ಅಜ್ಜಿ ಮಾಡಿದ ದೊನ್ನೆ ಬಿರಿಯಾನಿ ತಿಂದು ಬೆಳದವರು ರಮ್ಯಾ ರವಿ. ಕರ್ನಾಟಕದ ಶೈಲಿಯ ಬಿರಿಯಾನಿಯು ಲಕ್ನೋ, ಹೈದರಾಬಾದ್ ಬಿರಿಯಾನಿಯಂತೆ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರಲಿಲ್ಲ. ಆದರೆ, ರಮ್ಯಾ ಅವರು ಬಿರಿಯಾನಿ ಬಿಸಿನೆಸ್ ಪ್ರಾರಂಭಿಸುವುದಕ್ಕೆ ನಿರ್ಧರಿಸಿದರು. ಕೊರೊನಾ ಸಾಂಕ್ರಾಮಿಕ ಪಿಡುಗು ಕಾಣಿಸಿಕೊಂಡ ಸಮಯದಲ್ಲಿ ಅವರು ತಮ್ಮ ಬಿರಿಯಾನಿಯನ್ನು ಲಾಂಚ್ ಮಾಡಿದ್ದು, ಅದು ಅತ್ಯಂತ ಕಡಿಮೆ ಅವಧಿಯಲ್ಲಿ ಯಶಸ್ವಿ ಕೂಡ ಆಗಿದೆ.
ರಮ್ಯಾ ಅವರು 2020ರಲ್ಲಿ ಕೇವಲ 5 ಲಕ್ಷ ರೂಪಾಯಿ ಬಂಡವಾಳದೊಂದಿಗೆ ವ್ಯಾಪಾರವನ್ನು ಪ್ರಾರಂಭಿಸಿದರು. 2021-22ರಲ್ಲಿ ಕಂಪನಿಯ ವಹಿವಾಟು 10 ಕೋಟಿ ರೂಪಾಯಿಗೆ ತಲುಪಿದೆ. ಈ ಕಂಪನಿಯು ಬೆಂಗಳೂರನ್ನು ಕೇಂದ್ರೀಕರಿಸಿ ತನ್ನ ವ್ಯವಹಾರವನ್ನು ನಡೆಸುತ್ತಿದೆ. ರಮ್ಯಾ ಅವರ ಕುಟುಂಬವು ಚೈನ್ ಆಪ್ ಹೋಟಲ್ಸ್ ಅನ್ನು ಹೊಂದಿದೆ. ಹೀಗಾಗಿ, ಅವರು ತಮ್ಮದೇ ಸ್ವಂತ ವ್ಯಾಪಾರವನ್ನು ಪ್ರಾರಂಭಿಸಲು ನಿರ್ಧರಿಸಿದ್ದರು.

ರಮ್ಯಾ ಅವರು ಬೆಂಗಳೂರಿನಲ್ಲಿ ಹುಟ್ಟಿದ್ದಾರೆ. ಅವರು ಇಬ್ಬರು ಸಹೋದರಿಯನ್ನು ಹೊಂದಿದ್ದಾರೆ. ಅವರ ಹೆಸರು ಶ್ವೇತಾ ಹಾಗೂ ರವೀನಾ. ಅವರು ತಮ್ಮ ಶಾಲಾ ಶಿಕ್ಷಣವನ್ನು ವ್ಯಾಲಿ ಸ್ಕೂಲ್‌ನಲ್ಲಿ ಮಾಡಿದ್ದಾರೆ. ಬಳಿಕ ಅವರು ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಿಂದ ಬಿಕಾಂ ಪದವಿಯನ್ನು ಪಡೆದುಕೊಂಡಿದ್ದಾರೆ.
ರಮ್ಯಾ ಹಾಗೂ ಅವರ ಸಹೋದರಿಯರನ್ನು ತಂದೆಯು ಸದಾ ಕಾಲ ಸ್ವಂತ ಉದ್ಯಮ ಸ್ಥಾಪಿಸುವತ್ತ ಪ್ರೇರೇಪಿಸುತ್ತಿದ್ದರು ಎಂಬುದಾಗಿ ಅವರು 2022ರಲ್ಲಿ ಗ್ಲೋಬಲ್ ಇಂಡಿಯನ್‌ಗೆ ತಿಳಿಸಿದ್ದಾರೆ. ಈ ನಡುವೆ ಅವರು ಹಾರ್ವರ್ಡ್ ಯೂನಿವರ್ಸಿಟಿಯಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಅಲ್ಪಾವಧಿಯ ಕೋರ್ಸ್ ಕೂಡ ಮಾಡಿದ್ದಾರೆ.
