ಈಗ ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕಾದರೆ, ಲಕ್ಷಾಂತರ ಜನರಿಗೆ ತಮ್ಮ ಟ್ಯಾಲೆಂಟ್ ಬಗ್ಗೆ ಮಾಹಿತಿ ನೀಡಿಬೇಕಾದರೆ, ಇಂಟರ್‌ನೆಟ್ ಅವರಿಗೆ ಸಾಕಷ್ಟು ವೇದಿಕೆಯನ್ನು ನೀಡುತ್ತದೆ. ಕಲಾವಿದರು, ವಾಣಿಜ್ಯೋದ್ಯಮಿಗಳು ಮತ್ತು ಇತರ ವೃತ್ತಿಪರರು ಈಗ ಯುಟ್ಯೂಬರ್‌ಗಳಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.
ಈ ಪೈಕಿ ಕ್ಯಾರಿಮಿನಾಟಿ ಎಂಬ ಯೂಟ್ಯೂಬ್ ಹ್ಯಾಂಡಲ್ ಮೂಲಕ ಚಿರಪರಿಚಿತರಾಗಿರುವ ಅಜೇಯ್ ನಗರ್ ಈ ಯಶಸ್ವಿ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ತನ್ನ 10 ನೇ ವಯಸ್ಸಿನಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಈ ಯೂಟ್ಯೂಬರ್, 40 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ.

ಗೇಮಿಂಗ್ ಮತ್ತು ಯೂಟ್ಯೂಬ್ ಅನ್ನು ಎಂಜಾಯ್ ಮಾಡುವವರು ಅಜೇಯ್ ನಗರ್‌ರನ್ನು ಮೆಚ್ಚುತ್ತಾರೆ. ಅಜೇಯ್ ನಗರ್‌ರ ಹಾಸ್ಯಮಯ ಚಿತ್ರಕಥೆಗಳು ಮತ್ತು ಡಿಸ್ ಚಲನಚಿತ್ರಗಳು ಸಾಮಾಜಿಕ ಕ್ಷೇತ್ರದಲ್ಲಿ ತನಗಾಗಿ ಒಂದು ಗುರುತನ್ನು ನಿರ್ಮಿಸಲು ಸಹಾಯ ಮಾಡಿವೆ. ಕ್ಯಾರಿಮಿನಾಟಿ, ಭಾರತದಲ್ಲಿನ ಅತ್ಯಂತ ಜನಪ್ರಿಯ ಯೂಟ್ಯೂಬರ್‌ಗಳಲ್ಲಿ ಒಬ್ಬರಾಗಿದ್ದಾರೆ. ಶ್ರೀಮಂತ ಜೀವನಶೈಲಿಯನ್ನು ಕೂಡಾ ನಡೆಸುತ್ತಾರೆ.
ಅಜೇಯ ನಗರ್ ಯಾರು?
ಜೂನ್ 12, 1999 ರಂದು ಜನಿಸಿದ ಅಜೇಯ್ ನಗರ್ ಹರಿಯಾಣದ ಫರಿದಾಬಾದ್‌ನವರಾಗಿದ್ದಾರೆ. 2016 ರಲ್ಲಿ ತನ್ನ ಯೂಟ್ಯೂಬ್ ವೃತ್ತಿಜೀವನದ ಮೇಲೆ ಹೆಚ್ಚು ಗಮನಹರಿಸುವ ಮುನ್ನ ಅಜೇಯ್ ನಗರ್ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿದ್ದಾರೆ. ಆದರೆ 12ನೇ ಬೋರ್ಡ್ ಪರೀಕ್ಷೆಯನ್ನು ಬರೆಯಲಿಲ್ಲ.
ಡಿಸ್ಟೆಂನ್ಸ್ ಲರ್ನಿಂಗ್ ಮೂಲಕ ಅಂತಿಮವಾಗಿ ತಮ್ಮ ಶಿಕ್ಷಣವನ್ನು ಮುಗಿಸಿದರು. ಕ್ಯಾರಿಮಿನಾಟಿ ನಿರ್ವಹಣೆಗೆ ಅವರ ಹಿರಿಯ ಸಹೋದರ ಯಶ್ ನಗರ್ ಕೂಡಾ ಸಹಕರಿಸಿದರು. ಅಜೇಯ ನಗರ್ ತಮ್ಮ ಹತ್ತು ವರ್ಷದಲ್ಲಿಯೇ ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದರು. ತಮ್ಮ ಮೊಲದ ಯೂಟ್ಯೂಬ್ ಖಾತೆ STeaLThFeArzZ ಫುಟ್‌ಬಾಲ್ ಟ್ಯುಟೋರಿಯಲ್‌ಗಳನ್ನು ಪ್ರಾರಂಭಿಸಿದರು.
