ಒಬ್ಬ ವ್ಯಕ್ತಿಯು ತನ್ನ ಗುರಿಯನ್ನು ತಲುಪಲು ಉತ್ಸಾಹ ಮತ್ತು ದೃಢಸಂಕಲ್ಪವನ್ನು ಹೊಂದಿದ್ದರೆ, ಆತ ಎಲ್ಲಿಂದ ಪ್ರಾರಂಭಿಸಿದರೂ ಯಾವುದೇ ಅಡೆತಡೆಗಳು ಆತನನ್ನು ತಡೆಯಲು ಸಾಧ್ಯವಿಲ್ಲ. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಗುರಿಯತ್ತ ಸಾಗಿಸಿದಾಗ ಕನಸುಗಳನ್ನು ನನಸಾಗಿಸಿಕೊಳ್ಳಬಹುದು.
ಎಂಪಿ ಅಹಮ್ಮದ್ ಇಂದು ಯಶಸ್ವಿ ಉದ್ಯಮಿಯಾಗಿದ್ದು, 20 ನೇ ವಯಸ್ಸಿನಲ್ಲಿ ಅವರು ಸ್ಪೈಸ್ (ಮಸಾಲೆ) ವ್ಯಾಪಾರ ಕಂಪನಿಯನ್ನು ಸ್ಥಾಪಿಸುವ ಮೂಲಕ ಉದ್ಯಮಶೀಲ ಪ್ರಯಾಣ ಆರಂಭಿಸಿದರು. ವ್ಯಾಪಾರ ಮತ್ತು ಭೂಮಾಲೀಕ ಕುಟುಂಬದಲ್ಲಿ ಎಂಪಿ ಅಹಮ್ಮದ್ ಹುಟ್ಟಿದ್ದು ಅವರೀಗ ಮಲಬಾರ್ ಗ್ರೂಪ್ ಆಫ್ ಕಂಪನಿಗಳ ಒಡೆಯರಾಗಿದ್ದಾರೆ. ಅವರ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಎಂ.ಪಿ. ಅಹಮ್ಮದ್ ಯಾರು?
ಎಂ.ಪಿ. ಅಹಮ್ಮದ್ ಖ್ಯಾತ ಭಾರತೀಯ ಉದ್ಯಮಿಯಾಗಿದ್ದು, ಕೇರಳದ ಕೋಯಿಕ್ಕೋಡ್ ನಲ್ಲಿ 1957 ರಲ್ಲಿ ಜನಿಸಿದ ಇವರು ಇಂದು ಮಲಬಾರ್ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷರಾಗಿದ್ದಾರೆ. ಇವರು ವಿಶ್ವದ ಪ್ರಮುಖ ರಿಟೇಲ್ ಆಭರಣ ಕಂಪನಿಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್‌ನ ಸ್ಥಾಪಕರಾಗಿದ್ದಾರೆ.
ಎಂ.ಪಿ. ಅಹಮ್ಮದ್ ಅವರು ಮಮ್ಮದ್ ಕುಟ್ಟಿ ಹಾಜಿ ಮತ್ತು ಫಾತಿಮಾ ದಂಪತಿಯ ಪುತ್ರರಾಗಿ ಜನಿಸಿದರು. ಅಹಮ್ಮದ್ ಅವರಿಗೆ ಕೇವಲ 17 ನೇ ವಯಸ್ಸಿದ್ದಾಗ ತಮ್ಮ ಮೊದಲ ಕೃಷಿ-ಉತ್ಪನ್ನ ಕಂಪನಿಯನ್ನು ಸ್ಥಾಪಿಸಿದರು. 1981 ರಲ್ಲಿ, ಅಂದರೆ ಅವರಿನ್ನು 24 ವರ್ಷ ವಯಸ್ಸಿನವರಾಗಿದ್ದಾಗ, ಅವರು ಮಸಾಲೆ ಮತ್ತು ಕೊಬ್ಬರಿ ವ್ಯಾಪಾರವನ್ನು ಪ್ರಾರಂಭಿಸಿದರು.