ರಮ್ಯಾ ಅವರು ತಮ್ಮ ತಂದೆಯ ಕೆಲಸವನ್ನು ನೋಡಿಕೊಂಡು ಅವರಿಂದ ಬಹಳಷ್ಟು ಉದ್ಯಮದ ಕಲೆಗಳನ್ನು ಕಲಿತುಕೊಂಡಿದ್ದಾರೆ. ಅಷ್ಟೇಅಲ್ಲ, ತಮ್ಮ ತಂದೆ ಆರ್. ರವಿಚಂದರ್ ಅವರ ಜತೆಗೂ ಕೆಲಸ ಮಾಡಿದ್ದಾರೆ. ಆ ಮೂಲಕ ತಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸುವುದಕ್ಕೆ ರಮ್ಯಾ ಬಯಸಿದ್ದರು. ಅದರಂತೆ ಅವರು ಆರ್‌ಎನ್‌ಆರ್ ಹೆಸರಿನ ಬಿರಿಯಾನಿಯನ್ನು ಪ್ರಾರಂಭಿಸಿದರು. ತಮ್ಮ ತಂದೆ ಹಾಗೂ ಅಜ್ಜಿಯ ಹೆಸರನ್ನು ಬಳಸಿಕೊಂಡು ತಮ್ಮ ಬಿರಿಯಾನಿ ಉದ್ಯಮಕ್ಕೆ ಈ ಹೆಸರನ್ನು ಇಟ್ಟಿದ್ದಾರೆ.
ಬೆಂಗಳೂರಿನ ನಾಗರಬಾವಿಯ 200 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ರಮ್ಯಾ ಅವರು ಆರ್‌ಎನ್‌ಆರ್ ಬಿರಿಯಾನಿಯನ್ನು ಹುಟ್ಟು ಹಾಕಿದ್ದರು. ಜತೆಗೆ ಒಬ್ಬರೇ ಒಬ್ಬರು ಅಡುಗೆ ಕೆಲಸದವರನ್ನು ಇಟ್ಟುಕೊಂಡಿದ್ದರು. ಆ ಮೂಲಕ ವ್ಯಾಪಾರದಲ್ಲಿ ಯಶಸ್ಸನ್ನು ಸಾಧಿಸಲು ಪ್ರಾರಂಭಿಸಿದರು. ಮೊದಲ ತಿಂಗಳಲ್ಲೇ 10000 ಆರ್ಡರ್ ಅನ್ನು ಡೆಲಿವರಿ ಮಾಡಿದರು.
ಬೇಡಿಕೆ ಹೆಚ್ಚಾದಂತೆ ಅದಕ್ಕೆ ಪೂರಕವಾಗಿ ಕಿಚನ್ ಅನ್ನು ವಿಸ್ತರಿಸುತ್ತಾ ಹೋದರು. 2021ರಲ್ಲಿ ಬೆಂಗಳೂರಿನ ಜಯನಗರದಲ್ಲಿ ರೆಸ್ಟೊರೆಂಟ್‌ವೊಂದನ್ನು ಕೂಡ ಪ್ರಾರಂಭಿಸಿದರು.
ರಮ್ಯಾ ಅವರು ಆಹಾರವನ್ನು ಟಿನ್ ಬಾಕ್ಸ್‌ನಲ್ಲಿ ಪೂರೈಕೆ ಮಾಡುತ್ತಾರೆ. ಇದು ಗ್ರಾಹಕರನ್ನು ಸೆಳೆಯುವುದಕ್ಕೂ ಕಾರಣವಾಗಿದೆ. ಪ್ರಸ್ತುತ ಯಶಸ್ವಿ ಉದ್ಯಮಿಯಾಗಿ ಬೆಳೆದಿರುವ ರಮ್ಯಾ ಅವರು ಉತ್ತಮ ಭರತನಾಟ್ಯ ಕಲಾವಿದೆ ಕೂಡ ಆಗಿದ್ದಾರೆ.
ಬಿರಿಯಾನಿ ಮಾರಾಟದಿಂದ ದಿನಕ್ಕೆ 37 ಲಕ್ಷ ಆದಾಯ!
ಇನ್ನೋರ್ವ ವ್ಯಕ್ತಿಯೂ ಕೂಡಾ ಬಿರಿಯಾನಿ ಮಾರಾಟದಿಂದ ದಿನಕ್ಕೆ 37 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾರೆ. ವಿಶಾಲ್ ಜಿಂದಾಲ್ ಅವರು 2015ರಲ್ಲಿ ಬಿರಿಯಾನಿ ಬೈ ಕಿಲೋ ಅನ್ನು ಸ್ಥಾಪಿಸಿದ್ದು, ಇದು ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುವ ಫುಡ್ ಬ್ರಾಂಡ್ ಆಗಿದೆ. ಈ ಕಂಪನಿಯು ಆರಂಭ ಆದಾಗಿನಿಂದ ಅದರ ಆದಾಯದಲ್ಲಿ ಏರಿಕೆಯಾಗುತ್ತ ಹೋಗಿದೆ.
ಆದರೂ ಕಳೆದ ಕೆಲವು ವರ್ಷಗಳಿಂದ ಅವರ ಈ ಬ್ರಾಂಡ್ ಸಾಧಿಸಿರುವ ಯಶಸ್ವಿನಿಂದ ಅವರು ತೃಪ್ತರಾಗಿಲ್ಲ. ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಅವರು 1000 ಕೋಟಿ ರೂ. ವಹಿವಾಟು ನಡೆಸಲಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications