2000 ರ ದಶಕದ ಆರಂಭದಲ್ಲಿ ಭಾರತದಲ್ಲಿ ವಿಮಾನ ಪ್ರಯಾಣವು ಇಂದಿನಷ್ಟು ಸುಲಭ ಮತ್ತು ಪ್ರಜಾಸತ್ತಾತ್ಮಕವಾಗಿರಲಿಲ್ಲ. ಇದು ಉಳ್ಳವರ ಪ್ರಯಾಣಕ್ಕೆ ಮಾತ್ರ ಅನುಕೂಲಕರವಾಗಿತ್ತು. ಆದರೆ ಈ ಪ್ರಯಾಣದ ಪ್ರಕ್ರಿಯೆಗಳು ಸರಳಗೊಂಡು ಜನಸಾಮಾನ್ಯರಿಗೂ ಪ್ರಯಾಣ ಹಾದಿ ಸುಲಭವಾಗಿದೆ.
ನಾವು ಕೊಂಚ ಹಿಂದಕ್ಕೆ ನೋಡುವುದಾದರೆ , ಅಂದರೆ 2008ರಲ್ಲಿ ನಿಶಾಂತ್ ಪಿಟ್ಟಿ ತನ್ನ ಸಹೋದರ ಪ್ರಶಾಂತ್ ಅವರ ಜೊತೆಗೂಡಿ EaseMyTrip.com ಮೂಲಕ ಭಾರತೀಯರಿಗೆ ಪ್ರಯಾಣವನ್ನು ಸರಳಗೊಳಿಸುವ ತಮ್ಮ ಪಯಣವನ್ನು ಆರಂಭಿಸಿದರು. ನಿಶಾಂತ್ ಅವರ ನಾಯಕತ್ವದಲ್ಲಿ ಹುಟ್ಟಿಕೊಂಡ ಈ ಪ್ಲಾಟ್‌ಫಾರ್ಮ್ ಅನ್ನು ಪ್ರಯಾಣಿಕರು ವೇಗವಾಗಿ ಮೆಚ್ಚಿಕೊಂಡರು. ಇದು ತನ್ನ ವೇದಿಕೆಯಲ್ಲಿ ವಿಮಾನಗಳು, ಹೋಟೆಲ್‌ಗಳು ಮತ್ತು ಹಾಲೀಡೆ ಟ್ರಿಪ್ ಗಳನ್ನು ಆಯೋಜಿಸುತ್ತದೆ.

ನವದೆಹಲಿಯ ವ್ಯಾಪಾರ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ನಿಶಾಂತ್ ಅವರ ಉದ್ಯಮಶೀಲತೆಯ ಮನೋಭಾವವನ್ನು ಅವರ ಯಶಸ್ವಿ ಉದ್ಯಮಿಯಾಗಿದ್ದ ಅವರ ತಂದೆ ಪೋತ್ಸಾಹಿಸಿದರು. ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಅವರ ಅಧ್ಯಯನದ ಸಮಯದಲ್ಲಿ ಅವಕಾಶಗಳನ್ನು ಗುರುತಿಸಿ ಅದಕ್ಕೆ ತಕ್ಕುದಾದ ಅಗತ್ಯಗಳನ್ನು ಹುಟ್ಟುಹಾಕುವ ಅಲೋಚನೆಗಳು ಆಗಲೇ ಅವರಿಗೆ ಹುಟ್ಟಿಕೊಂಡಿತು.
ಈ ಪ್ರಯಾಣದ ಜೊತೆಜೊತೆಗೆ, ನಿಶಾಂತ್ ಅವರು ಬಾಲಿವುಡ್‌ನಲ್ಲೂ ತಮ್ಮ ಪ್ರಯತ್ನ ಮಾಡಿದರು. ಅವರು "ಫನ್ನೆ ಖಾನ್" ಮತ್ತು "ಬಟ್ಟಿ ಗುಲ್ ಮೀಟರ್ ಚಾಲು" ನಂತಹ ಚಲನಚಿತ್ರ ನಿರ್ಮಾಣಗಳಲ್ಲಿ ಹೂಡಿಕೆ ಮಾಡಿದರು. 2019 ರಲ್ಲಿ, ಅವರು "ನಿಶಾಂತ್ ಪಿಟ್ಟಿ ಪಿಕ್ಚರ್ಸ್" ಅನ್ನು ಸ್ಥಾಪಿಸಿ ಆ ಮೂಲಕ "ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ" ಮತ್ತು "ತೈಶ್" ನಂತಹ ಯಶಸ್ಸಿನೊಂದಿಗೆ ಚಲನಚಿತ್ರ ನಿರ್ಮಾಣದಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಿದರು.
ನಿಶಾಂತ್ ಅವರ ಸಾಧನೆಗಳು, 2018 ರಲ್ಲಿ "Young Entrepreneur of the Year" ಮತ್ತು 2019 ರಲ್ಲಿ "Travel Entrepreneur of the Year" ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟವು. ಇದು ತಮ್ಮ ತತ್ವಗಳಿಗೆ ಬದ್ಧರಾಗುವ ಮೂಲಕ ಟ್ರಾವೆಲ್ ಮತ್ತು ಮನರಂಜನೆ ಎರಡರಲ್ಲೂ ಪರಿಣಾಮಕಾರಿ ದಾಪುಗಾಲುಗಳನ್ನು ಮಾಡುವ ದಾರ್ಶನಿಕ ವಾಣಿಜ್ಯೋದ್ಯಮಿಯ ಪಯಣವನ್ನು ತೋರಿಸುತ್ತದೆ.
ಭಾರತ - ಮಾಲ್ಡೀವ್ಸ್ ಬಿಕ್ಕಟ್ಟಿನ ನಡುವೆ ಇತ್ತೀಚೆಗೆ, ನಿಶಾಂತ್ ಪಿಟ್ಟಿ ಅವರು ಮಾಲ್ಡೀವ್ಸ್‌ಗೆ EaseMyTrip ಫ್ಲೈಟ್ ಬುಕಿಂಗ್ ಅನ್ನು ಕ್ಯಾನ್ಸಲ್ ಮಾಡುವ ಮೂಲಕ ತಮ್ಮ ನಿರ್ಧಾರವನ್ನು ಸಮರ್ಥಿಸುವ ವಿಚಾರವಾಗಿ ಸುದ್ದಿಯಾಗಿದ್ದರು. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ವಿಕಸನಗೊಳ್ಳುತ್ತಿರುವ ಭೌಗೋಳಿಕ ರಾಜಕೀಯ ಭೂದೃಶ್ಯಗಳಿಗೆ ಹೊಂದಿಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುವ ಮೂಲಕ ಭಾರತ-ಮಾಲ್ಡೀವ್ಸ್ ಬಿಕ್ಕಟ್ಟಿನ ಮಧ್ಯೆ ಕಂಪನಿಯ ನಿಲುವನ್ನು ಪಿಟ್ಟಿ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications