ಭಾರತೀಯ ಮೂಲದ ಅಮೆರಿಕನ್ ಎಂಟ್ರೆಪ್ರೆನಿಯರ್ ಆಗಿರುವ ನಿಕಿಲ್ ವಿಶ್ವನಾಥನ್ ವಿಶ್ವದ ಪ್ರಮುಖ ವೆಬ್3 ಡೆವಲಪರ್ ಪ್ಲಾಟ್‌ಫಾರ್ಮ್ ಆಲ್ಕೆಮಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ನಿಕಿಲ್ ವಿಶ್ವನಾಥನ್ ಅವರು ಜೋಸೆಫ್ ಲಾವ್ ಜೊತೆ ಸೇರಿ ಆಲ್ಕೆಮಿಯನ್ನು ಹುಟ್ಟುಹಾಕಿದ್ದಾರೆ. 2020 ರಲ್ಲಿ ಇವರಿಬ್ಬರು ಪಂಥವೊಂದನ್ನು ಕಟ್ಟಿ ಅದರಲ್ಲಿ ಯಶಸ್ವಿಯಾಗಲು ನಿರ್ಧರಿಸಿದರು.
ಅದರಂತೆಯೇ ಎರಡು ವರ್ಷಕ್ಕಿಂತಲೂ ಕಮ್ಮಿ ಸಮಯದಲ್ಲಿ, ಅವರ ಕಂಪನಿಯು 10.2 ಬಿಲಿಯನ್ ಡಾಲರ್ (83,000 ರೂಪಾಯಿಗಿಂತ ಹೆಚ್ಚು) ಮೌಲ್ಯವನ್ನು ತಲುಪುವಲ್ಲಿ ಯಶಸ್ವಿಯಾಯಿತು. ಈ ಸಾಫ್ಟ್‌ವೇರ್ ಸಂಸ್ಥೆಯು ಇದುವರೆಗಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಂಪನಿಗಳಲ್ಲಿ ಒಂದಾಗಿದೆ. ನಿಕಿಲ್ ವಿಶ್ವನಾಥನ್ ಅವರು ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದಾರೆ.
ನಿಕಿಲ್ ವಿಶ್ವನಾಥನ್ ಅವರು ಕಂಪ್ಯೂಟರ್ ಸೈನ್ಸ್ ನ್ನು ಪದವಿ ಪಡೆದಿದ್ದು, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ವಿಷಯದಲ್ಲಿ ಅಧ್ಯಯನ ಮಾಡಿದ್ದಾರೆ. ಸಹ ಉದ್ಯಮಿಯಾಗಿರುವ ಜೋಸೆಫ್ ಲಾವ್ ಇವರ ಜೊತೆ ಸೇರಿ ಮೊದಲು ಹುಟ್ಟು ಹಾಕಿದ ಡೌನ್ ಟು ಲಂಚ್ ಎಂಬ ಸೋಶಿಯಲ್ ಅಪ್ಲಿಕೇಶನ್ ಇವರಿಗೆ ದೊಡ್ಡ ಹಿಟ್ ಕೊಟ್ಟಿತ್ತು.
ನಿಕಿಲ್ ವಿಶ್ವನಾಥನ್ ಅವರ ಮೀಟಪ್ ಅಪ್ಲಿಕೇಶನ್ ಜನಪ್ರಿಯವಾಗಿ Apple iPhone ಆಪ್ ಸ್ಟೋರ್‌ನಲ್ಲಿ ಅಗ್ರ ಶ್ರೇಯಾಂಕದ ಆಪ್ ಸ್ಥಾನ ಪಡೆಯಿತು. ವಿಶ್ವನಾಥನ್ ತಮ್ಮ ಕಾಲೇಜು ದಿನಗಳಲ್ಲಿ ಟೆಕ್ ದೈತ್ಯಗಳಾದ Facebook, Google ಮತ್ತು Microsoft ನೊಂದಿಗೆ ಇಂಟರ್ನ್ಶಿಪ್ ಮಾಡಿದ್ದರು. ವಿಶ್ವನಾಥನ್ ಅವರು, ಚೆಕ್ ಇನ್ ಟು ಮೈ ಫ್ಲೈಟ್ ಎನ್ನುವ ಚೆಕ್-ಇನ್ ಅಪ್ಲಿಕೇಶನ್‌ನ ಸೃಷ್ಟಿಕರ್ತರೂ ಆಗಿದ್ದರು.
ಇದು ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನಗಳಿಗೆ ಆಟೋಮ್ಯಾಟಿಕ್ ಸರ್ವಿಸ್ ನೀಡಿತ್ತು. ವಿಮಾನಯಾನ ಸಂಸ್ಥೆಯು ಅಂತಿಮವಾಗಿ ಅದನ್ನು ಮುಚ್ಚುವಂತೆ ಮಾಡಿತು. 2020 ರಲ್ಲಿ, ವಿಶ್ವನಾಥನ್ ಮತ್ತು ಲಾವ್ ಸೇರಿ ಆಲ್ಕೆಮಿಯನ್ನು ಪ್ರಾರಂಭಿಸಿದರು. ವಿಶ್ವನಾಥನ್ ಅವರ ಆಲ್ಕೆಮಿ ನಿರ್ಮಿಸಿದ ಸಾಫ್ಟ್‌ವೇರ್ ಸಾವಿರಾರು ಬ್ಲಾಕ್‌ಚೈನ್ ಆಧಾರಿತ ಸಂಸ್ಥೆಗಳನ್ನು ನಿರ್ವಹಣೆ ಮಾಡುತ್ತದೆ. ನಿಕಿಲ್ ವಿಶ್ವನಾಥನ್ ಅವರು ಕಂಪನಿಯಲ್ಲಿ 26 ಪ್ರತಿಶತ ಪಾಲನ್ನು ಹೊಂದಿದ್ದಾರೆ.