ಎಂ.ಪಿ. ಅಹಮ್ಮದ್ ಅವರು ಕೆ.ಪಿ ಸುಬೈದಾಳನ್ನು ವಿವಾಹವಾಗಿದ್ದು ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಮಗ ಶಾಮ್ಲಾಲ್ ಅಹಮ್ಮದ್ ಕಂಪನಿಯ ಇಂಟರ್‌ನ್ಯಾಷನಲ್ ಆಪರೇಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಹಮ್ಮದ್ ಅವರು ಕೋಝಿಕ್ಕೋಡ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಅಭ್ಯಾಸಿಸಿದ ನಂತರ, ಕಾಮರ್ಸ್ ವಿಷಯದಲಿ ಪದವಿ ಪಡೆಯಲು ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು ತಮ್ಮ ಶಿಕ್ಷಣವನ್ನು ಮುಂದುವರೆಸಿದರು.
ಈ ನಡುವೆ ಕೇರಳದ ಕೋಝಿಕ್ಕೋಡ್ (ಆಗಿನ ಕ್ಯಾಲಿಕಟ್) ವ್ಯಾಪಾರಿಗಳೊಂದಿಗೆ, ಅವರು ಏಲಕ್ಕಿ, ಮೆಣಸು ಮತ್ತು ತೆಂಗಿನಕಾಯಿಯಲ್ಲಿ ವಹಿವಾಟು ನಡೆಸುತ್ತಿದ್ದರು. ಆದರೆ ಈ ವ್ಯವಹಾರ ಯಶಸ್ವಿಯಾಗುವುದು ಕಷ್ಟ ಎಂಬುವುದನ್ನು ಕೆಲವೇ ದಿನಗಳಲ್ಲಿ ಅರಿತುಕೊಂಡರು.
ಹೀಗಾಗಿ ಯಶಸ್ವಿ ಉದ್ಯಮ ಪ್ರಾರಂಭಿಸಲು ಅಹಮ್ಮದ್ ಅವರು ಮಾರುಕಟ್ಟೆ ಕುರಿತು ಸಂಶೋಧನೆಯನ್ನು ನಡೆಸಿದರು. ಈ ವೇಳೆ ಆಭರಣ ಕ್ಷೇತ್ರ ಒಂದು ದೊಡ್ಡ ಅಸಂಘಟಿತ ಉದ್ಯಮವಾಗಿದೆ ಎಂದು ಅರ್ಥಮಾಡಿಕೊಂಡರು. ಚಿನ್ನದೆಡೆಗಿನ ಜನರ ಆಸಕ್ತಿಯನ್ನು ಈ ವೇಳೆ ಕಂಡುಕೊಂಡರು. ಸ್ಥಳೀಯ ಮಲಬಾರ್ ಅನ್ನು ಉತ್ತೇಜಿಸಲು ಹಾಗೂ ಆಭರಣದ ಕ್ಷೇತ್ರದಲ್ಲಿ ಉದ್ಯಮವನ್ನು ಪ್ರಾರಂಭಿಸಲು ಆತ್ಮವಿಶ್ವಾಸದ ನಿರ್ಧಾರವನ್ನು ಮಾಡಿದರು.
ಇಂದು ಇವರು ಆರಂಭಿಸಿದ ಆಭರಣ ಮಳಿಗೆಯು ಭಾರತ, ಮಲೇಷ್ಯಾ, ಸಿಂಗಾಪುರ, ಯುಎಸ್ ಮತ್ತು ಜಿಸಿಸಿ (ಯುಎಇ, ಕುವೈತ್, ಬಹ್ರೇನ್, ಓಮನ್, ಕತಾರ್ ಮತ್ತು ಸೌದಿ ಅರೇಬಿಯಾ) ಸೇರಿದಂತೆ 10 ದೇಶಗಳಲ್ಲಿ 276 ಮಳಿಗೆಗಳನ್ನು ಹೊಂದಿದೆ.
ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ 2022 ರ ಆರ್ಥಿಕ ವರ್ಷದಲ್ಲಿ ತನ್ನ ಮಾರಾಟವು ಶೇಕಡ 35 ರಷ್ಟು ಏರಿಕೆಯಾಗಿದ್ದು 30,000 ಕೋಟಿ ರೂಪಾಯಿಗೆ ತಲುಪಿದೆ ಮತ್ತು 2023 ರಲ್ಲಿ45,000 ಕೋಟಿ ರೂಪಾಯಿಗಳ ಗುರಿ ಹೊಂದಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.


Click it and Unblock the Notifications