Niraj Singh: ಮನೆಯನ್ನೇ ಅಡವಿಟ್ಟು 14470 ಕೋಟಿ ರೂಪಾಯಿ ಕಂಪನಿ ಕಟ್ಟಿದ ಯುವ ಉದ್ಯಮಿ ನೀರಜ್‌ ಸಿಂಗ್‌

ನೀರಜ್‌ ಸಿಂಗ್‌ ಅವರು ಬಾಲಿವುಡ್‌ ಸ್ಟಾರ್ಟಪ್‌ ಅನ್ನು ಹೋಲುವ ಜೀವನ ಕಥೆಯನ್ನು ಹೊಂದಿದ್ದಾರೆ. 2014ರ ಜನವರಿಯಲ್ಲಿ ಎರಡು ಸ್ಟಾರ್ಟಪ್‌ಗಳನ್ನು ಯಶಸ್ವಿಗೊಳಿಸುವಲ್ಲಿ ವಿಫಲವಾದ ನಂತರ ಅವರು ಮೂರನೇ ಬಾರಿಗೆ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಮುಂದಾಗಿದ್ದರು. ಆದರೆ ಅಷ್ಟೊಂದು ಆತ್ಮವಿಶ್ವಾಸವಿರಲಿಲ್ಲ. ಆದರೆ ಮೂರನೇ ಪ್ರಯತ್ನವು ಅದು ಅವರ ಕೊನೆಯ ಪ್ರಯತ್ನವಾಗಿತ್ತು. ಅದೃಷ್ಟ ಎನ್ನುವಂತೆ ಅತ್ಯಂತ ಯಶಸ್ವಿ ಸ್ಟಾರ್ಟಪ್‌ ಆಗಿ ಬೆಳೆಯಿತು.

ಸಿಂಗ್‌ ಅವರು ಜಾರ್ಖಂಡ್‌ನ ದಾಲ್ತೋಂಗಂಜ್‌ನಿಂದ ಬಂದವರು. ಅವರು ಯಾವಾಗಲೂ ಶಾಲೆಯಲ್ಲಿ ಅಗ್ರಸ್ಥಾನದಲ್ಲಿದ್ದರು. ಮೊದಲ ಪ್ರಯತ್ನದಲ್ಲೇ ಐಐಟಿ ಪಾಸಾಗಿದ್ದರು. ಪ್ರಾರಂಭದಲ್ಲಿ ಅವರು ಐಐಟಿ ರೂರ್ಕಿಯಲ್ಲಿ ಆರ್ಕಿಟೆಕ್ಟರ್‌ ಎಂಜಿನಿಯರಿಂಗ್‌ಗಾಗಿ ಐಐಟಿಗೆ ಸೇರಿದ್ದರು. ಆದರೆ, ಮತ್ತೆ ಪರೀಕ್ಷೆಯನ್ನು ತೆಗೆದುಕೊಂಡು ದಿಲ್ಲಿಯ ಐಐಟಿಯಲ್ಲಿ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ಪ್ರೋಗ್ರಾಂಗೆ ಸೇರಿದರು. ನಂತರದಲ್ಲಿ ಅವರು ತಮ್ಮ ಮೊದಲ ಸ್ಟಾರ್ಟಪ್‌ ಅನ್ನು ಪ್ರಾರಂಭಿಸಿದ್ದರು.

