"ಬಚ್ಚನ್ ಫ್ಯಾಮಿಲಿ" ಬಾಲಿವುಡ್‌ನ ಹಿಂದಿ ಚಲನಚಿತ್ರೋದ್ಯಮದಲ್ಲಿ ಸಿರಿವಂತ ಮತ್ತು ಶಕ್ತಿಶಾಲಿ ಕುಟುಂಬಗಳಲ್ಲಿ ಒಂದಾಗಿದೆ. ಚಿತ್ರರಂಗದಲ್ಲಿ ಮಾತ್ರವಲ್ಲದೆ ರಾಜಕೀಯವಾಗಿಯೂ, ವ್ಯಾಪಾರ ಲೋಕದಲ್ಲೂ ಈ ಕುಟುಂಬ ತೊಡಗಿಸಿಕೊಂಡಿದೆ. ಬಾಲಿವುಡ್‌ನ ಪವರ್‌ಹೌಸ್ ಎಂದೇ ಖ್ಯಾತಿ ಹೊಂದಿದ ಬಚ್ಚನ್ ಪ್ಯಾಮಿಲಿಯ ಕುಡಿಯಾದ ಶ್ವೇತಾ ಬಚ್ಚನ್ ಸಿನಿಮಾ ಕ್ಷೇತ್ರಕ್ಕೆ ಕಾಲಿಡದೇ ಉದ್ಯಮಶೀಲತೆಯ ಹಾದಿಯನ್ನು ಆಯ್ಕೆ ಮಾಡಿಕೊಂಡರು.
ಅವರ ಪತಿ ನಿಖಿಲ್ ನಂದಾ ಅವರು ಎಸ್ಕಾರ್ಟ್ಸ್ ಗ್ರೂಪ್‌ನ ವ್ಯಾಪಾರ ವಹಿವಾಟುಗಳನ್ನು ನೋಡಿಕೊಳ್ಳುತ್ತಾರೆ. ಶ್ವೇತಾ ಬಚ್ಚನ್ ಮತ್ತು ನಿಖಿಲ್ ನಂದಾ ದಂಪತಿಗಳಿಗೆ ನವ್ಯಾ ನವೇಲಿ ನಂದಾ ಮತ್ತು ಅಗಸ್ತ್ಯ ನಂದಾ ಎಂಬ ಇಬ್ಬರು ಮಕ್ಕಳಿದ್ದಾರೆ. ಹಾಗಿದ್ರೆ ಆದರೆ, ನಂದಾ ಕುಟುಂಬದಲ್ಲಿ ಅತಿ ಹೆಚ್ಚು ಆಸ್ತಿ ಒಡೆಯರು ಯಾರು ಎಂಬುವುದನ್ನು ನೋಡೋಣ?

ನಿಖಿಲ್ ನಂದಾ ಅವರ ನಿವ್ವಳ ಮೌಲ್ಯ
ನಿಖಿಲ್ ನಂದಾ ಎಸ್ಕಾರ್ಟ್ಸ್ ಕುಬೋಟಾ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇವರ ಆಸ್ತಿ ಅಂದಾಜು 60 ಕೋಟಿ ರೂಪಾಯಿ ಆಗಿದೆ. ಮತ್ತೊಂದೆಡೆ, ಎಸ್ಕಾರ್ಟ್ಸ್ ಕುಬೋಟಾವು 2021 ರ ಅಂಕಿಅಂಶದ ಪ್ರಕಾರ 7014 ಕೋಟಿ ರೂಪಾಯಿಗಳಷ್ಟು ಭಾರಿ ಆದಾಯವನ್ನು ಹೊಂದಿದೆ .
ವರದಿಗಳ ಪ್ರಕಾರ ನಿಖಿಲ್ ನಂದಾ ಅವರ ವೇತನವು 13.1 ಕೋಟಿ ರೂಪಾಯಿಗಳಾಗಿದ್ದು, ಅವರು ಎಸ್ಕಾರ್ಟ್ಸ್ ಗ್ರೂಪ್ ನಲ್ಲಿ 36.59% ಪಾಲನ್ನು ಹೊಂದಿದ್ದಾರೆ. ನಿಖಿಲ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಬ್ಯುಸಿನೆಸ್ ಸ್ಕೂಲ್‌ನಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಪದವಿ ಪಡೆದಿದ್ದಾರೆ.
ಶ್ವೇತಾ ಬಚ್ಚನ್:
ನಿಖಿಲ್ ನಂದಾ ಅವರ ಪತ್ನಿ ಹಾಗೂ ಬಚ್ಚನ್ ಪುತ್ರಿಯಾಗಿರುವ ಶ್ವೇತಾ ಬಚ್ಚನ್ ಅವರ ನಿವ್ವಳ ಮೌಲ್ಯ 160 ಕೋಟಿ ರೂಪಾಯಿ ಆಗಿದೆ. 2023 ರಲ್ಲಿ, ಶ್ವೇತಾ ಅವರಿಗೆ ಅವರ ತಂದೆ ಅಮಿತಾಭ್ ಬಚ್ಚನ್ 50 ಕೋಟಿ ರೂಪಾಯಿ ಮೌಲ್ಯದ ಜುಹುದಲ್ಲಿನ ಪ್ರತೀಕ್ಷಾ ಬಚ್ಚನ್ ಭವನ ಉಡುಗೊರೆಯಾಗಿ ನೀಡಿದ ಅವರ ಸಂಪತ್ತಿನಲ್ಲಿ ಗಣನೀಯ ಹೆಚ್ಚಳ ಕಂಡುಬಂತು.
ಶ್ವೇತಾ ಬಚ್ಚನ್ ನಂದಾ ಒಬ್ಬ ಭಾರತೀಯ ಲೇಖಕಿಯಾಗಿಯೂ ಅಂಕಣಕಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಇದರೊಂದಿಗೆ ಐಷಾರಾಮಿ ಬ್ರಾಂಡ್ MxS ನ ಸಹ-ಸಂಸ್ಥಾಪಕಿಯಾಗಿದ್ದಾರೆ. ಶ್ವೇತಾ ಸ್ವಿಟ್ಜರ್ಲೆಂಡ್‌ನಲ್ಲಿ ಅಧ್ಯಯನ ಮಾಡಿದ್ದು, ಬೋಸ್ಟನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.
ನವ್ಯಾ ನವೇಲಿ ನಂದಾ
ನವ್ಯಾ ನವೇಲಿ ನಂದಾ ಅವರ ಅಂದಾಜು ನಿವ್ವಳ ಮೌಲ್ಯ 16.58 ಕೋಟಿ ರೂಪಾಯಿ ಆಗಿದೆ. ನ್ಯೂಯಾರ್ಕ್ ನಗರದ ಫೋರ್ಡ್ಹ್ಯಾಮ್ ವಿಶ್ವವಿದ್ಯಾಲಯದಿಂದ ಡಿಜಿಟಲ್ ತಂತ್ರಜ್ಞಾನ ಮತ್ತು UX ಡಿಸೈನ್ ನಲ್ಲಿ ಪದವಿ ಪಡೆದಿದ್ದಾರೆ. ನವ್ಯಾ ಬಾಲಿವುಡ್ ದೂರವಿದ್ದು, ಉದ್ಯಮಿಯಾಗಿ ಮತ್ತು ಲೋಕೋಪಕಾರಿಯಾಗಿ ತನ್ನ ತಂದೆಯನ್ನು ಅನುಸರಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಇದಲ್ಲದೇ ನವ್ಯಾ ಆರಾ ಹೆಲ್ತ್ ಎಂಬ ಕಂಪನಿಯನ್ನು ಸಹ-ಸ್ಥಾಪಿಸಿದ್ದು, ಇದು ಮಹಿಳಾ-ಕೇಂದ್ರಿತ ಆರೋಗ್ಯ ತಂತ್ರಜ್ಞಾನ ಕಂಪನಿಯಾಗಿದೆ. ಜೊತೆಗೆ ಪ್ರಾಜೆಕ್ಟ್ ನವೇಲಿ ಎಂಬ ಸಂಸ್ಥೆಯನ್ನೂ ಸ್ಥಾಪಿಸಿದ್ದು, ಇದು ಲಿಂಗ ಅಸಮಾನತೆಯ ವಿರುದ್ಧ ಹೋರಾಡಲು ಮೀಸಲಾಗಿರುವ ಲಾಭರಹಿತ ಸಂಸ್ಥೆಯಾಗಿದೆ.
ಅಗಸ್ತ್ಯ ನಂದಾ
ಶ್ವೇತಾ ಬಚ್ಚನ್ ಮತ್ತು ನಿಖಿಲ್ ನಂದಾ ಅವರ ಕಿರಿಯ ಪುತ್ರ ಅಗಸ್ತ್ಯ ನಂದಾ ಅವರ ನಿವ್ವಳ ಮೌಲ್ಯ ತಿಳಿಬಂದಿಲ್ಲ. ಇವರು ಇತ್ತೀಚೆಗೆ ತಾನೇ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಮತ್ತು ಶ್ರೀದೇವಿ ಅವರ ಪುತ್ರಿ ಖುಷಿ ಕಪೂರ್ ಅವರೊಂದಿಗೆ 'ದಿ ಆರ್ಚೀಸ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅಗಸ್ತ್ಯ ಲಂಡನ್‌ನ ಸೆವೆನೋಕ್ಸ್ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ.


Click it and Unblock the Notifications