ನಿಕಿಲ್ ವಿಶ್ವನಾಥನ್ ಅವರ ನಿವ್ವಳ ಮೌಲ್ಯ ಸುಮಾರು 14,752 ಕೋಟಿ ರೂ. ($1.8 ಬಿಲಿಯನ್)ಆಗಿದೆ. ಇದು ಅವರನ್ನು ವಿಶ್ವದ ಅತ್ಯಂತ ಕಿರಿಯ ಭಾರತೀಯ ಮೂಲದ ಬಿಲಿಯನೇರ್‌ಗಳಲ್ಲಿ ಒಬ್ಬರನ್ನಾಗಿ ಮಾಡಿದೆ. 2021 ರಲ್ಲಿ ಪ್ರಾರಂಭಿಸಲಾದ ಆಲ್ಕೆಮಿ ವೆಂಚರ್ಸ್‌ನ ಹೂಡಿಕೆದಾರರೂ ಆಗಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೆಲೆಸಿರುವ ವಿಶ್ವನಾಥನ್ ಅವಿವಾಹಿತರಾಗಿದ್ದು, "ಅತ್ಯಂತ ಅರ್ಹ ಬ್ಯಾಚುಲರ್‌ಗಳಲ್ಲಿ" ಒಬ್ಬರಾಗಿದ್ದಾರೆ.
2 ವರ್ಷದಲ್ಲೇ ಕಂಪನಿ ಕಟ್ಟಿ ಬೆಳೆಸಿದವರಿವರು
ನರೇನ್ ಕಾರ್ತಿಕೇಯನ್ ಕೂಡಾ ಎರಡು ವರ್ಷದಲ್ಲೇ ಕಂಪನಿಯನ್ನು ಕಟ್ಟಿ ಬೆಳೆಸಿದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇನ್ನು ಸಾಹಿಲ್ ಬರುವಾ ಎಂಬ ಉದ್ಯಮಿ ನಾಲ್ಕು ವರ್ಷಗಳಲ್ಲಿ ಒಂದು ಯಶಸ್ವಿ ಕಂಪನಿಯನ್ನು ಕಟ್ಟಿ ಬೆಳೆಸಿದ ಖ್ಯಾತಿಯನ್ನು ಪಡೆದಿದ್ದಾರೆ. ನರೇನ್ ಕಾರ್ತಿಕೇಯನ್ 2000ದಲ್ಲಿ ಸಾಮಾನ್ಯ ಜ್ಞಾನ ಪುಸ್ತಕಗಳ ಭಾಗವಾಗಿದ್ದರು. ತಮಿಳುನಾಡು ಮೂಲದ ಈ ವ್ಯಕ್ತಿ ಫಾರ್ಮುಲಾ 1 ರೇಸ್ ಕಾರನ್ನು ಡ್ರೈವ್ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತೀಯ ವಾಹನ ಕ್ಷೇತ್ರದ ಈ ಅಪ್ರತಿಮ ವ್ಯಕ್ತಿಗೆ 2010ರಲ್ಲಿ ಭಾರತದ ನಾಲ್ಕನೇ ಅತ್ಯುತ್ತಮ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು.
ಆದರೂ ಕಾರ್ತಿಕೇಯನ್ ಒಬ್ಬರು ಯಶಸ್ವಿ ಉದ್ಯಮಿ ಎಂಬುದು ಅನೇಕರಿಗೆ ತಿಳಿದಿಲ್ಲ. ನರೇನ್ ಕಾರ್ತಿಕೇಯನ್ ಅವರು 2020ರಲ್ಲಿ ಡ್ರೈಎಕ್ಸ್ ಎಂಬ ಕಂಪನಿಯನ್ನು ಪ್ರಾರಂಭಿಸಿದ್ದರು. ಕೇವಲ ಎರಡು ವರ್ಷದಲ್ಲಿ ಅಂದರೆ 2022ರಲ್ಲಿ ಈ ಕಂಪೆನಿಯ ಅಂದಾಜು ಮೌಲ್ಯ 178 ಕೋಟಿ ರೂಪಾಯಿಗೆ ಏರಿತ್ತು. ವಿಶ್ವದ ಅತಿದೊಡ್ಡ ಮೋಟಾರ್ ಸೈಕಲ್ ತಯಾರಿಕಾ ಕಂಪೆನಿಯಾದ ಭಾರತದ ಟಿವಿಎಸ್ ಗ್ರೂಪ್ ಈ ಕಂಪೆನಿಯನ್ನು ಹೂಡಿಕೆ ಮಾಡುವ ಮೂಲಕ ಇದಕ್ಕೆ ಬೆಂಬಲವಾಗಿ ನಿಂತಿದೆ.
More From GoodReturns

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications
