ಕಾರು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ?. ಯಾರಿಗಾದರೂ ತಮ್ಮದೇ ಆದ ಸ್ವಂತ ಕಾರೊಂದನ್ನು ಹೊಂದಿರುವುದು ಕನಸಾಗಿರುತ್ತದೆ. ಅದಕ್ಕಾಗಿ ಹಣ ಉಳಿತಾಯ ಮಾಡುವವರು, ಸಾಲ ಪಡೆಯುವವರು ಎಷ್ಟೋ ಮಂದಿ ಇದ್ದಾರೆ. ಆದರೆ ಇಲ್ಲೋರ್ವ ವ್ಯಕ್ತಿ 100 ಕೋಟಿ ರೂಪಾಯಿ ಮೌಲ್ಯದ ಕಾರುಗಳನ್ನು ಹೊಂದಿದ್ದಾನೆ.
ಹೌದು, ವಿಂಟೇಜ್ ರೋಲ್ಸ್ ರಾಯ್ಸ್, ಲಿಮೋಸಿನ್‌ಗಳು ಮತ್ತು ಇತರ ಕಾರುಗಳನ್ನು ಈ ವ್ಯಕ್ತಿಯೋರ್ವ ಹೊಂದಿದ್ದು, ಒಟ್ಟಾಗಿ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಕಾರುಗಳನ್ನು ಹೊಂದಿದ್ದಾರೆ. ಈ ಅತೀ ದೊಡ್ಡ ಕಾರು ಸಂಗ್ರಾಹಕರ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಇಷ್ಟೊಂದು ಕಾರುಗಳನ್ನು ಹೊಂದಿರುವ ಈ ವ್ಯಕ್ತಿ ಯಾರು?
ಬಿಲಿಯನೇರ್ ಯೋಹಾನ್ ಪೂನಾವಾಲಾ ಸುಮಾರು 100 ಕೋಟಿ ರೂಪಾಯಿಯಷ್ಟು ಮೌಲ್ಯದ ಕಾರುಗಳನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಹಾಗೆಯೇ ಕಾರು ಸಂಗ್ರಹ ವಿಚಾರದಲ್ಲಿಯೇ ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿರುವ ವ್ಯಕ್ತಿಯಾಗಿದ್ದಾರೆ.
ಯೋಹಾನ್ ಪೂನಾವಾಲಾ ಇತ್ತೀಚೆಗೆ ದೋಹಾದಲ್ಲಿ ನಡೆದ ಜಿನೀವಾ ಮೋಟಾರ್ ಶೋನಲ್ಲಿ 'ಕಲೆಕ್ಟರ್ ಆಫ್ ದಿ ಇಯರ್' ಎಂಬ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಹೆಸರೇ ಸೂಚಿಸುವಂತೆ, ಯೋಹಾನ್ ಪೂನಾವಾಲಾ ಅವರು ಪೂನಾವಾಲಾ ಕುಟುಂಬದ ಸದಸ್ಯರಾಗಿದ್ದಾರೆ.
ಪೂನಾವಾಲಾ ಕುಟುಂಬವು ಭಾರತದ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿದೆ. ಪೂನಾವಾಲಾ ಕುಟುಂಬವು ವಿಭಿನ್ನವಾದ ರುಚಿ ಮತ್ತು ಉತ್ತಮ ಸಂಗ್ರಹಣೆಗೆ ಹೆಸರುವಾಸಿಯಾಗಿದೆ. ಆಧಾರ್ ಪೂನವಾಲಾ ಅವರ ಹಿರಿಯ ಸೋದರಸಂಬಂಧಿ ಯೋಹಾನ್ ಪೂನಾವಾಲಾ ಆಗಿದ್ದಾರೆ.
ಯೋಹಾನ್ ಪೂನಾವಾಲಾ ಯಾರು?
ಯೋಹಾನ್ ಪೂನಾವಾಲಾ ತಮ್ಮ ವಿದೇಶಿ ಖರೀದಿಗಳಿಂದ ಹಲವಾರು ಬಾರಿ ಸುದ್ದಿಯಾಗಿದ್ದಾರೆ. ಯೋಹಾನ್ ಪೂನಾವಾಲಾ ಅವರು ಜವರಾಯ್ ಪೂನಾವಾಲಾರ ಮಗ. 1966 ರಲ್ಲಿ ಅವರ ಸಹೋದರ ಸೈರಸ್ ಪೂನಾವಾಲಾ ಜೊತೆ ಬಯೋಫಾರ್ಮಾಸ್ಯುಟಿಕಲ್ಸ್ ಸಂಸ್ಥೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಸಹ-ಸ್ಥಾಪಿಸಿದರು.