 ಮನೆ ಅಡವಿಟ್ಟು 14470 ಕೋಟಿ ರೂ. ಕಂಪನಿ ಕಟ್ಟಿದ ಯುವ ಉದ್ಯಮಿ

ಲೋಕಸ್‌ ಎಜುಕೇಷನ್‌ ಎಂಬ ಸ್ಟಾರ್ಟಪ್‌ ಅದಾಗಿದ್ದು, ಅದು ನಿಗದಿಯಂತೆ ಮುನ್ನಡೆಯದ ಕಾರಣ ಕೆಲವು ಸಮಯಗಳ ಬಳಿಕ ಅದನ್ನು ಮುಚ್ಚಬೇಕಾಯಿತು. 2014 ರಲ್ಲಿ ಅವರು ತಮ್ಮ ಎರಡನೇ ಉದ್ಯಮವನ್ನು ಮುಚ್ಚಬೇಕಾಯಿತು. 2016 ರಲ್ಲಿ ಅವರು ಸ್ಪಿನ್ನಿ ಎಂಬ ಯೂಸ್ಡ್‌ ಕಾರ್‌ ಮಾರ್ಕೆಟ್‌ ಅನ್ನು ಪ್ರಾರಂಭಿಸಿದರು. ಆದರೆ ಹೆಚ್ಚಿನವರು ಇದು ಅತಿರೇಕದ ಪ್ರಯತ್ನ ಎಂದಿದ್ದರು. ಅವರು ನವೀಕರಿಸಿದ ಕಾರುಗಳನ್ನು ಮಾರಾಟ ಮಾಡುವ ವೇದಿಕೆಯನ್ನು ಪ್ರಾರಂಭಿಸಿದರು.

ಎರಡನೇ ವರ್ಷದಲ್ಲೇ ಕಂಪನಿಯ ಆದಾಯ 4.6 ಕೋಟಿ ರೂಪಾಯಿ ಆಗಿತ್ತು. ಇದಕ್ಕಾಗಿ ನೀರಜ್‌ ಸಿಂಗ್‌ ತಮ್ಮ ಮನೆಯನ್ನು ಅಡವಿಟ್ಟು ವೈಯಕ್ತಿಕ ಸಾಲವನ್ನು ಪಡೆದುಕೊಂಡಿದ್ದರು. ಈ ನಡುವೆ ಅವರು ಹೂಡಿಕೆದಾರರಿಂದ 100 ಬಾರಿ ತಿರಸ್ಕರಿಸಲ್ಪಟ್ಟಿದ್ದರು. ಎಲ್ಲಿಯವರೆಗೆ ಅಂದರೆ ತಮ್ಮ ಬಳಿಯಿದ್ದ ಫಾರ್ಚುನರ್‌ ಕಾರು ಹಾಗೂ ಇತರೆ ಆಸ್ತಿಯನ್ನೂ ಮಾರಾಟ ಮಾಡಬೇಕಾಗಿ ಬಂತು. ಅತ್ತ ಕುಟುಂಬದವರು ಹಾಗೂ ಸ್ನೇಹಿತರಿಂದಲೂ ಹಣ ಪಡೆದುಕೊಂಡಿದ್ದರು.

ಆದರೆ 2019 ರಲ್ಲಿ ಪರಿಸ್ಥಿತಿಗಳು ಬದಲಾದವು. ಇದು 26 ಮಿಲಿಯನ್‌ ಡಾಲರ್‌ ಮೌಲ್ಯದಲ್ಲಿ 11 ಮಿಲಿಯನ್‌ ಡಾಲರ್‌ ಅನ್ನು ಸಂಗ್ರಹಿಸಿತು. ಕೆಲವು ತಿಂಗಳ ನಂತರ ಅವರು 138 ಮಿಲಿಯನ್‌ ಡಾಲರ್‌ಗಳ ಮೌಲ್ಯಮಾಪನದಲ್ಲಿ 38 ಮಿಲಿಯನ್‌ ಡಾಲರ್‌ ಅನ್ನು ಸಂಗ್ರಹಿಸಿದರು. ಹಣಕಾಸು ವರ್ಷ 2022ರಲ್ಲಿ ಅವರು 280 ಮಿಲಿಯನ್‌ ಡಾಲರ್‌ ಅನ್ನು ಸಂಗ್ರಹಿಸಿದರು. ಕಂಪನಿಯ ಮೌಲ್ಯವು 1.75 ಶತಕೋಟಿ ಡಾಲರ್‌ ಅಥವಾ 14470 ಕೋಟಿ ರೂಪಾಯಿ ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+