ಭಾರತ ಮಾತ್ರವಲ್ಲದೇ ಏಷ್ಯಾದಲ್ಲೇ ಶ್ರೀಮಂತ ಉದ್ಯಮಿಯಾಗಿರುವ ಮುಖೇಶ್ ಅಂಬಾನಿ ಅವರ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆಯಾದರೂ, ರಿಲಯನ್ಸ್ ಕುಟುಂಬದ ಕೆಲವು ಸದಸ್ಯರ ಬಗ್ಗೆ ನಿಮಗೆ ತಿಳಿದಿಲ್ಲದಿರಬಹುದು. ನೀನಾ ಕೊಠಾರಿ ಅಂಬಾನಿ ಫ್ಯಾಮಿಲಿಯ ಕುಡಿಯಾಗಿದ್ದರೂ ಅವರ ಬಗ್ಗೆ ಹೆಚ್ಚಿನವರಿಗೆ ಮಾಹಿತಿಯಿಲ್ಲ.
ಕೊಠಾರಿ ಶುಗರ್ಸ್ ಅಂಡ್ ಕೆಮಿಕಲ್ಸ್ ಲಿಮಿಟೆಡ್ ನ ಅಧ್ಯಕ್ಷೆಯಾಗಿ ಕೋಟ್ಯಾಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿರುವ ನೀನಾ ಕೊಠಾರಿ ಕಾರ್ಪೊರೇಟ್ ಜಗತ್ತಿನಲ್ಲಿ ಪ್ರಸಿದ್ದರಾಗಿದ್ದಾರೆ. ಅವರ ಸಂಸ್ಥೆಯು ದೇಶದಲ್ಲಿ ಮಾತ್ರವಲ್ಲದೇ ಅಂತರಾಷ್ಟ್ರೀಯ ವ್ಯವಹಾರಗಳನ್ನು ನಡೆಸುತ್ತಿದೆ.

ಮುಖೇಶ್ ಅಂಬಾನಿ ಅವರ ಸಹೋದರಿಯಾಗಿರುವ ನೀನಾ ಕೊಠಾರಿ ಕಾರ್ಪೊರೇಟ್ ಜಗತ್ತಿನಲ್ಲಿ ಖ್ಯಾತಿ ಗಳಿಸಿದ್ದರೂ ಮಾಧ್ಯಮಗಳಿಂದ ದೂರವಿರುವ ಕಾರಣ ಜನ ಸಾಮಾನ್ಯರಿಗೆ ಅವರು ಅಷ್ಟೊಂದು ಚಿರಪರಿಚಿರರಾಗಿಲ್ಲ. ಹುಟ್ಟಿನಿಂದ ಅಂಬಾನಿ ಕುಟುಂಬದ ಸದಸ್ಯರಾಗಿರುವ ನೀನಾ ಕೊಠಾರಿ ಧೀರೂ ಭಾಯಿ ಮತ್ತು ಕೋಕಿಲಾ ಬೆನ್ ಅಂಬಾನಿ ಅವರ ಪುತ್ರಿಯಾಗಿದ್ದಾರೆ.
ಮುಕೇಶ್ ಸಹೋದರಿ ನೀನಾ ಕೊಥಾರಿ ಬಗ್ಗೆ ಅಧಿಕ ಮಾಹಿತಿ
ನೀನಾ ಅವರು 2003ರಲ್ಲಿ ಉದ್ಯಮ ಕ್ಷೇತ್ರದ ಪ್ರಯಾಣ ಆರಂಭಿಸಿದ್ದು, ಈ ವೇಳೆ ಅವರು ಜಾವಗ್ರೀನ್ ಕಾಫಿ ಮತ್ತು ಫುಡ್ ಫ್ರ್ಯಾಂಚೈಸ್ ಸ್ಥಾಪಿಸಿದರು. ನೀನಾ ಕೊಠಾರಿ ಉದ್ಯಮಿ ಭದ್ರಶ್ಯಾಮ್ ಕೊಠಾರಿ 1986ರಲ್ಲಿಅವರನ್ನು ವಿವಾಹವಾದರು. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಅರ್ಜುನ್ ಕೊಠಾರಿ ಮತ್ತು ಮಗಳು ನಯನತಾರಾ ಕೊಠಾರಿ ಇಬ್ಬರು ವಿವಾಹಿತರಾಗಿದ್ದಾರೆ.
