ಟೆರೇಸ್ ಡೈನಿಂಗ್, ವಿಶಾಲವಾದ ಲಿವಿಂಗ್ ರೂಮ್, ಗ್ರಾಂಡ್ ಪಿಯಾನೋ, ಬಾರ್, ಲೈಬ್ರೇರಿ, ವೈನ್ ಟೇಸ್ಟಿಂಗ್ ರೂಮ್, 60 ಅಡಿ ಸ್ವಿಮ್ಮಿಂಗ್ ಪೂಲ್, ಸ್ಪಾ, ಟೆನ್ನೀಸ್ ಅಂಡ್ ಬಾಸ್ಕೆಟ್ ಬಾಲ್ ಕೋರ್ಟ್, 70 ಜನರ ಬಾಲ್‌ರೂಮ್ ಅನ್ನು ಹೊಂದಿದೆ.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ವಿವಾಹ ಸಮಾರಂಭವು ಸುಮಾರು ದಿನಗಳ ಕಾಲ ಈ ಐಷಾರಾಮಿ ಎಸ್ಟೇಟ್ ಬರ್ಗೊ ಫಿನೋಚಿಯೆಟೊದಲ್ಲಿ ನಡೆದಿತ್ತು. ಅವರ ಪ್ರತಿ ದಿನದ ರಾತ್ರಿ ವೆಚ್ಚವು ಸುಮಾರು 13.5 ಲಕ್ಷ ರೂಪಾಯಿ ಆಗಿತ್ತು ಎಂದು ವರದಿಯಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಈ ಎಸ್ಟೇಟ್‌ನಲ್ಲಿ ಒಂದು ವಾರ ತಂಗುವುದಕ್ಕೆ 55 ಲಕ್ಷ ರೂಪಾಯಿಯಿಂದ 1.26 ಕೋಟಿ ರೂಪಾಯಿವರೆಗೆ ವೆಚ್ಚವಾಗುತ್ತದೆ ಎಂದು ಹೇಳಲಾಗುತ್ತದೆ.


Click it and Unblock the Notifications