ಮಧ್ಯಪ್ರದೇಶ ಮೂಲದ ದಿಲೀಪ್ ಬಿಲ್ಡ್‌ಕಾನ್ ತನ್ನ ಮೊದಲ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಈ ದೈತ್ಯ ನಿರ್ಮಾಣ ಸಂಸ್ಥೆಯ ಮೂರು ತಿಂಗಳ ಒಟ್ಟು ಸೇಲ್ಸ್ 2200 ಕೋಟಿ ರೂಪಾಯಿ ಆಗಿದೆ. ಇದರ ನಿವ್ವಳ ಲಾಭವು 12.31 ಕೋಟಿ ರೂಪಾಯಿ ಆಗಿದೆ. ಮಧ್ಯಪ್ರದೇಶದ ಸರ್ಕಾರದಿಂದ 700 ಕೋಟಿ ರೂಪಾಯಿಗಳ ಮೂಲಸೌಕರ್ಯ ಯೋಜನೆಯನ್ನು ಪಡೆದುಕೊಂಡ ಬಳಿಕ ಆರ್ಥಿಕ ಫಲಿತಾಂಶವನ್ನು ಘೋಷಣೆ ಮಾಡಿದೆ.
ಈ ಕಂಪನಿಯನ್ನು ದಿಲೀಪ್ ಸೂರ್ಯವಂಶಿ ಅವರು ಸ್ಥಾಪಿಸಿದ್ದಾರೆ. ಅವರು ಈ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದ್ದಾರೆ. ದಿಲೀಪ್ ಸೂರ್ಯವಂಶಿ ಅವರು ದಿಲೀಪ್ ಬಿಲ್ಡ್‌ಕಾನ್ ಲಿಮಿಟೆಡ್‌ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಆಗಿದ್ದಾರೆ. ಅವರು ಒಟ್ಟು 44 ವರ್ಷಗಳ ಅನುಭವವನ್ನು ಹೊಂದಿದ್ದಾರೆ.

ದಿಲೀಪ್ ಸೂರ್ಯವಂಶಿ ಅವರು ಜಬಲ್‌ಪುರ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ದಿಲೀಪ್ ಸೂರ್ಯವಂಶಿ ಅವರು 1987ರಲ್ಲಿ ಈ ಕಂಪನಿಯನ್ನು ಸ್ಥಾಪಿಸಿದ್ದಾರೆ. 2006ರಲ್ಲಿ ಇದು ಇನ್‌ಕಾರ್ಪೊರೇಟ್ ಆಗಿದ್ದು, ಈ ಕಂಪನಿಯ ಮೂಲ ಹೆಸರು ದಿಲೀಪ್ ಬಿಲ್ಡರ್ಸ್.
ಈ ಕಂಪನಿಯು ವಸತಿ, ವಾಣಿಜ್ಯ ಹಾಗೂ ಮೂಲಸೌಕರ್ಯ ಪ್ರಾಜೆಕ್ಟ್‌ಗಳನ್ನು ನಿರ್ಮಿಸುತ್ತಿದ್ದಾರೆ. ಜತೆಗೆ ಮುಂಬೈ ಸ್ಟಾಕ್ ಎಕ್ಸ್‌ಚೇಂಜ್ ಹಾಗೂ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿಯೂ ಲಿಸ್ಟ್ ಆಗಿದೆ.
ಯುವಕರಾಗಿರುವಾಗ, ಸೂರ್ಯವಂಶಿ ಅವರು ಬೇರೆ ಕಡೆ ಕೆಲಸ ಮಾಡುವುದಕ್ಕೆ ಇಷ್ಟಪಡುತ್ತಿರಲಿಲ್ಲ. ಅವರ ತಂದೆಯು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.
ಅವರು ತಮ್ಮ ಓದನ್ನು ಮುಗಿಸಿದ ಬಳಿಕ 1979 ರಲ್ಲಿ ಸಹೋದರ ಅವರ ಸೋಯಾಬೀನ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದರು. ಬರಗಾಲದ ಕಾರಣ ಕಂಪನಿಯನ್ನು ಮುಚ್ಚಬೇಕಾಯಿತು. ಬಳಿಕ ಅವರು ತಮ್ಮ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದ್ದರು. 1995ರಲ್ಲಿ ಅವರು 21 ವರ್ಷದ ಎಂಜಿನಿಯರ್ ದೇವೇಂದ್ರ ಜೈನ್ ಅವರನ್ನು ನೇಮಕ ಮಾಡಿಕೊಂಡಿದ್ದರು.
ನಂತರ ದಿಲೀಪ್ ಸೂರ್ಯವಂಶಿ ಅವರು ಅವರ ಪ್ರಾಮುಖ್ಯತೆಯನ್ನು ಅರಿತುಕೊಂಡರು. ಆ ಮೂಲಕ ವ್ಯವಹಾರದಲ್ಲಿ 31 ಪ್ರತಿಶತ ಪಾಲನ್ನು ಹೊಂದಿರುವ ಪಾಲುದಾರನನ್ನಾಗಿ ಮಾಡಿದರು ಎಂದು ಫೋರ್ಬ್ಸ್ ವರದಿ ಮಾಡಿದೆ.
ಜೈನ್ ತಮ್ಮ ಇಂಜಿನಿಯರಿಂಗ್ ಅನ್ನು ಉಜ್ಜಯಿನಿಯ ವಿಕ್ರಮ್ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ. ಸೂರ್ಯವಂಶಿ ಮತ್ತು ಜೈನ್ ಇಬ್ಬರೂ ಕೋಟ್ಯಾಧಿಪತಿಗಳು. ಹುರುನ್ ಪಟ್ಟಿ 2021ರ ಪ್ರಕಾರ, ಜೈನ್ ಅವರ ನಿವ್ವಳ ಮೌಲ್ಯ 2300 ಕೋಟಿ ರೂಪಾಯಿ ಆಗಿದ್ದು, ಸೂರ್ಯವಂಶಿ ಅವರ ಆಸ್ತಿ 4100 ಕೋಟಿ ರೂಪಾಯಿ ಆಗಿದೆ.


Click it and Unblock the Notifications