ಹಲವು ಸವಾಲುಗಳನ್ನು ಎದುರಿಸಿ ಬೆಳೆದ ನೇಹಾ ನಾರ್ಖೆಡೆ ಇಂದು ಭಾರತದ ಅತ್ಯಂತ ಕಿರಿಯ "ಸೆಲ್ಪ್ ಮೇಡ್ ಮಹಿಳಾ ಉದ್ಯಮಿ" ಆಗಿದ್ದಾರೆ. ಅವರ ಕಂಪನಿಯೂ 75,000 ಕೋಟಿ ರೂಪಾಯಿ ನಿವ್ವಳ ಮೌಲ್ಯಕ್ಕೇರಿದ್ದು, ಅವರ ಸಾಧನೆಗಳನ್ನು ಗುರುತಿಸಿದ ಫೋರ್ಬ್ಸ್, ನೇಹಾ ಅವರನ್ನು ಯುನೈಟೆಡ್ ಸ್ಟೇಟ್ಸ್‌ನ ಸ್ವಯಂ ನಿರ್ಮಿತ ಶ್ರೀಮಂತ ಮಹಿಳೆಯರ ಪ್ರತಿಷ್ಠಿತ ಪಟ್ಟಿಗೆ ಸೇರ್ಪಡೆಗೊಳಿಸಿದೆ.
ಆದರೆ ಇಂದು ಸಾಧನೆಯ ಶಿಖರವೇರಿರುವ ನೇಹಾ ಅವರಿಗೆ ಯಶಸ್ಸು ಸುಲಭವಾಗಿ ಓಲಿದುಬಂದಿರಲಿಲ್ಲ. ಹಗಲು-ರಾತ್ರಿ ಎನ್ನದೆ ಅವಿರತವಾಗಿ ಶ್ರಮಿಸುವ ಮೂಲಕ ನೇಹಾ ಕೊನೆಗೂ ಸಾಧಿಸಿ ತೋರಿಸಿದರು ಜೊತೆಗೆ ತನ್ನ ಸಾಧನೆಯಿಂದಲೇ ಇತರರಿಗೆ ಮಾದರಿಯಾದರು. ಭಾರತೀಯರಾದ ನೇಹಾ ವಿದೇಶದಲ್ಲಿ ಯಶಸ್ಸಿನ ಪತಾಕೆಯನ್ನು ಹಾರಿಸಿದ್ದು ಹೇಗೆ ಎಂಬುವುದನ್ನು ಮುಂದೆ ನೋಡೋಣ....

ನೇಹಾ ಮಹಾರಾಷ್ಟ್ರದ ಪುಣೆಯ ಸಣ್ಣ ಪಟ್ಟಣದಲ್ಲಿ ಹುಟ್ಟಿ ಬೆಳೆದವರು. ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಅವರು, ಅಮೇರಿಕಾದ ಜಾರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಉನ್ನತ ವ್ಯಾಸಂಗ ಮಾಡಿದರು. ಇದಾದ ಬಳಿಕ ನೇಹಾ ಸಾಫ್ಟ್‌ವೇರ್ ದೈತ್ಯ ಒರಾಕಲ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಮೆರಿಕಾದಲ್ಲಿ ತನ್ನ ಸ್ವಂತ ಕಂಪನಿಯಾದ "ಕನ್ಫ್ಲುಯೆಂಟ್ " ಅನ್ನು ಸ್ಥಾಪಿಸುವ ಮೊದಲು ಅವರು ಲಿಂಕ್ಡ್‌ಇನ್‌ನಲ್ಲಿಯೂ ಸೇವೆ ಸಲ್ಲಿಸಿದ್ದರು.
2021ರಲ್ಲಿ, ಅವರ ಕಂಪನಿಯು ಐಪಿಒ ಮೂಲಕ ಸಾರ್ವಜನಿಕವಾಯಿತು. 2021 ರಲ್ಲಿ ಭಾರತದಲ್ಲಿ 8 ನೇ ಶ್ರೀಮಂತ ಮಹಿಳೆಯಾಗಿ ಸ್ಥಾನ ಪಡೆದು, ಇಂದು ಅವರು ಅಮೆರಿಕಾದಲ್ಲಿ ಅತ್ಯಂತ ಯಶಸ್ವಿ ಮಹಿಳಾ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಬಾಲ್ಯದಿಂದಲೂ ಇಂದಿರಾ ಗಾಂಧಿ, ಕಿರಣ್ ಬೇಡಿ, ಮತ್ತು ಇಂದ್ರಾ ನೂಯಿ ಅವರಂತಹ ಪ್ರಮುಖ ವ್ಯಕ್ತಿಗಳ ಪುಸ್ತಕಗಳನ್ನು ತಂದುಕೊಟ್ಟುಓದಲು ಪ್ರೋತ್ಸಾಹಿಸುತ್ತಿದ್ದ ತಂದೆಯೇ ತಮ್ಮ ಯಶಸ್ಸಿಗೆ ಕಾರಣ ಎನ್ನುತ್ತಾರೆ ನೇಹಾ.
2021 ರಲ್ಲಿ, ಅವರ ಕಂಪನಿಯು ಐಪಿಒಗೆ ಹೋದ ಪರಿಣಾಮ ನೇಹಾ ನಾರ್ಖೆಡೆ ಅವರ ನಿವ್ವಳ ಮೌಲ್ಯವು 13,380 ಕೋಟಿ ರೂಪಾಯಿಗೆ ಏರಿತ್ತು. ಆದರೆ 2022 ರಲ್ಲಿ ಅವರ ಸಂಪತ್ತಿನಲ್ಲಿ ಗಣನೀಯ ಕುಸಿತ ಕಂಡುಬಂತು. ಅದಂರೆ 2022 ರ ಹುರುನ್ ಶ್ರೀಮಂತ ಪಟ್ಟಿಯ ಪ್ರಕಾರ, ಅವರ ಸಂಪತ್ತು 4,700 ಕೋಟಿ ರೂಪಾಯಿಗೆ ಕುಸಿಯಿತು.
ಒಂದು ವರ್ಷದೊಳಗೆ ಸುಮಾರು 8,600 ಕೋಟಿ ರೂಪಾಯಿ ಕಳೆದುಕೊಳ್ಳುವ ಮೂಲಕ ಗಣನೀಯ ಹಿನ್ನಡೆಯನ್ನು ಎದುರಿಸುತ್ತಿದ್ದರೂ, ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿದ ನೇಹಾ ಇದೀಗ ಚೇತರಿಸಿಕೊಳ್ಳುವ ಪುನರಾಗಮಿಸಿದ್ದಾರೆ. 2023 ರ ಮಾರ್ಚ್‌ನಲ್ಲಿ ನೇಹಾ ವರೌ 'ಆಸಿಲರ್' ಎಂಬ ಹೊಸ ವಂಚನೆ ಜಾಲ ಪತ್ತೆ (fraud detection firm) ಸಂಸ್ಥೆಯನ್ನು ಅವರು ಘೋಷಿಸಿದ್ದರು. ಅಲ್ಲಿ ಅವರು ಸಹ ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ.


Click it and Unblock the Notifications