ಈ ಬಿಲಿಯನೇರ್ ಖಾಸಗಿ ಹೆಲಿಕಾಪ್ಟರ್‌ಗಳನ್ನು ಸಹ ಹೊಂದಿದ್ದಾರೆ. ಯೋಹಾನ್ ಪೂನಾವಾಲಾ ತನ್ನ ಕಾರುಗಳಲ್ಲಿ YZP' ಎಂದು ಬರೆದುಕೊಂಡಿದ್ದಾರೆ. 1931 ರ ಚೇವಿಯೊಂದಿಗೆ ಯೋಹಾನ್ ಪೂನಾವಾಲಾರ ಕಾರುಗಳ ಗೀಳು ಆರಂಭವಾಗಿದೆ.
ಕುಟುಂಬವು ಹೊಸ ಎತ್ತರಕ್ಕೆ ಏರಿದಂತೆ ಯೋಹಾನ್ ಅವರ ಗ್ಯಾರೇಜ್ ಕೂಡ ದೊಡ್ಡದಾಗಿದೆ ಮತ್ತು ಉತ್ತಮವಾಗಿದೆ. ಬಿಲಿಯನೇರ್ ಈಗ ವಿವಿಧ ರೀತಿಯ ಕಾರುಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಕೆಲವು ಭಾರತದಂತಹ ದೇಶದಲ್ಲಿ ಸಾಕಷ್ಟು ಅಪರೂಪವಾಗಿದೆ.
ಯಾವೆಲ್ಲ ಕಾರುಗಳಿದೆ?
ಯೋಹಾನ್ ಪೂನಾವಾಲಾ ಒಡೆತನದ ವಿಲಕ್ಷಣ ಕಾರುಗಳಲ್ಲಿ ಬೆಂಟ್ಲಿ ಬೆಂಟೈಗಾ, ಲ್ಯಾಂಡ್ ರೋವರ್ ಡಿಫೆಂಡರ್, ಫೆರಾರಿ 488 ಪಿಸ್ತಾ ಸ್ಪೈಡರ್, ರೋಲ್ಸ್ ರಾಯ್ಸ್ ಫ್ಯಾಂಟಮ್, ಲಂಬೋರ್ಘಿನಿ ಗಲ್ಲಾರ್ಡೊ ಸೇರಿವೆ.
ಯೋಹಾನ್ ಪೂನಾವಾಲಾ ಅವರು ಪೂನಾವಾಲಾ ಇಂಜಿನಿಯರಿಂಗ್ ಗ್ರೂಪ್ ಮತ್ತು ಎಲ್-ಒ-ಮ್ಯಾಟಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದಾರೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೇಟ್‌ನಲ್ಲಿ ಷೇರುದಾರರೂ ಆಗಿದ್ದಾರೆ.
ಕುದುರೆ ರೇಸಿಂಗ್‌ನಲ್ಲಿ ಹೆಸರುವಾಸಿ!
ಇದಲ್ಲದೆ, ಅವರು ಪೂನಾವಾಲಾ ಸ್ಟಡ್ ಫಾರ್ಮ್ಸ್ ಮತ್ತು ಪೂನಾವಾಲಾ ರೇಸಿಂಗ್ ಆಂಡ್ ಬ್ರೀಡಿಂಗ್‌ನ ನಿರ್ದೇಶಕರೂ ಆಗಿದ್ದಾರೆ. ಕುದುರೆ ಓಟದ ಸಮುದಾಯದಲ್ಲಿ ಯೋಹಾನ್ ಪ್ರಸಿದ್ಧ ಹೆಸರಾಗಿದೆ. ಪೂನಾವಾಲಾ ಸ್ಟಡ್ ಫಾರ್ಮ್ಸ್ ಅನೇಕ ಚಾಂಪಿಯನ್ ಕುದುರೆಗಳನ್ನು ರಫ್ತು ಮಾಡಿದೆ.
ಪೂನಾವಾಲಾ ಸ್ಟಡ್ ಫಾರ್ಮ್ಸ್ ಯುಎಸ್‌ಎ, ಹಾಂಗ್ ಕಾಂಗ್, ಸಿಂಗಾಪುರ, ದುಬೈ ಮತ್ತು ಮಲೇಷ್ಯಾದಂತಹ ಅನೇಕ ದೇಶಗಳಲ್ಲಿ ಗೆದ್ದಿರುವ ಸಂಸ್ಥೆಯಾಗಿದೆ. ಹಾಗೆಯೇ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಪ್ರಸ್ತುತ, ಪೂನಾವಾಲಾ ಕುಟುಂಬದ ನಿವ್ವಳ ಮೌಲ್ಯವು 27 ಬಿಲಿಯನ್ ಡಾಲರ್ ಆಗಿದೆ.


Click it and Unblock the Notifications