ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೆಂಟರ್ ವಿದ್ಯಾರ್ಥಿಗಳು ಈ ಬಾರಿಯ ಪ್ಲೇಸ್ಮೆಂಟ್ಸ್ ನಲ್ಲಿ ದಾಖಲೆಯ ಅತ್ಯುತ್ತಮ ಪ್ಯಾಕೇಜ್ ಪಡೆದುಕೊಂಡಿರುವ ಸುದ್ದಿಗಳು ನಿಮಗೆ ಗೊತ್ತಿದೆ. ವಿಶೇಷವೆಂದರೆ ಐಐಟಿ ಮಾತ್ರವಲ್ಲದೇ ಈ ಬಾರಿ ಭಾರತದ ಅನೇಕ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಈ ವರ್ಷ ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ ಉನ್ನತ ಉದ್ಯೋಗ ಆಫರ್‌ಗಳನ್ನು ಪಡೆದುಕೊಂಡಿದ್ದಾರೆ.
ಜಾಗತಿಕ ಆರ್ಥಿಕತೆಯು ಆರ್ಥಿಕ ಹಿಂಜರಿತದಿಂದ ಹಲವು ಬೃಹತ್ ಕಂಪನಿಗಳಲ್ಲಿ ಉದ್ಯೋಗಿಗಳ ಲೇ ಆಫ್ ಸುದ್ದಿ ಬರುತ್ತಲೇ ಇರುವಾಗ ಈ ಬಾರಿಯ ಪ್ಲೇಸ್ಮೆಂಟ್ಸ್ ಸೀಸನ್‌ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಈ ಸಾಧನೆ ಅಮೋಘವಾಗಿದೆ.

ಇನ್ನು ಐಐಟಿ ವಿದ್ಯಾರ್ಥಿಗಳು ಮಾತ್ರವಲ್ಲದೇ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ದಿಯೋರ್ವ ಇದೇ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಮೆಟ್ರೊ ಸಿಟಿ ಆರ್‌ವಿ ಇಂಜಿನಿಯರಿಂಗ್ ಕಾಲೇಜಿನ ರಕ್ಷಿತ್ ದತ್ತಾತ್ರೇಯ ಹೆಗ್ಡೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ಲೇಸ್‌ಮೆಂಟ್ ಪ್ಯಾಕೇಜ್‌ಗಳನ್ನು ಪಡೆದ ವಿದ್ಯಾರ್ಥಿಗಳಲ್ಲಿಓರ್ವರಾಗಿ ಹೊರಹೊಮ್ಮಿದ್ದಾರೆ.
ಆರ್‌ವಿಸಿಇನಲ್ಲಿ ಇನ್‌ಫಾರ್ಮೆಶನ್ ಟೆಕ್ನಾಲಜಿಯಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ (ಬಿಇ) ವ್ಯಾಸಂಗ ಮಾಡುತ್ತಿರುವ ರಕ್ಷಿತ್ ಹೆಗ್ಡೆ ಪ್ರಸ್ತುತ ಐದನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾರೆ. ರಕ್ಷಿತ್ 90 ಲಕ್ಷ ರೂ ವಾರ್ಷಿಕ ಸಂಬಳದ ಉದ್ಯೋಗದ ಆಫರ್ ಪಡೆದುಕೊಂಡಿದ್ದಾರೆ. ಅಮೇರಿಕಾದ ನ್ಯೂಯಾರ್ಕ್‌ನಲ್ಲಿ ಪ್ರಧಾನ ಹೊಂದಿರುವ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿ UiPath ರಕ್ಷಿತ್‌ಗೆ ಈ ದಾಖಲೆಯ ಉದ್ಯೋಗದ ಆಫರ್ ನೀಡಿದೆ.
ಈ ಕಂಪನಿಯು ರೊಬೋಟಿಕ್ ಪ್ರೋಸೆಸ್ ಆಟೋಮೇಷನ್ (RPA) ಸಾಫ್ಟ್‌ವೇರ್ ಅನ್ನು ಉತ್ಪಾದಿಸುತ್ತದೆ. ಕಾಲೇಜು ದಿನಗಳಲ್ಲಿ, ರಕ್ಷಿತ್ "ಸ್ಟಡಿಬೇರ್" ಅನ್ನುವ ಸಾಪ್ಟ್ ವೇರ್ ಆಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದು ಇದರ ಕೋ- ಫೌಂಡರ್ ಕೂಡಾ ಆಗಿದ್ದಾರೆ. ಸ್ಟಡಿಬೇರ್ ಕಂಪ್ಯೂಟರ್ ಸೈನ್ಸ್ ಸಂಬಂಧಿತ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉತ್ಪಾದಕತೆ ವೇದಿಕೆ ಯಾಗಿದ್ದು ಇದರ ಗುರಿಯು ಒಬ್ಬ ಇಂಜಿನಿಯರ್ (ಐಟಿ) ಆಗಬಯಸುವವರ ಮಾರ್ಗವನ್ನು ಬದಲಾಯಿಸುವುದು ಎಂದು ಹೇಳಿದ್ದಾರೆ.
ರಕ್ಷಿತ್ ಹೆಗ್ಡೆ ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ UiPathನಲ್ಲಿ 'ಅಪ್ ಕಮ್ನಿಂಗ್ SWE ಇಂಟರ್ನ್' ಆಗಿದ್ದಾರೆ. ಇದಲ್ಲದೇ ಮೇಕ್ ಎ ಡಿಫರೆನ್ಸ್ ನ ಎಕಡಮಿಕ್ ಸಪೋರ್ಟ್ ನ ಲಾಭರಹಿತ ಸ್ವಯಂಸೇವಕರಾಗಿದ್ದಾರೆ, ಜೊತೆಗೆ ಲಾಭರಹಿತ ಕೋವಿಡ್ ಸೇವೆಯ ಸ್ವಯಂಸೇವಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.


Click it and Unblock the Notifications