ಏಷ್ಯಾದ ಹಾಗೂ ಭಾರತದ ಶ್ರೀಮಂತ ವ್ಯಕ್ತಿಯಾಗಿರುವ ಉದ್ಯಮಿ ಮುಕೇಶ್ ಅಂಬಾನಿ ಅವರು 8,29,514 ಕೋಟಿ ರೂಪಾಯಿಗಿಂತ ಹೆಚ್ಚು ನಿವ್ವಳ ಸಂಪತ್ತನ್ನು ಹೊಂದಿರುವವರು. ಅವರು ಮತ್ತು ಅವರ ಇಡೀ ಕುಟುಂಬವು ತಮ್ಮ ಜೀವನಶೈಲಿ, ವ್ಯಾಪಾರ ವ್ಯವಹಾರಗಳು ಮತ್ತು ಪರೋಪಕಾರ ವಿಚಾರದಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
ಮತ್ತೊಂದೆಡೆ, ಮುಕೇಶ್ ಅಂಬಾನಿ ಅವರ ಸಹೋದರಿ ದೀಪ್ತಿ ಸಲ್ಗಾಂವ್ಕರ್ ಅವರ ಕುಟುಂಬವು ಇದಕ್ಕೆ ವಿರೋಧವಾಗಿ ಲೈಮ್ ಲೈಟ್‌ನಿಂದ ಬಹಳಷ್ಟು ದೂರವಿರಲು ಬಯಸುತ್ತಾರೆ. ದೀಪ್ತಿ ಸಲಗಾಂವ್ಕರ್ ಅವರ ಮಗಳು ಇಶೆತಾ ಸಲ್ಗಾಂವ್ಕರ್ ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಇದಕ್ಕಾಗಿ ಇಶೆತಾ ಅವರ ಚಿಕ್ಕಮ್ಮ ಟೀನಾ ಅಂಬಾನಿ ಇನ್ ಸ್ಟಾಗ್ರಾಮ್ ಪ್ರೀತಿಪೂರ್ವಕ ಒಂದಷ್ಟು ಸಾಲುಗಳನ್ನು ಬರೆದುಕೊಂಡಿದ್ದರು. ಹೀಗಾಗಿ ನೆಟ್ಟಿಗರು ಭಾರತದ ಶ್ರೀಮಂತ ವ್ಯಕ್ತಿಯ ಸೊಸೆಯ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲ ವ್ಯಕ್ತಪಡಿಸಿದ್ದರು. ಹಾಗಿದ್ರೆ ಇಶೆತಾ ಅವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.. ಮುಂದೆ ಓದಿ...
ಇಶೆತಾ ಸಲಗಾಂವ್ಕರ್ ಯಾರು?
ಇಶೆತಾ ಸಲಗಾಂವ್ಕರ್ ಅವರು ದೀಪ್ತಿ ಸಲಗಾಂವ್ಕರ್ ಮತ್ತು ದತ್ತರಾಜ್ ಸಲಗಾಂವ್ಕರ್ ಅವರ ಪುತ್ರಿ. ದೀಪ್ತಿ ಅವರು ಓರ್ವ ಉದ್ಯಮಿಯಾಗಿದ್ದು, ಅವರು ವಿವಿಧ ವ್ಯಾಪಾರ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂಬಾನಿ ಕುಟುಂಬದಲ್ಲಿರುವ ತನ್ನ ಸಂಬಂಧಿಕರಿಗಿಂತ ಭಿನ್ನವಾಗಿ, ಇಶೆತಾ ತನ್ನ ಗಮನಾರ್ಹ ಸಾಧನೆಗಳ ಹೊರತಾಗಿಯೂ ಅವರು ಲೋ ಪ್ರೊಫೈಲ್ ಅನ್ನು ಇಟ್ಟುಕೊಳ್ಳಲು ಬಯಸುತ್ತಾರೆ.
ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಪದವೀಧರರಾಗಿರುವ ಇವರು ಪ್ರಸ್ತುತ ಸಲಗಾಂವ್ಕರ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ (Salgaocar Corporation Pvt. Ltd. ) ನಲ್ಲಿ ಕಾರ್ಪೊರೇಟ್ ಡೆವಲೆಪ್ ಮೆಂಟ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರ ತಾಯಿ ದೀಪ್ತಿ ಸಲಗಾಂವ್ಕರ್ ಹೆಸರಾಂತ ಉದ್ಯಮಿ ಧೀರೂಭಾಯಿ ಅಂಬಾನಿಯವರ ಕಿರಿಯ ಮಗಳಾಗಿದ್ದಾರೆ. ತನ್ನ ತಾಯಿಯಂತೆ ಇಶೆತಾ ಕೂಡಾ ಲೋಕೋಪಕಾರಿ ಚಟುವಟಿಕೆಗಳಲ್ಲಿ ಮುಂದಿದ್ದು ಶಿಕ್ಷಣ ಮತ್ತು ಆರೋಗ್ಯ ಸಂಬಂಧಿತ ಸೇವೆಗೆ ಹೆಚ್ಚಿನ ಬೆಂಬಲವನ್ನು ನೀಡುತ್ತಾರೆ.
ಇಶೆತಾ ಸಲ್ಗಾಂವ್ಕರ್ ಅವರು Nexzu ಮೊಬಿಲಿಟಿಯ ಸಂಸ್ಥಾಪಕರಾದ ಅತುಲ್ಯ ಮಿತ್ತಲ್ ಅವರನ್ನು ವಿವಾಹವಾಗಿದ್ದಾರೆ. ಅತುಲ್ಯ ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಹಳೆ ವಿದ್ಯಾರ್ಥಿಯಾಗಿದ್ದು, ಉದ್ಯಮಿ ಲಕ್ಷ್ಮಿ ನಿವಾಸ್ ಮಿತ್ತಲ್ ಅವರ ಸೋದರಳಿಯ ಆಗಿದ್ದಾರೆ.
ಇಶೆತಾ ಅವರು ಅತುಲ್ಯ ಅವರನ್ನು ವಿವಾಹವಾಗುವ ಮೊದಲು, ನೀರವ್ ಮೋದಿ ಅವರ ಕಿರಿಯ ಸಹೋದರ ನಿಶಾಲ್ ಮೋದಿ ಅವರನ್ನು ವಿವಾಹವಾಗಿದ್ದರು. ಇಶೆತಾ ಮತ್ತು ನಿಶಾಲ್ 2016 ರಲ್ಲಿ ವಿವಾಹವಾದರೂ ಕೂಡಾ ಕೆಲ ಸಮಯದಲ್ಲೇ ವಿಚ್ಛೇದನ ಪಡೆದು ಬೇರೆ ಬೇರೆಯಾದರು.


Click it and Unblock the Notifications