48 ವರ್ಷದ ಕಾರ್ತಿಕ್ ಶರ್ಮಾ ಅವರು ಸಾಧನೆಯ ಹಾದಿಯಲ್ಲಿ ಭಾರತದಲ್ಲಿ ತಮ್ಮನ್ನು ಸ್ವಯಂ ಗುರುತಿಸಿಕೊಂಡಿರುವ ಯುವ ಉದ್ಯಮಿಯಾಗಿದ್ದಾರೆ. ವಿಶೇಷವೆಂದರೆ ಶರ್ಮಾ ಅವರು ತಮ್ಮಲ್ಲಿರುವ ಅಪಾರ ಸಂಪತ್ತು ಹಾಗೂ ಸಾಧನೆಗಳ ನಡುವೆಯೂ ಪ್ರಚಾರಗಳಿಂದ ಬಹಳ ದೂರ ಉಳಿದುಕೊಂಡಿದ್ದಾರೆ. ಐಐಟಿ ಪದವಿಯೊಂದಿಗೆ ಭಾರತವನ್ನು ತೊರೆದ ಬಳಿಕ ಯುಎಸ್‌ನಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆದಿದ್ದಾರೆ.
ತಮ್ಮ ಕಂಪನಿಯನ್ನು ಪ್ರಾರಂಭಿಸಿದ ಸುಮಾರು ಒಂದೂವರೆ ದಶಕದ ನಂತರ 2021ರಲ್ಲಿ 2 ಬಿಲಿಯನ್ ಡಾಲರ್ ಗಳಿಸಿದ್ದಾರೆ. ಅವರು ವಿಶ್ವದ ಪ್ರಮುಖ ಹೆಡ್ಜ್ ಫಂಡ್ ಮ್ಯಾನೇಜರ್‌ಗಳಲ್ಲಿ ಒಬ್ಬರಾಗಿ ಹೆಸರು ಗಳಿಸಿದ್ದಾರೆ. 2023ರಲ್ಲಿ ಸುಮಾರು 24,000 ಕೋಟಿ ರೂಪಾಯಿ (2.9 ಬಿಲಿಯನ್ ಡಾಲರ್) ನಿವ್ವಳ ಮೌಲ್ಯವನ್ನು ಸಂಪಾದಿಸಿದ್ದಾರೆ.

ಕಾರ್ತಿಕ್ ಶರ್ಮಾ ಅವರು ತಮ್ಮ ಶಾಲಾ ಶಿಕ್ಷಣವನ್ನು ಭಾರತದಲ್ಲಿ ಮಾಡಿದ್ದು, ನಂತರದಲ್ಲಿ ಮದ್ರಾಸ್‌ನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಿಂದ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ನಂತರ ಅವರು ಅಮೆರಿಕಾಕ್ಕೆ ತೆರಳಿದ್ದರು. ಅಲ್ಲಿ ಶರ್ಮಾ ಅವರು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು.
ಕಾರ್ತಿಕ್ ಶರ್ಮಾ ಅವರು 1998ರಲ್ಲಿ ಜಾಗತಿಕ ಸಲಹಾ ಎಂಎನ್‌ಸಿ ಮೆಕಿನ್ಸೆ & ಕಂಪನಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಮುಂದೆ ಕಾರ್ತಿಕ್ ಶರ್ಮಾ ಅವರು ಟೈಗರ್ ಗ್ಲೋಬಲ್ ಮ್ಯಾನೇಜ್‌ಮೆಂಟ್ ಸೇರಿಕೊಂಡರು. ಅಲ್ಲಿ ಕಾರ್ತಿಕ್ ಶರ್ಮಾ ಅವರು ವ್ಯವಸ್ಥಾಪಕ ನಿರ್ದೇಶಕರಾಗಲು ಕಾರ್ಪೊರೇಟ್ ವಲಯದಲ್ಲಿ ಗುರುತಿಸಿಕೊಂಡರು.
2006ರಲ್ಲಿ, ಕಾರ್ತಿಕ್ ಶರ್ಮಾ ಎಸ್‌ಆರ್‌ಎಸ್ ಹೂಡಿಕೆಯನ್ನು ಸ್ಥಾಪಿಸಿದ್ದರು. ಅದು ಪ್ರಸ್ತುತ ಸುಮಾರು 10 ಬಿಲಿಯನ್ ಡಾಲರ್ (82,600 ಕೋಟಿಗೂ ಹೆಚ್ಚು) ಬಂಡವಾಳವನ್ನು ನಿರ್ವಹಿಸುತ್ತಿದೆ. 2010ರಲ್ಲಿ, ಕಾರ್ತಿಕ್ ಶರ್ಮಾ ಅವರ ಸಂಸ್ಥೆಯು ಕಾರ್ ಬಾಡಿಗೆ ಕಂಪನಿಯಾದ Avisನ ಷೇರುಗಳನ್ನು ಖರೀದಿಸಲು ನಿರ್ಣಾಯಕ ಬೆಟ್ ಮಾಡಿತ್ತು.
11 ವರ್ಷಗಳಲ್ಲಿ ಶರ್ಮಾ ಅವರ ಆಸ್ತಿ ಮೌಲ್ಯವು ಶೇಕಡ 456 ರಷ್ಟು ಬೆಳೆದಿದೆ. ಕಾರ್ತಿಕ್ ಶರ್ಮಾ 2022ರಲ್ಲಿ ಬಿಲಿಯನೇರ್ ಆಗಿ ಗುರುತಿಸಿಕೊಂಡರು. ಒಂದು ಹಂತದಲ್ಲಿ ಅವರನ್ನು ಅತ್ಯಂತ ಪ್ರತಿಭಾವಂತ ಪಾಲುದಾರ ಎಂದು ಕರೆಯಲಾಯಿತು.


Click it and Unblock the Notifications