ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯೊಬ್ಬರು ತನ್ನ ಐಷಾರಾಮಿ ಜೀವನವನ್ನು ಪರಿತ್ಯಾಗ ಮಾಡುವ ಮೂಲಕ ಸನ್ಯಾಸಿಯಾಗಿ ಬದಲಾಗಿದ್ದಾರೆ. ವೆನ್ ಅಜಾನ್ ಸಿರಿಪಾನ್ಯೋ ಒಬ್ಬ ಬಿಲಿಯನೇರ್‌ನ ಮಗ. ಅವರ ತಂದೆ ಆನಂದ ಕೃಷ್ಣನ್ ಅವರು 40,000 ಕೋಟಿ ರೂಪಾಯಿ (5 ಬಿಲಿಯನ್ ಡಾಲರ್) ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ. ಅವರು ಎಕೆ ಎಂದು ಪರಿಚಿತರಾಗಿದ್ದು, ಭಾರತೀಯ ಮೂಲದ ಟೆಲಿಕಾಂ ಕಂಪನಿಯಾದ ಏರ್‌ಸೆಲ್‌ನ ಮಾಲೀಕರಾಗಿದ್ದರು. ಎಂಎಸ್ ಧೋನಿ ಮುನ್ನಡೆಸುತ್ತಿರುವ ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಾಯೋಜಕತ್ವವನ್ನು ವಹಿಸಿದ್ದರು.
ತಮಿಳುನಾಡು ಮೂಲದ ಟೆಲಿಕಾಂ ಉದ್ಯಮಿಗೆ ಜನಿಸಿದ ಸಿರಿಪಾನ್ಯೊ ಅವರು ಬಹು ಮಿಲಿಯನ್ ಡಾಲರ್ ಟೆಲಿಕಾಂ ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದರು. ಇದು ಟೆಲಿಕಾಂ, ಮಾಧ್ಯಮ, ತೈಲ ಮತ್ತು ಅನಿಲ, ರಿಯಲ್ ಎಸ್ಟೇಟ್ ಹಾಗೂ ಸೆಟಲೈಟ್ ವ್ಯಾಪಾರ ವಹಿವಾಟುಗಳನ್ನು ಹೊಂದಿತ್ತು. ಒಟ್ಟಾರೆ ಕೃಷ್ಣನ್ ಅವರು 9 ಕಂಪನಿಗಳಲ್ಲಿ ಪಾಲುದಾರರಾಗಿದ್ದಾರೆ. ಈ ರೀತಿಯ ಉದ್ಯಮದಲ್ಲಿನ ಯಶಸ್ಸು ಅವರನ್ನು ಮಲೇಷ್ಯಾದಲ್ಲಿ ಒಬ್ಬ ಶ್ರೀಮಂತ ಉದ್ಯಮಿಯನ್ನಾಗಿ ಬೆಳೆಸಿದೆ.

ಆನಂದ ಕೃಷ್ಣನ್ ಅವರು ಬೌದ್ಧ ಧರ್ಮದ ಅನುಯಾಯಿ ಆಗಿದ್ದು, ಬಹುದೊಡ್ಡ ಜನೋಪಕಾರಿಯಾಗಿ ಶಿಕ್ಷಣ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ದೇಣಿಗೆ ನೀಡುತ್ತಿದ್ದಾರೆ. ಅವರ ಮಗ ಕೇವಲ 18ನೇ ವಯಸ್ಸಿನಲ್ಲಿ ಬೌದ್ಧ ಸನ್ಯಾಸಿಯಾದರು ಎಂದು ವರದಿಯಾಗಿದೆ. ಸಿರಿಪಾನ್ಯೊ ಅವರು ಸನ್ಯಾಸಿಯಾಗುವ ವಿಚಾರವನ್ನು ಹೆಚ್ಚು ಸಾರ್ವಜನಿಕವಾಗಿಸಲು ಬಯಸಿರಲಿಲ್ಲ. ಅವರು ಏಕಾಂತದಲ್ಲಿದ್ದಾಗ ಮನಶಾಂತಿಗಾಗಿ ತಪಸ್ವಿ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದರು. ನಿಧಾನಕ್ಕೆ ಅವರನ್ನು ಆಧ್ಯಾತ್ಮದ ಕಡೆಗೆ ಸೆಳೆದಿದೆ. ತಮ್ಮ ತಂದೆಯ ಬಹುಕೋಟಿ ಸಾಮ್ರಾಜ್ಯವನ್ನು ಮುನ್ನಡೆಸುವ ಬದಲು ಸರಳ ಜೀವನವನ್ನು ನಡೆಸಲು ಬಯಸಿದರು.
