ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿರುವ ಮಿಸ್ಬಾ ಅಶ್ರಫ್ ಅವರು ಬೆಳೆದಿದ್ದು ಬಿಹಾರದಲ್ಲಿ. ಮಿಸ್ಬಾ ಅವರ ತಂದೆ ಶಿಕ್ಷಕರಾಗಿದ್ದರೆ, ತಾಯಿ ಗೃಹಿಣಿ. ಅಶ್ರಫ್ ಉದ್ಯಮಿಯಾಗಬೇಕೆಂಬ ಕನಸಿನೊಂದಿಗೆ ಮೊದಲ ವರ್ಷದಲ್ಲೇ ಕಾಲೇಜು ಶಿಕ್ಷಣವನ್ನು ತೊರೆದಿದ್ದರು. ಆ ಮೂಲಕ ಸಿಬೋಲಾ ಎಂಬ ಕಂಪನಿ ಪ್ರಾರಂಭಿಸಿದ್ದರು. ಆದರೆ ಕೆಲವೇ ತಿಂಗಳಲ್ಲಿ ಆ ಕಂಪನಿಯು ಬಾಗಿಲು ಹಾಕಿಕೊಂಡಿತ್ತು.
ನಾಲ್ಕು ವರ್ಷಗಳ ಬಳಿಕ ಮಿಸ್ಬಾ ಅವರು ಮಾರ್ಸ್‌ಪ್ಲೇ ಎಂಬ ಮತ್ತೊಂದು ಸ್ಟಾರ್ಟಪ್ ಅನ್ನು ಪ್ರಾರಂಭಿಸಿದರು. ಅದು ಆಕ್ರಮಣಕಾರಿ ಬೆಳವಣಿಗೆ ಸಾಧಿಸಿದ ಹಿನ್ನೆಲೆಯಲ್ಲಿ ಅದನ್ನು ನಂತರದಲ್ಲಿ ಬೇರೊಂದು ಕಂಪನಿ ಸ್ವಾಧೀನಪಡಿಸಿಕೊಂಡಿತ್ತು. 2021ರ ಮೇ ನಲ್ಲಿ ಮಿಸ್ಬಾ ಅವರು ಜಾರ್ ಹೆಸರಿನ ತಮ್ಮ ಮೂರನೇ ಕಂಪನಿಯನ್ನು ಪ್ರಾರಂಭಿಸಿದರು.

ಈ ಸ್ಟಾರ್ಟ್‌ಅಪ್ ಕಂಪನಿಯ ಮುಖ್ಯ ಐಡಿಯಾ, ಹಣ ಉಳಿತಾಯ ಮಾಡುವುದು ಮತ್ತು ಹೂಡಿಕೆ ಮಾಡುವುದು. 18 ತಿಂಗಳ ಬಳಿಕ ಕಂಪನಿಯ ಯೂಸರ್‌ಗಳ ಸಂಖ್ಯೆಯು 11 ಮಿಲಿಯನ್ ದಾಟಿದೆ. ಈ ಫಿನ್‌ಟೆಕ್ ಫರ್ಮ್ 58 ಮಿಲಿಯನ್ ಡಾಲರ್ ಫಂಡ್ ರೈಸ್ ಅನ್ನು ಮಾಡಿದೆ. ಈ ನಡುವೆ ಮಿಸ್ಬಾ ಅವರು ಕಾಲೇಜು ಅನ್ನು ಅರ್ಧಕ್ಕೆ ಮೊಟಕುಗೊಳಿಸಿ Pulse.qa(ವೈಸಿ), Pursuit, ಟಾಯೈಮೇಲ್(ವೈಸಿ), Spangle ಮುಂತಾದ ಕಂಪನಿಗಳಲ್ಲಿ ಕೆಲಸ ಮಾಡಿದ್ದರು.
ಕೇವಲ ಒಂದು ವರ್ಷದ ನಂತರ, ಅಶ್ರಫ್ ಅವರ ಜಾರ್ ಕಂಪನಿಯು 22.6 ಮಿಲಿಯನ್ ಡಾಲರ್‌ಗಳನ್ನು 300 ಮಿಲಿಯನ್ ಡಾಲರ್ (ರೂ. 2463 ಕೋಟಿ) ಮೌಲ್ಯದೊಂದಿಗೆ ಸಂಗ್ರಹಿಸಿದೆ. ಸ್ಟಾರ್ಟ್‌ಅಪ್‌ಗಳಿಗೆ ಫಂಡಿಂಗ್ ಕಡಿಮೆಯಾಗುತ್ತಿದ್ದ ಅವಧಿಯಲ್ಲಿ ಬಹು ಮಿಲಿಯನ್ ಡಾಲರ್ ಡೀಲ್ ಅನ್ನು ಯಶಸ್ವಿಯಾಗಿ ಮಾಡಿದ ಕೆಲವೇ ಕಂಪನಿಗಳಲ್ಲಿ ಇದು ಕೂಡ ಒಂದಾಗಿದೆ.