ಭದ್ರಶ್ಯಾಮ್ ಕೊಠಾರಿ ಅಲ್ಪಕಾಲ ಕ್ಯಾನ್ಸರ್ ವಿರುದ್ದ ಹೋರಾಡಿ 2015 ರಲ್ಲಿ ನಿಧನರಾದರು. ಹೀಗಾಗಿ ಕೊಠಾರಿ ಶುಗರ್ಸ್ ಅಂಡ್ ಕೆಮಿಕಲ್ಸ್ ಲಿಮಿಟೆಡ್ ಅಧ್ಯಕ್ಷರಾಗಿ 2015ರ ಏಪ್ರಿಲ್ 8ರಂದು ಅಧ್ಯಕ್ಷರಾಗಿ ನೇಮಕಗೊಂಡರು. ಕಾರ್ಪೊರೇಟ್ ಪ್ರಪಂಚದ ಎಲ್ಲಾ ಸವಾಲುಗಳನ್ನು ಎದುರಿಸಿ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದರು. ಜೊತೆಗೆ ಕಂಪನಿಯನ್ನು ಉತ್ತಮವಾಗಿ ಮುನ್ನಡೆಸಿದ್ದು ಮಾತ್ರವಲ್ಲದೇ ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.
ನೀನಾ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಹೆಚ್ ಸಿ ಕೊಠಾರಿ ಗ್ರೂಪ್ ನ್ನು ಇತರ ಕೈಗಾರಿಕೆಗಳತ್ತ ವಿಸ್ತರಿಸಿದರು. ಕೊಠಾರಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಮತ್ತು ಕೊಠಾರಿ ಸೇಫ್ ಡೆಪಾಸಿಟ್ಸ್ ಲಿಮಿಟೆಡ್ ಇವೆರಡು ಹೆಚ್ಚುವರಿ ಕೊಠಾರಿ ಗ್ರೂಪ್ ಕಂಪನಿಗಳಾಗಿವೆ. ಕಾರ್ಪೊರೇಟ್ ಷೇರುಗಳ ಪ್ರಕಾರ, ಅವರು ಪಬ್ಲಿಕಲಿ ಎರಡು ಷೇರುಗಳನ್ನು ಹೊಂದಿದ್ದಾರೆ ಒಟ್ಟು 52.4 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಕಂಪನಿಯು 3.33 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
ಮುಕೇಶ್ ಅಂಬಾನಿ ವಿವರ
ಮುಖೇಶ್ ಧೀರೂಭಾಯಿ ಅಂಬಾನಿ ಒಬ್ಬ ಭಾರತೀಯ ಬಿಲಿಯನೇರ್ ಉದ್ಯಮಿಯಾಗಿದ್ದು ಏಷ್ಯಾದಲ್ಲೇ ಅತೀ ಶ್ರೀಮಂತ ಉದ್ಯಮಿಯಾಗಿದ್ದಾರೆ. ಜನನ 19 ಏಪ್ರಿಲ್ 1957ರಲ್ಲಿ ಮುಕೇಶ್ ಅಂಬಾನಿ ಜನಿಸಿದ್ದಾರೆ. ಮುಕೇಶ್ ಅಂಬಾನಿ ಪ್ರಸ್ತುತ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ನಾವು ಮಾರುಕಟ್ಟೆ ಮೌಲ್ಯದ ಲೆಕ್ಕಾಚಾರದಲ್ಲಿ ನೋಡಿದಾಗ ಭಾರತದ ಅತ್ಯಂತ ಮೌಲ್ಯಯುತ ಕಂಪನಿಯಾಗಿದೆ .
ಮೇ 2023ರ ಪ್ರಕಾರ ಮುಕೇಶ್ ಅಂಬಾನಿ ನಿವ್ವಳ ಆದಾಯವು 87.2 ಬಿಲಿಯನ್ ಡಾಲರ್ ಆಗಿದೆ. ಮುಕೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ 13 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 2019 ರಲ್ಲಿ ಟೈಮ್ ಮ್ಯಾಗಜೀನ್‌ನಿಂದ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಕಂಡಿದ್ದಾರೆ.
1981 ರಲ್ಲಿ ಮುಕೇಶ್ ಅಂಬಾನಿ ತನ್ನ ಧೀರೂಭಾಯಿ ಅಂಬಾನಿಯ ಕುಟುಂಬ ವ್ಯವಹಾರಕ್ಕೆ ಸಹಾಯ ಮಾಡಲು ಆರಂಭಿಸಿದರು. ಅದಾದ ಬಳಿಕ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅನ್ನು ಬೇರೆ ಬೇರೆ ಕ್ಷೇತ್ರಗಳಿಗೆ ವಿಸ್ತಾರ ಮಾಡಿದ್ದಾರೆ. ಪೆಟ್ರೋಕೆಮಿಕಲ್‌ನ ವಲಯಕ್ಕೂ ರಿಲಯನ್ಸ್ ಪ್ರವೇಶಿಸಿದೆ. ರಿಟೇಲ್, ದೂರಸಂಪರ್ಕ ಉದ್ಯಮಗಳಲ್ಲಿಯೂ ಸಂಸ್ಥೆ ಪ್ರವೇಶಿಸಿದೆ.


Click it and Unblock the Notifications