ಇವರ ಯೂಟ್ಯೂಬ್ ಚಾನಲ್ 2014ರಿಂದ ಸಕ್ರಿಯವಾಗಿದೆ. ನಗರ್ 2014 ರಲ್ಲಿ AddictedA1 ಎಂಬ ಯೂಟ್ಯೂಬ್ ಚಾನಲ್ ಅನ್ನು ಪ್ರಾರಂಭಿಸಿದರು. ಅಲ್ಲಿ ಅವರು ವೀಡಿಯೊ ಗೇಮ್ ಕ್ಲಿಪ್‌ಗಳು ಮತ್ತು ಪ್ರತಿಕ್ರಿಯೆ ಬಗ್ಗೆ ವೀಡಿಯೊಗಳನ್ನು ಪೋಸ್ಟ್ ಮಾಡಿದರು. ಮೇ 2021 ರಲ್ಲಿ 30 ಮಿಲಿಯನ್ ಚಂದಾದಾರರನ್ನು ಮತ್ತು ಆಗಸ್ಟ್ 2023 ರಲ್ಲಿ 40 ಮಿಲಿಯನ್ ಚಂದಾದಾರರನ್ನು ತಲುಪಿದರು.
ಕ್ಯಾರಿಮಿನಾಟಿಯು ತನ್ನ ಯೂಟ್ಯೂಬ್ ಚಾನಲ್‌ನಿಂದ ಮತ್ತು ಪ್ರಾಥಮಿಕವಾಗಿ ಬ್ರ್ಯಾಂಡ್ ಪ್ರಾಯೋಜಕತ್ವದಿಂದ ಪಡೆಯುವ ಆದಾಯವು 41 ಕೋಟಿ ರೂಪಾಯಿ ಅಥವಾ 5 ಮಿಲಿಯನ್ ಡಾಲರ್ ಆಗಿದೆ. ಈ ವರ್ಷ ಒಡಿಶಾ ರೈಲು ಡಿಕ್ಕಿ ಸಂತ್ರಸ್ತರ ನೆರವಿಗಾಗಿ ನಾಲ್ಕು ಗಂಟೆಗಳ ಲೈವ್ ಸ್ಟ್ರೀಮ್ ನಡೆಸಿದ್ದಾರೆ.
ಲೈವ್ ಸ್ಟ್ರೀಮ್‌ನಿಂದ ಬಂದ ಸಂಪೂರ್ಣ ಆದಾಯ ಸರಿಸುಮಾರು 11 ಲಕ್ಷ ರೂಪಾಯಿ ಆಗಿದೆ. ಇದರಲ್ಲಿ 1.5 ಲಕ್ಷ ರೂಪಾಯಿ ವೈಯಕ್ತಿಕ ದೇಣಿಗೆ ಕೂಡಾ ಸೇರಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲಾಗಿದೆ. ಇವರ ಯೂಟ್ಯೂಬ್‌ನ ಹಲವಾರು ಹಾಡುಗಳು ಜನಪ್ರಿಯವಾಗಿದೆ. ಟ್ರಿಗರ್, ಜಿಂದಗಿ, ವಾರಿಯರ್ ಹಾಡುಗಳು ಜನಪ್ರಿಯವಾಗಿದೆ.
ಏಪ್ರಿಲ್ 2020 ರಲ್ಲಿ, ಫೋರ್ಬ್ಸ್‌ನ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ 30 ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಅಜೇಯ್ ನಗರ್ ಹೆಸರು ಕೂಡಾ ಇದೆ. ಅವರು ತಿಂಗಳಿಗೆ 25 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ ಎಂದು ವರದಿಯು ಹೇಳುತ್ತದೆ. ಇನ್ನು ನಾವು ವಾರ್ಷಿಕವಾಗಿ ನೋಡಿದಾಗ ಅಜಯ್ ನಗರ್ ಆದಾಯವು 4 ಕೋಟಿ ರೂಪಾಯಿ ಆಗಿದೆ.


Click it and Unblock the Notifications