ಭಾರತೀಯ ಕ್ರಿಕೆಟ್ ಪ್ರೇಕ್ಷಕರ ವಲಯದಲ್ಲಿ ಅದರಲ್ಲಿಯೂ ಐಪಿಎಲ್ ಸಂದರ್ಭದಲ್ಲಿ ಡ್ರೀಮ್11 ಎಂಬ ಕಂಪನಿ ಹೆಸರು ಕೇಳದವರು ತೀರಾ ಕಡಿಮೆ. ಏಕೆಂದರೆ, ಡ್ರೀಮ್11 ಭಾರತದೆಲ್ಲೆಡೆ ಅಷ್ಟೊಂದು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯವು ಸುಮಾರು 55,000 ಕೋಟಿ ರೂಪಾಯಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಹಲವಾರು ಆನ್‌ಲೈನ್ ಗೇಮಿಂಗ್ ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ಅನ್ನು ನೀಡಿದೆ.
ಆ ಪೈಕಿ ಸುಮಾರು 25,000 ಕೋಟಿ ರೂಪಾಯಿಗಳ ಜಿಎಸ್‌ಟಿ ನೋಟಿಸ್ ಅನ್ನು ಆನ್‌ಲೈನ್ ಗೇಮಿಂಗ್‌ನಲ್ಲಿ ಮುಂಚೂಣಿಯಲ್ಲಿರುವ ಡ್ರೀಮ್11 ಸಹ ಸಂಸ್ಥಾಪಕ, ಮುಂಬೈ ಮೂಲದ ಉದ್ಯಮಿ ಹರ್ಷ್ ಜೈನ್ ಹಾಗೂ ಕಾಲೇಜು ಸ್ನೇಹಿತ ಭವತಿ ಸೇತ್ ಅವರಿಗೆ ನೀಡಲಾಗಿದೆ. ಈ ಕಂಪನಿಯಲ್ಲಿ ಹರ್ಷ್ ಅವರು ಸಿಇಒ ಆಗಿದ್ದು, ಭವತಿ ಅವರು ಸಿಒಒ ಆಗಿದ್ದಾರೆ.

ಡ್ರೀಮ್11ಗೆ ನೀಡಿರುವ ನೋಟಿಸ್ ಅನ್ನು ಭಾರತೀಯ ತೆರಿಗೆ ಇತಿಹಾಸದಲ್ಲೇ ನೀಡಲಾಗಿರುವ ಅತಿದೊಡ್ಡ ಇನ್‌ಡೈರೆಕ್ಟ್ ಟ್ಯಾಕ್ಸ್ ನೋಟಿಸ್ ಎಂಬುದಾಗಿ ಹೇಳಲಾಗುತ್ತಿದೆ. ಇನ್ನೊಂದೆಡೆ, ಪ್ಲೇ ಗೇಮ್ಸ್ 24/7 (20,000 ಕೋಟಿ ರೂಪಾಯಿ) ಹಾಗೂ ಹೆಡ್ ಡಿಜಿಟಲ್ ವರ್ಕ್ಸ್ (5000ಕೋಟಿ ರೂಪಾಯಿ) ನೋಟಿಸ್ ನೀಡಲಾಗಿದೆ.
ಈ ಹಿನ್ನಲೆಯಲ್ಲಿ ಡ್ರೀಮ್11 ಮುಂಬೈ ಹೈಕೋರ್ಟ್ ದೊಡ್ಡ ಮೊತ್ತದ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಪೂರ್ವ ಶೋಕಾಸ್ ನೋಟಿಸ್ ಕೊಟ್ಟಿರುವುದನ್ನು ಪ್ರಶ್ನಿಸಿ ಮುಂಬೈ ಹೈಕೋರ್ಟ್ ಮೊರೆ ಹೋಗಿದೆ ಎಂದು ಉದ್ಯಮ ವಲಯದ ಮೂಲವನ್ನು ಉಲ್ಲೇಖಿಸಿ ಇಟಿ ವರದಿ ಮಾಡಿದೆ.
ಡ್ರೀಮ್11 ಸಹ ಸಂಸ್ಥಾಪಕರು, ಸಿಇಒ ಹರ್ಷ್ ಜೈನ್ ಯಾರು?
ಹರ್ಷ್ ಜೈನ್ ಅವರು ಭಾರತೀಯ ಕ್ರಿಕೆಟ್ ಫ್ಯಾಂಟಸಿ ಗೇಮಿಂಗ್ ಉದ್ಯಮದ ಪ್ರವರ್ತಕರಲ್ಲಿ ಪ್ರಮುಖರು. ಐಪಿಎಲ್ ಕ್ರಿಕೆಟ್‌ನಿಂದಾಗಿ ಅವರ ಡ್ರೀಮ್11 ಕಂಪನಿಯು ಬಹಳ ಜನಪ್ರಿಯತೆಯನ್ನು ಗಳಿಸಿದೆ. ಡ್ರೀಮ್11 ಕಂಪನಿಯು ಪ್ರಸ್ತುತ 8 ಬಿಲಿಯನ್ ಡಾಲರ್ ಅಂದರೆ 66,500 ಕೋಟಿ ರೂ. ಮೌಲ್ಯವನ್ನು ಹೊಂದಿದೆ.
ಈ ಗೇಮಿಂಗ್ ಫ್ಲಾಟ್‌ಫಾರಂ 150 ಮಿಲಿಯನ್ ಯೂಸರ್‌ಗಳನ್ನು ಹೊಂದಿದೆ. ಅಪ್ಪಟ ಕ್ರಿಕೆಟ್ ಫಾನ್ ಆಗಿರುವ ಜೈನ್ ಅವರು ನೀಡಿದ್ದ ಐಡಿಯಾವನ್ನು ಎರಡು ವರ್ಷದಲ್ಲಿ ಸುಮಾರು 150 ವೆಂಚರ್ ಕ್ಯಾಪಿಟಲಿಸ್ಟ್‌ಗಳು ತಿರಸ್ಕರಿಸಿದ್ದವು. ಏಕೆಂದರೆ ಅವರ ಪರಿಕಲ್ಪನೆಯನ್ನು ಯಾರು ಬೆಂಬಲಿಸಿರಲಿಲ್ಲ.
ಜೈನ್ ಅವರು ಡ್ರೀಮ್11ರ ಸಿಇಒ(ಕಲ್ಚರಲ್ ಎನ್‌ಫೋರ್ಸ್‌ಮೆಂಟ್ ಆಫೀಸರ್) ಆಗಿದ್ದಾರೆ. ಅವರು ವಿವಾಹಿತರಾಗಿದ್ದು, 2021ರಲ್ಲಿ ದಕ್ಷಿಣ ಮುಂಬೈನ ಪೆದ್ದಾರ್ ರಸ್ತೆಯಲ್ಲಿ 72 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಡ್ಯುಪ್ಲೆಕ್ಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಜೈನ್ ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಬ್ಯಾಚುಲರ್ ಹಾಗೂ ಯುಎಸ್‌ನ ಕೊಲಂಬಿಯಾ ವಿಶ್ವವಿದ್ಯಾಲಯದ ಕೊಲಂಬಿಯಾ ಬಿಸಿನೆಸ್ ಸ್ಕೂಲ್‌ನಿಂದ ಎಂಬಿಎ ಪದವಿಯನ್ನು ಕೂಡ ಪಡೆದುಕೊಂಡಿದ್ದಾರೆ.


Click it and Unblock the Notifications