ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ರಾಜೀವ್ ಬಜಾಜ್ ಅವರು ಹೊಸ ಸುಧಾರಣೆಗಳು ಹಾಗೂ ಬೆಳವಣಿಗೆಯನ್ನು ತರುವಲ್ಲಿ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. 2022ರ ಫೆಬ್ರವರಿಯಲ್ಲಿ ಅವರು ನಿಧನರಾಗುವವರೆಗೂ ಪ್ರಸಿದ್ಧ ಬಜಾಜ್ ಗ್ರೂಪ್‌ನ ಗೌರವಾನ್ವಿತ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ದಿವಂಗತ ರಾಹುಲ್ ಬಜಾಜ್ ಅವರು ರಾಜೀವ್ ಬಜಾಜ್ ಅವರ ತಂದೆ.
ಮಹಾತ್ಮಾ ಗಾಂಧೀಜಿ ಅವರ ಅಭಿಮಾನಿಯಾಗಿರುವ ರಾಜೀವ್ ಬಜಾಜ್ ಅವರ ಮುತ್ತಜ್ಜ ಜಮ್ನಾಲಾಲ್ ಬಜಾಜ್ ಅವರು 1926ರಲ್ಲಿ ಬಜಾಜ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಪ್ರಸ್ತುತ ದ್ವಿಚಕ್ರ ವಾಹನ, ಹಣಕಾಸು ಸೇವೆಗಳು ಮತ್ತು ವಿದ್ಯುತ್ ಉಪಕರಣಗಳ ಉದ್ಯಮ ಸೇರಿದಂತೆ ಸುಮಾರು 40 ವ್ಯವಹಾರಗಳನ್ನು ಬಜಾಜ್ ಗ್ರೂಪ್ ಮುನ್ನಡೆಸುತ್ತಿದೆ.

ರಾಜೀವ್ ಬಜಾಜ್ ಯಾರು?
1966ರ ಡಿಸೆಂಬರ್ 21ರಂದು ಜನಿಸಿದ ಭಾರತೀಯ ಉದ್ಯಮಿ ರಾಜೀವ್ ಬಜಾಜ್ ಅವರು 2005 ರಲ್ಲಿ ಬಜಾಜ್ ಆಟೋದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಅವರು ಪಲ್ಸರ್ ಲೈನ್ ಮೋಟಾರ್ ಬೈಕ್‌ಗಳನ್ನು ಭಾರತದಲ್ಲಿ ಪ್ರಾರಂಭಿಸಿದ ಖ್ಯಾತಿಯನ್ನು ಹೊಂದಿದ್ದಾರೆ. ರಾಜೀವ್ ಬಜಾಜ್ ಅವರು ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ಬಜಾಜ್ ಆಟೋದ ಮಾಲೀಕರಾಗಿದ್ದಾರೆ.
ರಾಜೀವ್ ಬಜಾಜ್ ಪುಣೆಯ ಅಕುರ್ಡಿಯ ಸೇಂಟ್ ಉರ್ಸುಲಾ ಹೈಸ್ಕೂಲ್‌ನಿಂದ ಪದವಿ ಪಡೆದುಕೊಂಡಿದ್ದಾರೆ. 1988 ರಲ್ಲಿ ಪುಣೆ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ತಮ್ಮ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದು, 1990ರಲ್ಲಿ ಅವರು ವಾರ್ವಿಕ್ ವಿವಿಯಿಂದ ಮ್ಯಾನುಫ್ಯಾಕ್ಚರಿಂಗ್ ಸಿಸ್ಟಮ್ಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.
ಅಂದಿನಿಂದ ರಾಜೀವ್ ಬಜಾಜ್ ಅವರು ಬಜಾಜ್ ಆಟೋದ ಉತ್ಪಾದನೆ & ಸಪ್ಲೈ ಚೈನ್ (1990-95), ಆರ್ ಅಂಡ್ ಡಿ ಹಾಗೂ ಎಂಜಿನಿಯರಿಂಗ್ (1995-2000) ಹಾಗೂ ಮಾರ್ಕೆಟಿಂಗ್ & ಸೇಲ್ಸ್ (2000-2005) ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2005 ರ ಏಪ್ರಿಲ್‌ನಿಂದ ಅವರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಸಿಎನ್‌ಬಿಸಿ- ಟಿವಿ18ಗೆ ನೀಡಿದ ಸಂದರ್ಶನದಲ್ಲಿ ರಾಜೀವ್ ಬಜಾಜ್ ಅವರು, ರಾಯಲ್ ಎನ್‌ಫೀಲ್ಡ್ ಹೆಸರಿನ ಕಂಪನಿಯಾದ ಈಚರ್ ಮೋಟಾರ್ಸ್ ಲಿಮಿಟೆಡ್‌ನ (ಇಎಂಎಲ್) ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ್ ಲಾಲ್ ಅವರು ತಮ್ಮ ಅತ್ಯುತ್ತಮ ಸ್ಫೂರ್ತಿಗಳಲ್ಲಿ ಒಬ್ಬರು ಎಂದು ಬಣ್ಣಿಸಿದ್ದರು.
ಫೋರ್ಬ್ಸ್ ಪ್ರಕಾರ, ರಾಜೀವ್ ಬಜಾಜ್ ಅವರು 2022ರಲ್ಲಿ 4.3 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ನಾವು ನೋಡಿದಾಗ ರಾಜೀವ್ ಬಜಾಜ್ ನಿವ್ವಳ ಆದಾಯವು 3,56,00,60,30,000 ರೂಪಾಯಿ ಅಥವಾ 35,600 ಕೋಟಿ ರೂಪಾಯಿ ಆಗಿದೆ.


Click it and Unblock the Notifications