ನಿಶ್ಚಯ್ ಎಜಿ ಈ ಕಂಪನಿಯ ಸಹ ಸಂಸ್ಥಾಪಕರು. ಅವರು ಕಂಪನಿಯಲ್ಲಿ ಚೀಫ್ ಪ್ರಾಡೆಕ್ಟ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಅವರ ಮೂರನೇ ಕಂಪನಿಯಾಗಿದೆ. ಮಿಸ್ಬಾ ಅಶ್ರಫ್ ಅವರು ಫೈನಾನ್ಸ್ ಅಂಡ್ ವೆಂಚರ್ ಕ್ಯಾಪಿಟಲ್‌ನಲ್ಲಿ (2023) ಫೋರ್ಬ್ಸ್‌ನಿಂದ 30 ವರ್ಷದೊಳಗಿನವರು ಎಂದು ಗುರುತಿಸಲ್ಪಟ್ಟಿದ್ದಾರೆ.
ಕಡಿಮೆ ವರ್ಷದಲ್ಲಿಯೇ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು!
ಮಿಸ್ಬಾ ಅಶ್ರಫ್‌ನಂತೆಯೇ ಇನ್ನೂ ಹಲವು ಉದ್ಯಮಿಗಳು ಕೆಲವೇ ವರ್ಷಗಳಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. 2 ವರ್ಷದಲ್ಲಿ 83,000 ಕೋಟಿ ರೂ. ಮೌಲ್ಯದ ಕಂಪನಿ ಕಟ್ಟಿ ಬೆಳೆಸಿದ ಖ್ಯಾತಿಯು 35 ಹರೆಯದ ನಿಕಿಲ್ ವಿಶ್ವನಾಥನ್‌ಗೆ ಸಲ್ಲುತ್ತದೆ. ಭಾರತೀಯ ಮೂಲದ ಅಮೆರಿಕನ್ ಎಂಟ್ರೆಪ್ರೆನಿಯರ್ ಆಗಿರುವ ನಿಕಿಲ್ ವಿಶ್ವನಾಥನ್ ವಿಶ್ವದ ಪ್ರಮುಖ ವೆಬ್3 ಡೆವಲಪರ್ ಪ್ಲಾಟ್‌ಫಾರ್ಮ್ ಆಲ್ಕೆಮಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ನಿಕಿಲ್ ವಿಶ್ವನಾಥನ್ ಅವರು ಜೋಸೆಫ್ ಲಾವ್ ಜೊತೆ ಸೇರಿ ಆಲ್ಕೆಮಿಯನ್ನು ಹುಟ್ಟುಹಾಕಿದ್ದಾರೆ. 2020 ರಲ್ಲಿ ಇವರಿಬ್ಬರು ಪಂಥವೊಂದನ್ನು ಕಟ್ಟಿ ಅದರಲ್ಲಿ ಯಶಸ್ವಿಯಾಗಲು ನಿರ್ಧರಿಸಿದರು.
ಕೇವಲ 6 ತಿಂಗಳಲ್ಲಿ 9,900 ಕೋಟಿ ರೂಪಾಯಿ ಮೌಲ್ಯದ ಕಂಪನಿ ಕಟ್ಟಿದ ಖ್ಯಾತಿಯು ಅನಂತ್ ನಾರಾಯಣರಿಗೆ ಸಲ್ಲುತ್ತದೆ. ಅನಂತ್ ನಾರಾಯಣ ಈಗಾಗಲೇ ಪ್ರಮುಖ ಇ-ಕಾಮರ್ಸ್ ಬ್ರಾಂಡ್ ಮಿಂತ್ರಾ ಸಿಇಒ ಆಗಿ ಕಾರ್ಪೊರೇಟ್ ವಲಯದಲ್ಲಿ ಮೆಚ್ಚುಗೆ ಗಳಿಸಿದ್ದಾರೆ. ಆದರೆ, ನಂತರದಲ್ಲಿ ಅವರು ತಮ್ಮದೇ ಉದ್ಯಮವನ್ನು ಪ್ರಾರಂಭಿಸಲು ಮುಂದಾದರು.
ನಡುವೆ ಅನಂತ್ ಅವರು ಪ್ರಾರಂಭಿಸಿದ ಕಂಪೆನಿಯು ಬಿಲಿಯನ್ ಡಾಲರ್ ಆಸ್ತಿ ಮೌಲ್ಯವನ್ನು ಗಳಿಸಿದ್ದು, ಬಹಳ ವೇಗವಾಗಿ ಯೂನಿಕಾರ್ನ್ ಟ್ಯಾಗ್ ಅನ್ನು ಭಾರತದಲ್ಲಿ ಪಡೆದುಕೊಂಡಿದೆ. ಅನಂತ್ ನಾರಾಯಣ ಅವರು ಮೆನ್ಸಾ ಬ್ರಾಂಡ್‌ನ ಸಂಸ್ಥಾಪಕರಾಗಿದ್ದಾರೆ. ಇದು ಭಾರತದ ಮೊದಲ ಇ-ಕಾಮರ್ಸ್ ರೋಲ್-ಅಪ್ ಕಂಪನಿಯಾಗಿದ್ದು, 1.2 ಬಿಲಿಯನ್ ಡಾಲರ್ (9,900 ಕೋಟಿ) ಆಸ್ತಿ ಮೌಲ್ಯವನ್ನು ಹೊಂದಿದೆ.


Click it and Unblock the Notifications