ಸಿರಿಪಾನ್ಯೊ ಅವರು ಪಿತ್ರಾರ್ಜಿತವಾಗಿ ಹೊಂದಿದ್ದ ಎಲ್ಲ ಸಂಪತ್ತನ್ನು ತ್ಯಜಿಸಿ ಸನ್ಯಾಸಿಯಾಗಿ ಕಾಡಿನಲ್ಲಿ ವಾಸಿಸಲು ನಿರ್ಧರಿಸಿ ಎರಡು ದಶಕಗಳು ಕಳೆದಿವೆ. ಅವರು ಥಾಯ್ಲೆಂಡ್‌ನ ಡಿಟಾವೊ ದಮ್ ಮಠದ ಮಠಾಧೀಶರಾಗಿದ್ದಾರೆ. ಸನ್ಯಾಸಿಯು ತಮ್ಮ ತಾಯಿಯ ಕಡೆಯಿಂದ ಥಾಯ್ ರಾಜಮನೆತನದ ವಂಶಸ್ಥನೆಂದು ಹೇಳಲಾಗಿದೆ. ಸಿರಿಪಾನ್ಯೊ ಅವರ ಹಿಂದಿನ ಜೀವನದ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಆದರೆ ಅವರು ಯುಕೆಯಲ್ಲಿ ತನ್ನ ಎರಡು ಸಹೋದರಿಯರೊಂದಿಗೆ ಬೆಳೆದಿದ್ದಾರೆ. ಅವರು ಎಂಟು ಭಾಷೆಗಳನ್ನು ಮಾತನಾಡಬಲ್ಲರು ಎಂದು ವರದಿಯಾಗಿದೆ.
29,680 ಕೋಟಿ ರೂಪಾಯಿ ಆಸ್ತಿ ಒಡೆಯ ರಾಮ್‌ದೇವ್ ಸ್ನೇಹಿತ
ಬಾಬಾ ರಾಮ್‌ದೇವ್ ಅವರ ಪತಂಜಲಿ ಫುಡ್ ಮುಂದಿನ ಐದು ವರ್ಷಗಳಲ್ಲಿ 50,000 ಕೋಟಿ ರೂಪಾಯಿಗಳ ವಹಿವಾಟು ನಡೆಸುವ ಗುರಿಯನ್ನು ತಲುಪಲಿದೆ. ಜತೆಗೆ ಕಂಪನಿಯು 5,000 ಕೋಟಿ ರೂಪಾಯಿಗಳ ಲಾಭ ಗಳಿಸುವ ಗುರಿಯನ್ನು ಹೊಂದಿದೆ. ಕಂಪನಿಯು ಅದಕ್ಕೆ ಈಗಾಗಲೇ ಆಕ್ರಮಣಕಾರಿಯಾದ ಎಫ್‌ಎಂಸಿಜಿ ಕಾರ್ಯತಂತ್ರವನ್ನು ರೂಪಿಸಿಕೊಂಡಿದೆ.
ಈ ಕಂಪನಿಯ ಹೆಸರು ರುಚಿ ಸೋಯಾ. 2019ರಲ್ಲಿ ಇದನ್ನು ಮರುನಾಮಕರಣ ಮಾಡಲಾಗಿದೆ. ಎಫ್‌ಎಂಸಿಜಿ ವಹಿವಾಟನ್ನು ವಿಸ್ತರಿಸುವ ಮೂಲಕ ತಮ್ಮ ಕನಸು ನನಸುಗೊಳಿಸುವತ್ತ ಯೋಜನೆ ರೂಪಿಸುತ್ತಿರುವುದಾಗಿ ಪತಂಜಲಿ ಗ್ರೂಪ್ ಮುಖ್ಯಸ್ಥ ಬಾಬಾ ರಾಮ್‌ದೇವ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಕಂಪನಿಯು ಬಿಳಿ ಎಮ್ಮೆಯ ತುಪ್ಪ, ಪ್ರೀಮಿಯಂ ಬಿಸ್ಕೆಟ್, ಕುಕ್ಕೀಸ್, ಡ್ರೈ ಫ್ರೂಟ್ ಮುಂತಾದ ಹೊಸ ಉತ್ಪನ್ನವನ್ನು ಪರಿಚಯಿಸುವುದಾಗಿ ಅವರು ಹೇಳಿದ್ದಾರೆ. ಈ ಕಂಪನಿಯು ಕಳೆದ ಹಣಕಾಸು ವರ್ಷದಲ್ಲಿ 886.44 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ. ಈ ಕಂಪನಿಯನ್ನು ಯೋಗ ಗುರು ಹಾಗೂ ಆಚಾರ್ಯ ಬಾಲಕೃಷ್ಣ ಅವರು ಸ್ಥಾಪಿಸಿದ್ದಾರೆ.
ಪತ್ರಿಕೆಯೊಂದರ ವರದಿ ಪ್ರಕಾರ, ಬಾಲಕೃಷ್ಣ ಅವರು ಕಂಪನಿಯಲ್ಲಿ ಶೇ.94ರಷ್ಟು ಷೇರು ಹೊಂದಿದ್ದು, ಯಾವುದೇ ಸಂಬಳವನ್ನು ತೆಗೆದುಕೊಳ್ಳುತ್ತಿಲ್ಲ. ಅವರು ಪ್ರತಿದಿನ ಸುಮಾರು 15 ತಾಸು ಕೆಲಸ ಮಾಡುತ್ತಿದ್ದಾರೆ. ಫೋರ್ಬ್ಸ್ ವರದಿಗಳ ಪ್ರಕಾರ, ರಾಮ್‌ದೇವ್ ಅವರು 29,680 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications